ಕೋಚ್ ನವಲ್ ಸಿಂಗ್ ವಿರುದ್ದ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ದೂರು ನೀಡಿದ ನೀರಜ್ ಚೋಪ್ರಾ!
ಜಾವೆಲಿನ್ ಥ್ರೋ ಪಟುಗಳಾದ ಸುಮಿತ್ ಆಂಟಿಲ್ ಮತ್ತು ನೀರಜ್ ಚೋಪ್ರಾ ಅವರು ಜಾವೆಲಿನ್ ಥ್ರೋ ತರಬೇತುದಾರ ನವಲ್ ಸಿಂಗ್ ವಿರುದ್ಧ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ನವಲ್ ಸಿಂಗ್ ಮದ್ಯದ ಅಮಲಿನಲ್ಲಿ ಇತರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿದ ಆರೋಪ ಹೊತ್ತಿದ್ದಾರೆ.
ಕೋಚ್ ನವಲ್ ಸಿಂಗ್ ವಿರುದ್ಧ ನೀರಜ್ ಚೋಪ್ರಾ ದೂರು. -
ನವದೆಹಲಿ: ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಅವರು ದೇಶದ ಅಗ್ರ ಜಾವೆಲಿನ್ ತಾರೆಗಳಲ್ಲಿ ಒಬ್ಬರು, ಅವರು ಜಾವೆಲಿನ್ ತರಬೇತುದಾರ ನವಲ್ ಸಿಂಗ್ (Naval Singh) ವಿರುದ್ಧ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (SAI) ದೂರು ನೀಡಿದ್ದಾರೆ. ಈ ಸ್ಟಾರ್ ಅಥ್ಲಿಟ್‌ಗಳು ತರಬೇತುದಾರರ ಮೇಲೆ ಮೌಖಿಕ ನಿಂದನೆ ಮತ್ತು ಕಿರುಕುಳದ ಆರೋಪ ಮಾಡಿದ್ದಾರೆ. ನೀರಜ್ ಜೊತೆಗೆ, ಎರಡು ಬಾರಿ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಸುಮಿತ್ ಆಂಟಿಲ್ ಕೂಡ ಈ ವಿಷಯದ ಬಗ್ಗೆ ಸಾಯ್‌ಗೆ ಪತ್ರ ಬರೆದು, ತರಬೇತುದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
*ದಿ ಬ್ರಿಡ್ಜ್* ವರದಿಯ ಪ್ರಕಾರ, ನೀರಜ್ ಚೋಪ್ರಾ ಮತ್ತು ಸುಮಿತ್ ಆಂಟಿಲ್ ಈ ವಿಷಯದ ಬಗ್ಗೆ ಮುಂದಾಳತ್ವ ವಹಿಸಿ ಏಪ್ರಿಲ್ 10 ರಂದು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ(SAI)ಗೆ ಔಪಚಾರಿಕವಾಗಿ ಲಿಖಿತ ದೂರು ಸಲ್ಲಿಸಿದ್ದರು. ಈ ವಿಷಯದ ಬಗ್ಗೆ ಸಾಯ್ ಮತ್ತು ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಅಧಿಕಾರಿಗಳನ್ನು ಸಹ ಸಂಪರ್ಕಿಸಲಾಯಿತು. ನೀರಜ್ ತಮ್ಮ ಮತ್ತು ಅವರ ಕುಟುಂಬದ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಆರೋಪಿಸಿದ್ದಾರೆ. ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಈ ವಿಷಯದಲ್ಲಿ ನಿರ್ಣಾಯಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Shivam Lohakare: ನೀರಜ್ ಚೋಪ್ರಾ ದಾಖಲೆ ಮುರಿದ 20 ವರ್ಷದ ಶಿವಂ ಲೋಹಕರೆ
"ಈ ವಿಷಯದಲ್ಲಿ ನಾನು ನನ್ನ ಸಹ ಕ್ರೀಡಾಪಟುಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇನೆ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮತ್ತು ಕ್ರೀಡೆಯಲ್ಲಿ ಘನತೆ, ಶಿಸ್ತು ಮತ್ತು ಗೌರವವನ್ನು ಎತ್ತಿಹಿಡಿಯುವುದು ಅತ್ಯಗತ್ಯ ಎಂದು ನಂಬುವ ಕ್ರೀಡಾಪಟುವಾಗಿ ನಾನು ಇದನ್ನು ಬರೆಯುತ್ತಿದ್ದೇನೆ. ಕೋಚ್ ನವಲ್ ಸಿಂಗ್ ಮಾಡಿದ ಹೇಳಿಕೆಗಳು ತಪ್ಪಾಗಿವೆ ಮಾತ್ರವಲ್ಲದೆ ನಾಚಿಕೆಗೇಡಿನವು ಕೂಡ." ಎಂದು ನೀರಜ್ ಚೋಪ್ರಾ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
🚨#Breaking:
— TarkKshatriya (@OpJakharBeyoung) April 17, 2026
THIS IS BEYOND SHOCKING STUFF!
India's topmost Javelin Throwers including Neeraj Chopra & Sumit Antil has alleged mental harassment and repetitive use of abusive language by javelin coach Naval Singh pic.twitter.com/GnNDGHdCoO
ಭಾರತೀಯ ಕ್ರೀಡಾ ಪ್ರಾಧಿಕಾರ ಮೂಲಗಳ ಹೇಳಿಕೆ
ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಸುಮಿತ್ ಅಂಟಿಲ್ ಅವರು ಕೋಚ್ ನವಲ್ ಸಿಂಗ್ ವಿರುದ್ಧ ದೌರ್ಜನ್ಯದ ಆರೋಪ ಮಾಡಿರುವುದಾಗಿ ಭಾರತೀಯ ಕ್ರೀಡಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.
“ಸುಮಿತ್ ಅಂಟಿಲ್ ಅವರು ನೀಡಿದ ದೂರು ನಮಗೆ ಲಭ್ಯವಾಗಿದೆ. ಈ ಆರೋಪವನ್ನು ನೀರಜ್ ಚೋಪ್ರಾ ಸೇರಿದಂತೆ ಇತರ ಕ್ರೀಡಾಪಟುಗಳೂ ಬೆಂಬಲಿಸಿದ್ದಾರೆ. ಈ ಕೋಚ್ ಸಾಯಿ ಸಂಸ್ಥೆಯ ಉದ್ಯೋಗಿ ಅಲ್ಲ. ಅವರು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿರುವ ರಾಷ್ಟ್ರೀಯ ಕೋಚಿಂಗ್ ಶಿಬಿರದ ಭಾಗವಾಗಿ ಮತ್ತೊಬ್ಬ ಪ್ರಮುಖ ಕ್ರೀಡಾಪಟುವಿಗೆ ತರಬೇತಿ ನೀಡುತ್ತಿದ್ದಾರೆ,” ಎಂದು ಸಾಯಿ ಮೂಲಗಳು ತಿಳಿಸಿವೆ.