ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಂಗಾ ನದಿಯಲ್ಲಿ ಮಾಂಸಾಹಾರ ತ್ಯಾಜ್ಯ ವಿಲೇವಾರಿ ಮಾಡುವುದು ಹಿಂದೂ ಭಾವನೆಗೆ ಧಕ್ಕೆ ತರುತ್ತದೆ; ಅಲಹಾಬಾದ್‌ ಹೈಕೋರ್ಟ್‌ನಿಂದ ಮಹತ್ವದ ಹೇಳಿಕೆ

ಕಳೆದ ಮಾರ್ಚ್ ತಿಂಗಳಲ್ಲಿ ಇಫ್ತಾರ್ ಕೂಟ ನಡೆಸಿ ಮಾಂಸಾಹಾರ ಎಸೆದ ಐವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಮಾರ್ಚ್ 16ರಂದು ವಾರಾಣಸಿಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಈ ಪ್ರಕರಣವು ಒಂದು ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿರುವುದನ್ನು ನ್ಯಾಯಾಲಯ ಗಮನಿಸಿದೆ ಎಂದು ಹೇಳಿದೆ.

ಗಂಗೆಯಲ್ಲಿ ಮಾಂಸಾಹಾರ ತ್ಯಾಜ್ಯ ಎಸೆದ ಐವರಿಗೆ ಜಾಮೀನು

ಸಂಗ್ರಹ ಚಿತ್ರ -

ಪ್ರಯಾಗರಾಜ್: ಕಳೆದ ಮಾರ್ಚ್ ತಿಂಗಳಲ್ಲಿ ಇಫ್ತಾರ್ ಕೂಟ (Iftar Party) ನಡೆಸಿದ ಬಳಿಕ ಗಂಗಾನದಿಗೆ (Ganga river) ಮಾಂಸಾಹಾರ ತ್ಯಾಜ್ಯ (meat waste) ಎಸೆದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಐವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವಾರಾಣಸಿಯಲ್ಲಿ ಮಾರ್ಚ್ ತಿಂಗಳ 15ರಂದು ಇಫ್ತಾರ್ ಕೂಟ ನಡೆಸಿದ ಮೇಲೆ ಗಂಗಾನದಿಗೆ ತ್ಯಾಜ್ಯ ಎಸೆದಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಮೊಹಮ್ಮದ್ ಆಜಾದ್ ಅಲಿ, ಮೊಹಮ್ಮದ್ ತಹ್ಸೀಮ್, ನಿಹಾಲ್ ಅಫ್ರಿದಿ, ಮೊಹಮ್ಮದ್ ತೌಸೀಫ್ ಅಹ್ಮದ್ ಮತ್ತು ಮೊಹಮ್ಮದ್ ಅನಸ್ ಅವರಿಗೆ ಇದೀಗ ಇದೀಗ ಅಲಹಾಬಾದ್ ಹೈಕೋರ್ಟ್ (Allahabad High Court) ಜಾಮೀನು ಮಂಜೂರು ಮಾಡಿದೆ.

ವಾರಾಣಸಿಯಲ್ಲಿ ಮಾರ್ಚ್ 15ರಂದು ಇಫ್ತಾರ್ ಕೂಟ ನಡೆಸಿದ ಬಳಿಕ ಗಂಗಾ ನದಿಗೆ ತ್ಯಾಜ್ಯ ಎಸೆದಿರುವ ಆರೋಪಿಗಳು ಮತ್ತು ಅವರ ಕುಟುಂಬ ಸದಸ್ಯರು ಕ್ಷಮೆ ಯಾಚಿಸಿದ್ದಾರೆ ಎಂದು ಹೇಳಿರುವ ನ್ಯಾಯಮೂರ್ತಿ ರಾಜೀವ್ ಲೋಚನ್ ಶುಕ್ಲಾ, ಪ್ರಕರಣದ ಸಂಪೂರ್ಣ ಸಂಗತಿಗಳನ್ನು ಆಲಿಸಿ ಆರೋಪಿಗಳಿಗೆ ಯಾವುದೇ ಕ್ರಿಮಿನಲ್ ಪೂರ್ವಾಪರ ಇಲ್ಲದೇ ಇರುವುದರಿಂದ ಮತ್ತು ಅವರು ಈಗಾಗಲೇ ಬಂಧನದ ಅವಧಿ ಪೂರ್ಣಗೊಳಿಸಿದ್ದರಿಂದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಿಎಂ ವಿಜಯ್‌ - ತ್ರಿಶಾ ಬಗ್ಗೆ ಕೇಳಿದ್ದಕ್ಕೆ ಉರಿದುಬಿದ್ದ ನಟಿ ಮಾಳವಿಕಾ ಮೋಹನನ್;‌ ವಿಡಿಯೋ ವೈರಲ್‌!

ಈ ಕುರಿತು ಮೇ 15ರಂದು ಆದೇಶ ಹೊರಡಿಸಿದ ನ್ಯಾಯಮೂರ್ತಿ ಶುಕ್ಲಾ, ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಆಜಾದ್ ಅಲಿ, ಮೊಹಮ್ಮದ್ ತಹ್ಸೀಮ್, ನಿಹಾಲ್ ಅಫ್ರಿದಿ, ಮೊಹಮ್ಮದ್ ತೌಸೀಫ್ ಅಹ್ಮದ್ ಮತ್ತು ಮೊಹಮ್ಮದ್ ಅನಸ್ ಅವರಿಗೆ ಜಾಮೀನು ಮಂಜೂರು ಮಾಡಿರುವುದಾಗಿ ಹೇಳಿದ್ದಾರೆ.

ಆದೇಶದಲ್ಲಿ ಇಫ್ತಾರ್ ಕೂಟದ ಬಗ್ಗೆಯೂ ಉಲ್ಲೇಖಿಸಿರುವ ನ್ಯಾಯಮೂರ್ತಿಗಳು, ಈ ಇಫ್ತಾರ್ ಕೂಟದಲ್ಲಿ ಆಹಾರ ಸೇವಿಸುವಾಗ, ಮಾಂಸಾಹಾರವನ್ನು ಕೂಡ ಸೇವಿಸಲಾಗಿದೆ ಎಂದು ಸಮುದಾಯದ ಸದಸ್ಯರು ತಿಳಿಸಿದ್ದಾರೆ. ಬಳಿಕ ಅವರು ತ್ಯಾಜ್ಯವನ್ನು ಗಂಗಾ ನದಿಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.

ಆರೋಪಿಗಳು ತಮ್ಮ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಅಂತಹ ಯಾವುದೇ ಕೃತ್ಯವನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಅವರ ಕುಟುಂಬ ಸದಸ್ಯರು ಕೂಡ ವಿಷಾದವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಘಟನೆಯ ಕುರಿತು ಬಿಜೆಪಿ ಯುವ ಮೋರ್ಚಾದ ವಾರಣಾಸಿ ಅಧ್ಯಾಯದ ಅಧ್ಯಕ್ಷ ರಜತ್ ಜೈಸ್ವಾಲ್ ಅವರು ಮಾರ್ಚ್ 16ರಂದು ದೂರು ದಾಖಲಿಸಿದ್ದು, ಮುಸ್ಲಿಂ ಸಮುದಾಯದ ತಂಡವೊಂದು ಮಾರ್ಚ್ 15ರಂದು ದೋಣಿಯಲ್ಲಿ ಇಫ್ತಾರ್ ಕೂಟವನ್ನು ನಡೆಸಿ ಬಳಿಕ ತ್ಯಾಜ್ಯವನ್ನು ಪವಿತ್ರ ಗಂಗಾ ನದಿಗೆ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಮೋದಿಗೆ ಸ್ವೀಡನ್‌ನ ಅತ್ಯುನ್ನತ ಗೌರವ 'ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್' ಪ್ರದಾನ

ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ವಿಭಾಗಗಳು ಸೇರಿದಂತೆ ವಿವಿಧ ಕಾನೂನು ನಿಬಂಧನೆಗಳ ಅಡಿಯಲ್ಲಿ ಪೂಜಾ ಸ್ಥಳವನ್ನು ಅಪವಿತ್ರಗೊಳಿಸುವುದು, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಇತ್ಯಾದಿ ಆರೋಪಗಳನ್ನು ದಾಖಲಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ಜಿತೇಂದ್ರ ಕುಮಾರ್ ಸಿನ್ಹಾ ಅವರು ಮೇ 15ರಂದು ಮೂವರು ಆರೋಪಿಗಳಾದ ಮೊಹಮ್ಮದ್ ಸಮೀರ್, ಮೊಹಮ್ಮದ್ ಅಹ್ಮದ್ ರಜಾ ಮತ್ತು ಮೊಹಮ್ಮದ್ ಫೈಜಾನ್ ಅವರಿಗೆ ಜಾಮೀನು ನೀಡಲಾಗಿತ್ತು. ಈ ಹಿಂದೆ ಇದರ ವಿಚಾರಣೆ ನಡೆಸಿದ ವಾರಣಾಸಿಯ ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿತ್ತು.