ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Actor Upendra: ಬೆಳಗ್ಗೆ ಲಿಂಕ್ ಪೋಸ್ಟ್ ಮಾಡ್ತೀನಿ, ತಕ್ಷಣ ಡಿಲೀಟ್‌ ಮಾಡ್ತೀನಿ; ಜನರ ತಲೆಗೆ ಹುಳಬಿಟ್ಟ ಉಪೇಂದ್ರ!

Actor Upendra: ನಟ ಉಪೇಂದ್ರ (Actor Upendra) ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ವಾರ್ನಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ (Link Post) ಪೋಸ್ಟ್ ಮಾಡಿ, ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡುವುದಾಗಿ ತಿಳಿಸಿದ್ದು, ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ. ಹೀಗ್ಯಾಕೆ ಅಂದ್ರು?

ಬೆಳಗ್ಗೆ ಲಿಂಕ್ ಪೋಸ್ಟ್ ಮಾಡ್ತೀನಿ, ತಕ್ಷಣ ಡಿಲೀಟ್‌ ಮಾಡ್ತೀನಿ; ಉಪೇಂದ್ರ!

ನಟ ಉಪೇಂದ್ರ -

Yashaswi Devadiga
Yashaswi Devadiga Mar 14, 2026 7:28 PM

ನಟ ಉಪೇಂದ್ರ (Actor Upendra) ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ವಾರ್ನಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ (Link Post) ಪೋಸ್ಟ್ ಮಾಡಿ, ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ (Delete) ಮಾಡುವುದಾಗಿ ತಿಳಿಸಿದ್ದು, ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ. ಹೀಗ್ಯಾಕೆ ಅಂದ್ರು?

ಉಪೇಂದ್ರ ಪೋಸ್ಟ್‌ನಲ್ಲಿ ಎಚ್ಚರಿಕೆ!!!

"ನಾಳೆ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ. ಇದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಅಂತ ನನಗೆ ಸೂಚನೆ ಇದೆ, ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದ್ರೂ ಮಾಡಬಹುದು. ನೀವು ಇದನ್ನ ನೋಡಿದ್ರೆ ಬೇರೆ ಯಾರ ಹತ್ತಿರವೂ ಹೇಳ್ಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ. ಲಿಂಕ್ ನೋಡಿ ಸುಮ್ಮನಿದ್ದುಬಿಡಿ."ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Jaggesh: ಮೊಮ್ಮಗನ ಜೊತೆ ಸಂತೋಷದ ಕ್ಷಣ ಹಂಚಿಕೊಂಡ ಜಗ್ಗೇಶ್‌! ತಾತನನ್ನು ನೆನದು ಭಾವುಕ

'ವಾರ್ನಿಂಗ್' ಪೋಸ್ಟ್

ಕನ್ನಡ ಚಿತ್ರರಂಗದ 'ಬುದ್ಧಿವಂತ' ಎಂದೇ ಕರೆಸಿಕೊಳ್ಳುವ ರಿಯಲ್ ಸ್ಟಾರ್ ಉಪೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು 'ವಾರ್ನಿಂಗ್' ಪೋಸ್ಟ್ ಫ್ಯಾನ್ಸ್‌ಗೆ ಕುತೂಹಲಕ್ಕೆ ಕಾರಣವಾಗಿದೆ. ಹೊಸ ಸಿನಿಮಾ ಘೋಷಣೆ ಮಾಡಬಹುದಾ? ಈಗಾಗಲೇ ಮಾಡಿರುವ ಸಿನಿಮಾದ ಟೀಸರ್‌ ಲುಕ್‌ ಏನಾದ್ರೂ ಬರಬಹುದಾ ಅಂತ ಕಮೆಂಟ್‌ ಮಾಡುತ್ತಿದ್ದಾರೆ. ಪಕ್ಷ 'ಪ್ರಜಾಕೀಯ'ದ ಬಗ್ಗೆ ಏನಾದರೂ ಇರಬಹುದಾ? ಅಂತ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Anasuya Bharadwaj: ನಟಿ, ನಿರೂಪಕಿ ಅನಸೂಯಾ ವಿರುದ್ಧ ಅಶ್ಲೀಲ ಪೋಸ್ಟ್; ಇಬ್ಬರ ಬಂಧನ

ಸಿನಿಮಾ ವಿಚಾರಕ್ಕೆ ಬರೋದಾದರೆ, ಉಪೇಂದ್ರ ಅವರು ನಿರ್ದೇಶನದ ಕ್ಯಾಪ್ ತೊಟ್ಟು 'UI' ಸಿನಿಮಾ ಮಾಡಿದ್ದರು.ತಮಿಳಿನಲ್ಲಿ ಕೂಲಿ, ತೆಲುಗುವಿನಲ್ಲಿ ಆಂಧ್ರ ಕಿಂಗ್‌ ತಾಲೂಕಾ ಹಾಗೂ ಕನ್ನಡದಲ್ಲಿ 45 ಸಿನಿಮಾದಲ್ಲಿ ನಟಿಸಿದ್ದರು. ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿಯಲ್ಲಿ ರಜನಿಕಾಂತ್ ಮಿತ್ರನಾದ ಕಲೀಶಾ ಪಾತ್ರದಲ್ಲಿ ನಟಿಸಿದ್ದರು.