ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೀನು ತಿಂದಿದ್ದು ಇಲಿ, ಶಂಕಿಸಿದ್ದು ಸ್ನೇಹಿತನ ಮೇಲೆ: ಗೆಳೆಯನನ್ನು ಕೊಂದು ಇಬ್ಬರು ಪರಾರಿ; ಮುಂಬೈಯಲ್ಲಿ ಬೆಚ್ಚಿಬೀಳಿಸುವ ಘಟನೆ

Crime News: ಮೀನು ಕರಿ ಒಬ್ಬನೇ ತಿಂದು ಮುಗಿಸಿದ್ದಾನೆಂದು ಶಂಕಿಸಿ, ಕೋಪಗೊಂಡ ಗೆಳೆಯರಿಬ್ಬರು ತಮ್ಮ ಸ್ನೇಹಿತನನ್ನೇ ಕೊಲೆಗೈದ ಆಘಾತಕಾರಿ ಘಟನೆ ಮುಂಬೈಯಲ್ಲಿ ನಡೆದಿದೆ. ಫೆಬ್ರವರಿ 24ರಂದು ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಅಫ್ಸರ್ ಎಂದು ಗುರುತಿಸಲಾಗಿದೆ. ಇಲಿಗಳು ಪ್ಯಾನ್‌ನಲ್ಲಿದ್ದ ಬೇಯಿಸಿದ ಮೀನನ್ನು ತಿಂದು ಖಾಲಿ ಮಾಡಿದ್ದವು.

ಮೀನು ತಿಂದಿದ್ದಾನೆ ಎಂದು ಶಂಕಿಸಿ ಗೆಳೆಯನನ್ನೇ ಕೊಂದ ಪಾಪಿಗಳು

ಸೇಹಿತನನ್ನು ಕೊಂದ ಆರೋಪಿಗಳು ಅರೆಸ್ಟ್ -

Priyanka P
Priyanka P Mar 14, 2026 5:59 PM

ಮುಂಬೈ, ಮಾ. 14: ಮೀನು ಕರಿಯನ್ನು ಒಬ್ಬನೇ ತಿಂದು ಮುಗಿಸಿದ್ದಾನೆಂದು ಶಂಕಿಸಿ, ಕೋಪಗೊಂಡ ಗೆಳೆಯರಿಬ್ಬರು ತಮ್ಮ ಸ್ನೇಹಿತನನ್ನೇ ಕೊಲೆಗೈದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈಯಲ್ಲಿ ನಡೆದಿದೆ (Crime News). 35 ವರ್ಷದ ವ್ಯಕ್ತಿಯನ್ನು ಅವನ ಇಬ್ಬರು ಸ್ನೇಹಿತರು ಹೊಡೆದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.

ಫೆಬ್ರವರಿ 24 ರಂದು ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಅಫ್ಸರ್ ಎಂದು ಗುರುತಿಸಲಾಗಿದೆ. ಆತನ ಇಬ್ಬರು ಸ್ನೇಹಿತರಾದ ಸುರೇಶ್ ಮತ್ತು ರಾಜೇಶ್ ರಮೇಶ್‌ನಾಥ್ ಅಲಿಯಾಸ್ ನೇಪಾಳಿ ಕೃತ್ಯವೆಸಗಿದವರು. ಇವರಿಬ್ಬರು ಮುಂಬೈಯ ಗೋರೆಗಾಂವ್‌ನಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ಮೀನು ಅಡುಗೆ ಮಾಡಿದ್ದರು. ಇವರಿಬ್ಬರು ಅಡುಗೆ ಮಾಡುತ್ತಿದ್ದ ವೇಳೆ ಮೃತ ವ್ಯಕ್ತಿ ಅಫ್ಸರ್ ಮದ್ಯ ಸೇವಿಸುತ್ತಿದ್ದ.

ಸ್ವಲ್ಪ ಸಮಯದ ನಂತರ, ಮೂವರೂ ನಿದ್ರೆಗೆ ಜಾರಿದರು. ಈ ಸಮಯದಲ್ಲಿ, ಇಲಿಗಳು ಪ್ಯಾನ್‌ನಲ್ಲಿದ್ದ ಬೇಯಿಸಿದ ಮೀನನ್ನು ತಿಂದು ಖಾಲಿ ಮಾಡಿದವು. ಸುರೇಶ್ ಮತ್ತು ರಾಜೇಶ್ ಊಟ ಮಾಡಲು ಎದ್ದಾಗ, ಪ್ಯಾನ್‌ನಲ್ಲಿ ಮೀನು ಕರಿ ಖಾಲಿಯಾಗಿತ್ತು. ಅಫ್ಸರ್ ಅದನ್ನೆಲ್ಲ ತಿಂದಿದ್ದಾನೆ ಎಂದು ಅನುಮಾನಿಸಿ, ಅವರು ಅವನನ್ನು ಎಬ್ಬಿಸಿದರು. ಈ ವೇಳೆ ಮೂವರಿಗೂ ಜಗಳವಾಗಿದೆ. ಕೋಪದ ಭರದಲ್ಲಿ, ಇಬ್ಬರು ಆರೋಪಿಗಳು ಅಫ್ಸರ್‌ಗೆ ಚೆನ್ನಾಗಿ ಹೊಡೆದಿದ್ದಾರೆ. ನಂತರ ಕಲ್ಲಿನಿಂದ ತಲೆಗೆ ಜಜ್ಜಿ ಕೊಂದು ಹಾಕಿದರು.

ವೈರ್‌ನಿಂದ ಕುತ್ತಿಗೆ ಬಿಗಿದು ಪ್ರಿಯತಮೆಯ ಕೊಲೆ ಮಾಡಿದ ಪ್ರಿಯಕರ

ಕೊಲೆ ಮಾಡಿದ ನಂತರ ತಕ್ಷಣವೇ ಇಬ್ಬರು ಆರೋಪಿಗಳು ಹರಿಯಾಣಕ್ಕೆ ಪರಾರಿಯಾಗಿದ್ದಾರೆ. ವನ್ರೈ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ಶೋಧ ಆರಂಭಿಸಿದರು. ಮೃತ ವ್ಯಕ್ತಿ ಹಾಗೂ ಇಬ್ಬರು ಆರೋಪಿಗಳು ಗುಜಿರಿ ವ್ಯಾಪಾರಿಗಳಾಗಿದ್ದರು. ಸುರೇಶ್ ಹರಿಯಾಣದ ಕೈತಾಲ್ ನಿವಾಸಿಯಾಗಿದ್ದರೆ, ರಾಜೇಶ್ ನೇಪಾಳದ ನಿವಾಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಆರೋಪಿಗಳ ಬಳಿ ಮೊಬೈಲ್ ಫೋನ್ ಅಥವಾ ಯಾವುದೇ ಗುರುತಿನ ದಾಖಲೆಗಳು ಇಲ್ಲದಿರುವುದು ತನಿಖೆಯನ್ನು ಇನ್ನಷ್ಟು ಜಟಿಲಗೊಳಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಸುಮಾರು 50 ಕಸ ಹೆಕ್ಕುವವರನ್ನು ವಿಚಾರಣೆ ನಡೆಸಿದ ನಂತರ, ಪೊಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಸುರೇಶ್ ಹರಿಯಾಣದಲ್ಲಿ ಪತ್ತೆಯಾದರೆ, ರಾಜೇಶ್‌ನನ್ನು ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದನು.

ತನಿಖೆಯಲ್ಲಿ ಆರೋಪಿ ರಾಜೇಶ್ ಈ ಹಿಂದೆ ಕೊಲೆ ಮತ್ತು ಸುಲಿಗೆ ಸೇರಿದಂತೆ ಹಲವಾರು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.