ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026: ಆರ್‌ಸಿಬಿ ತಂಡದ ಅಧಿಕೃತ ಜೆರ್ಸಿ ಖರೀದಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ..

How to buy RCB Jersey?: ಬಹುನಿರೀಕ್ಷಿತ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಮಾರ್ಚ್‌ 28 ರಂದು ಆರಂಭವಾಗಲಿಗೆ. ಹತ್ತೊಂಬತ್ತನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಕಾದಾಟ ನಡೆಸಲಿವೆ. ಇದಕ್ಕೂ ಮುನ್ನ ಆರ್‌ಸಿಬಿ ಜೆರ್ಸಿ ಖರೀದಿಸುವುದು ಹೇಗೆಂದು ಮಾಹಿತಿ ನೀಡಲಾಗಿದೆ.

RCB ಜೆರ್ಸಿಯನ್ನು ಖರೀದಿಸುವುದು ಹೇಗೆ? ಇಲ್ಲಿದೆ ಮಾಹಿತಿ!

ಆರ್‌ಸಿಬಿ ಜೆರ್ಸಿ ಖರೀದಿಸುವುದು ಹೇಗೆ? -

Profile
Ramesh Kote Mar 14, 2026 7:10 PM

ಬೆಂಗಳೂರು: Royal Challengers Bengaluru ತಂಡ, 2025ರಲ್ಲಿ ತನ್ನ ಚೊಚ್ಚಲ Indian Premier League ಟ್ರೋಫಿಯನ್ನು ಗೆದ್ದು, ದೀರ್ಘಕಾಲದ ಟ್ರೋಫಿ ಬರವನ್ನು ಕೊನೆಗೊಳಿಸಿತು. ಆರ್‌ಸಿಬಿಗೆ ಅತ್ಯಂತ ನಿಷ್ಠಾವಂತ ಅಭಿಮಾನಿ ಬಳಗವಿದ್ದು, ಈ ಜಯ ಆಟಗಾರರು ಮತ್ತು ಅಭಿಮಾನಿಗಳಿಬ್ಬರಿಗೂ ಕನಸು ನನಸಾದ ಕ್ಷಣವಾಗಿತ್ತು. ಇದೀಗ ಟ್ರೋಫಿ ಗೆದ್ದ ಬಳಿಕ, ಮುಂದಿನ ಸೀಸನ್‌ನಲ್ಲಿಯೂ ಟ್ರೋಫಿಯನ್ನು ಉಳಿಸಿಕೊಳ್ಳಲು ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಸಿದ್ಧತೆ ನಡೆಸುತ್ತಿದೆ. ಹತ್ತೊಂಬತ್ತನೇ ಆವೃತ್ತಿಯು ಮಾರ್ಚ್‌ 28 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವಣ ಉದ್ಘಾಟನಾ ಪಂದ್ಯದ ಮೂಲಕ ಆರಂಭವಾಗಲಿದೆ.

ಎರಡನೇ ಸಲ ಕಪ್‌ ಗೆಲ್ಲುವ ನಿರೀಕ್ಷೆಯಲ್ಲಿರುವ ಆರ್‌ಸಿಬಿ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ತಂಡದ ಪಂದ್ಯಗಳನ್ನು ಕಣ್ತುಂಬಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಅಂದ ಹಾಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಪಂದ್ಯಗಳಿಗೆ ಇನ್ನೂ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಇದರ ಬಗ್ಗೆ ಅಧಿಕೃತ ಮಾಹಿತಿ ಬೀಳಿಲಿದೆ. ಅಂದ ಹಾಗೆ ಕಳೆದ ವರ್ಷ ಸಂಭವಿಸಿದ್ದ ಕಾಲ್ತುಳಿತ ದುರ್ಘಟನೆಯಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಜೀವ ಕಳೆದುಕೊಂಡಿದ್ದರು. ಹಾಗಾಗಿ ಈ ಸಲ ಇಲ್ಲಿ ಪಂದ್ಯಗಳಿಗೆ ಅನುಮತಿ ಸಿಕ್ಕರೂ ಕೇವಲ 5 ಪಂದ್ಯಗಳು ಮಾತ್ರ ಬೆಂಗಳೂರಿನಲ್ಲಿ ನಡೆಯಲಿವೆ. ಇನ್ನುಳಿದ ಎರಡು ತವರು ಪಂದ್ಯಗಳು ರಾಯ್ಪುರದಲ್ಲಿ ನಡೆಯಲಿವೆ.

IPL 2026: ಕ್ರಿಸ್‌ ಗೇಲ್‌-ಡು ಪ್ಲೆಸಿಸ್‌ ಓಪನರ್ಸ್‌! ಆರ್‌ಸಿಬಿಯ ಸಾರ್ವಕಾಲಿಕ ಪ್ಲೇಯಿಂಗ್‌ XI ಕಟ್ಟಿದ ದಿನೇಶ್‌ ಕಾರ್ತಿಕ್‌!

ಆರ್‌ಸಿಬಿ ಜೆರ್ಸಿಯನ್ನು ಖರೀದಿಸಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಹಾಗಾಗಿ ಆರ್‌ಸಿಬಿ ತಂಡದ ಅಧಿಕೃತ ಜೆರ್ಸಿಯನ್ನು ಖರೀದಿಸುವುದು ಹೇಗೆಂದು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಬೆಂಗಳೂರಿನಲ್ಲಿ RCBಯ ಅಧಿಕೃತ ಜೆರ್ಸಿ ಖರೀದಿಸುವುದು ಹೇಗೆ?

ಆರ್‌ಸಿಬಿಯ ಅಧಿಕೃತ ಜೆರ್ಸಿ ಹಾಗೂ ಇತರೆ ಮರ್ಚೆಂಡೈಸ್‌ಗಳನ್ನು ಆನ್‌ಲೈನ್ ಮೂಲಕ ಖರೀದಿಸಬಹುದು.

Royal Challengers Bengaluru ತಂಡದ ಅಧಿಕೃತ ವೆಬ್‌ಸೈಟ್ ತೆರೆಯಿರಿ.

ನಿಮ್ಮ ಖಾತೆಗೆ ಲಾಗಿನ್ ಆಗಿ.

Shop ವಿಭಾಗವನ್ನು ಕ್ಲಿಕ್ ಮಾಡಿ.

ಖರೀದಿಸಲು ಬಯಸುವ ಜೆರ್ಸಿ ಅಥವಾ ಮರ್ಚೆಂಡೈಸ್ ಆಯ್ಕೆಮಾಡಿ.

ನಿಮ್ಮ ವಿಳಾಸ ಮತ್ತು ಅಗತ್ಯ ವಿವರಗಳನ್ನು ನಮೂದಿಸಿ.

ಹಣ ಪಾವತಿ ಮಾಡಿ.

ನಿಮ್ಮ RCB ಅಧಿಕೃತ ಜರ್ಸಿ ನಿಮ್ಮ ಮನೆಗೆ ತಲುಪುತ್ತದೆ.



ಆರ್‌ಸಿಬಿಯ ಅಧಿಕೃತ ಜೆರ್ಸಿಯ ಬೆಲೆ ಎಷ್ಟು?

ಆರ್‌ಸಿಬಿ ತಂಡದ ಅಧಿಕೃತ ಜೆರ್ಸಿಯ ಬೆಲೆ 5,499 ರು ಆಗಿದೆ. ಈ ಜೆರ್ಸಿಯನ್ನು ಆನ್‌ಲೈನ್ ಮೂಲಕ ಖರೀದಿಸಲು ಅವಕಾಶವಿದ್ದು, ಅಭಿಮಾನಿಗಳು ತಮ್ಮ ಹೆಸರನ್ನೂ ಹಾಗೂ ಸಂಖ್ಯೆನ್ನೂ ಮುದ್ರಿಸಿಕೊಳ್ಳಬಹುದು.

ಜೆರ್ಸಿಯನ್ನು Personalise ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಹೆಸರು ಮತ್ತು ಸಂಖ್ಯೆಯನ್ನು ನಮೂದಿಸಬಹುದು. ಆದರೆ ಹೆಸರು ಮತ್ತು ಎರಡು ಅಂಕಿಯ ಸಂಖ್ಯೆಯನ್ನು ಮುದ್ರಿಸಲು ಹೆಚ್ಚುವರಿಯಾಗಿ 399 ಪಾವತಿಸಬೇಕಾಗುತ್ತದೆ. ಈ ಜೆರ್ಸಿ ಎಕ್ಸ್‌ಟ್ರಾ ಸ್ಮಾಲ್ (XS) ರಿಂದ XXL ವರೆಗೆ ಎಲ್ಲಾ ಗಾತ್ರಗಳಲ್ಲಿ ಲಭ್ಯವಿದೆ.