ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಿನ್ನಾಭರಣ ಕಳ್ಳ, ಖಳನಾಯಕನ ಪಾತ್ರಧಾರಿ: ತಂದೆಯನ್ನೇ ಕೊಂದ ಪಾಪಿಯ ಕರಾಳ ಇತಿಹಾಸ ಬೆಳಕಿಗೆ

Crime News: ತಂದೆ ಜತೆ ನಡೆದ ಜಗಳದ ನಂತರ ಮಗನೇ ಅಪ್ಪನನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಅಕ್ಷತ್ ತಂದೆಯ ಮೃತದೇಹವನ್ನು ಮನೆಯ ಮೂರನೇ ಮಹಡಿಯಿಂದ ನೆಲ ಮಹಡಿಯಲ್ಲಿರುವ ಖಾಲಿ ಕೋಣೆಗೆ ಸ್ಥಳಾಂತರಿಸಿದ್ದ. ಪೊಲೀಸ್ ಮೂಲಗಳ ಪ್ರಕಾರ, ದೇಹವನ್ನು ಛಿದ್ರಗೊಳಿಸಲು ಯಂತ್ರ ಬಳಸಿದ್ದಾನೆ.

ತಂದೆಯನ್ನೇ ಕೊಂದ ಪಾಪಿ ಪುತ್ರನ ಕರಾಳ ಇತಿಹಾಸ

ಮನ್ವೇಂದ್ರ ಸಿಂಗ್ ಮತ್ತು ಅಕ್ಷತ್ ಪ್ರತಾಪ್ ಸಿಂಗ್ (ಸಂಗ್ರಹ ಚಿತ್ರ) -

Priyanka P
Priyanka P Feb 24, 2026 7:18 PM

ಲಖನೌ, ಫೆ. 24: ನೀಲಿ ಡ್ರಮ್‌ನಲ್ಲಿ 50 ವರ್ಷದ ಉದ್ಯಮಿಯ ಕತ್ತರಿಸಿದ ದೇಹವು ಪತ್ತೆಯಾದ ಕೆಲವು ದಿನಗಳ ನಂತರ, ಕೊಲೆಗಾರನ ಬಗ್ಗೆ ಭಯಾನಕ ವಿವರಗಳು ಹೊರ ಹೊಮ್ಮಿವೆ. ಉತ್ತರ ಪ್ರದೇಶದ (Uttar Pradesh) ಲಖನೌದಲ್ಲಿ ಈ ಘಟನೆ ನಡೆದಿದೆ. ಉದ್ಯಮಿಯನ್ನು ಆತನ 21 ವರ್ಷದ ಮಗನೇ ಕೊಲೆ ಮಅಡಿದ್ದಾನೆ. ಔಷಧ ಮತ್ತು ಮದ್ಯದ ವ್ಯವಹಾರ ನಡೆಸುತ್ತಿದ್ದ ಮನ್ವೇಂದ್ರ ಸಿಂಗ್ ಅವರನ್ನು ಫೆಬ್ರವರಿ 20ರ ಮುಂಜಾನೆ ಅವರ ಮಗ ಅಕ್ಷತ್ ಪ್ರತಾಪ್ ಸಿಂಗ್ ಗುಂಡಿಕ್ಕಿ ಕೊಂದಿದ್ದಾನೆ. ಬೆಳಗಿನ ಜಾವ 4:30ರ ಸುಮಾರಿಗೆ ನಡೆದ ಜಗಳದಲ್ಲಿ ಕೊಲೆಯಲ್ಲಿ ಅಂತ್ಯಗೊಂಡಿದೆ (Crime News).

ಗುಂಡಿನ ದಾಳಿಯ ನಂತರ, ಅಕ್ಷತ್ ಮೃತದೇಹವನ್ನು ಮನೆಯ ಮೂರನೇ ಮಹಡಿಯಿಂದ ನೆಲ ಮಹಡಿಯಲ್ಲಿರುವ ಖಾಲಿ ಕೋಣೆಗೆ ಸ್ಥಳಾಂತರಿಸಿದ. ಪೊಲೀಸ್ ಮೂಲಗಳ ಪ್ರಕಾರ, ದೇಹವನ್ನು ಛಿದ್ರಗೊಳಿಸಲು ಯಂತ್ರವನ್ನು ಬಳಸಿದ್ದಾನೆ. ಮೊಣಕಾಲುಗಳ ಕೆಳಗೆ ಕಾಲು, ಎರಡೂ ಕೈಗಳನ್ನು ಕತ್ತರಿಸಿ ತಂದೆಯ ಶಿರಚ್ಛೇದ ಮಾಡಿದನು. ಬಳಿಕ ತುಂಡು ತುಂಡಾದ ದೇಹವನ್ನು ಚೀಲದೊಳಗೆ ಇರಿಸಿ ನೀಲಿ ಡ್ರಮ್ ಒಳಗೆ ತುಂಬಿದ್ದ.

ಕತ್ತರಿಸಿದ ಕೈ-ಕಾಲುಗಳನ್ನು ಚೀಲದಲ್ಲಿ ತುಂಬಿಸಿ ಲಖನೌ ಹೊರವಲಯದಲ್ಲಿರುವ ಸದ್ರೌನಾ ಬಳಿ ವಿಲೇವಾರಿ ಮಾಡಿದ್ದಾನೆ. ಮುಂಡವನ್ನು ಹೊಂದಿರುವ ಡ್ರಮ್ ವಿಲೇವಾರಿ ಮಾಡಲು ಅವನು ಅವಕಾಶಕ್ಕಾಗಿ ಕಾಯುತ್ತಿದ್ದನೆಂದು ಹೇಳಲಾಗಿದೆ. ಮೂಲಗಳು ಹೇಳುವಂತೆ ಅವನು ಈಗಾಗಲೇ 10 ಲೀಟರ್ ಸೀಮೆಎಣ್ಣೆಯನ್ನು ಸಂಗ್ರಹಿಸಿದ್ದು, ಅವಶೇಷಗಳನ್ನು ಸುಡಲು ಯೋಜಿಸುತ್ತಿದ್ದನು. ಆರೋಪಿಯ ಸಹೋದರಿ ಈ ಘಟನೆಗಳನ್ನು ಕಣ್ಣಾರೆ ನೋಡಿದ್ದಾಳೆ. ಯಾರಿಗೂ ಹೇಳದಂತೆ ಮೌನವಾಗಿರಬೇಕೆಂದು ಅಕ್ಷತ್‌ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಿವಮೊಗ್ಗದಲ್ಲಿ ಸಹಪಾಠಿಗಳಿಂದಲೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಕೊಲೆ

ಕೊಲೆಗೆ ಕೆಲವು ದಿನಗಳ ಮೊದಲು, ಆರೋಪಿ ಅಕ್ಷತ್‍ ಮನೆಯಿಂದ ಆಭರಣ ಮತ್ತು ಹಣವನ್ನು ಕದ್ದಿದ್ದನು ಮತ್ತು ಕಳ್ಳತನವನ್ನು ಕೆಲಸದಾಕೆಯ ಮೇಲೆ ಆರೋಪ ಹೊರಿಸಿದ್ದನು. ಇನ್ನು ತನಿಖೆಯ ಗಮನ ಬೇರೆಡೆ ಸೆಳೆಯಲು, ಅವನು ತನ್ನ ತಂದೆ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದ. ಇತರರು ಅವನನ್ನು ನಂಬುವಂತೆ ಮಾಡಲು ಅವನು ವಾಟ್ಸ್‌ಆ್ಯಪ್‌ ಗ್ರೂಪ್ ಸಹ ರಚಿಸಿದ್ದ. ಅದರಲ್ಲಿ ಅವನು ನಾಪತ್ತೆಯಾದವರ ವಿವರ ಪೋಸ್ಟ್‌ ಮಾಡುತ್ತಿದ್ದ. ಪೊಲೀಸ್‌ ತನಿಖೆ ವೇಳೆ ತಾನು ಕೊಲೆ ಮಾಡಿರುವುದನ್ನು ಅಕ್ಷತ್‍ ಒಪ್ಪಿಕೊಂಡಿದ್ದಾನೆ.

ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಂಡವು ಅಪರಾಧದ ಸ್ಥಳವನ್ನು ವಿವರವಾಗಿ ಪರಿಶೀಲಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಇನ್ನೂ ಪೊಲೀಸ್ ವಶದಲ್ಲಿಯೇ ಇದ್ದಾನೆ. ಕಾನೂನಿನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

10ನೇ ತರಗತಿ ವಿದ್ಯಾರ್ಥಿಗೆ 30 ಸೆಕೆಂಡ್‌ನಲ್ಲಿ 27 ಬಾರಿ ಚಾಕುವಿನಿಂದ ಇರಿದ ಅಪ್ರಾಪ್ತರು

ಅಕ್ಷತ್‌ಗೆ ಅಧ್ಯಯನದಲ್ಲಿ ಆಸಕ್ತಿ ಇರಲಿಲ್ಲ. ವೈದ್ಯನಾಗಬೇಕೆಂಬ ತನ್ನ ತಂದೆಯ ಆಸೆಯನ್ನು ಅವನು ವಿರೋಧಿಸಿದ್ದ. ಇದು ಅವರಿಬ್ಬರ ನಡುವೆ ಜಗಳಕ್ಕೆ ಕಾರಣವಾಗಿತ್ತು. ಉದ್ಯಮಿಯು ತನ್ನ ಮಗ ಕುಟುಂಬದ ವ್ಯವಹಾರವನ್ನು ಮುಂದುವರಿಸಬೇಕೆಂದು ಬಯಸಿದ್ದರು. ಆದರೆ ಅಕ್ಷತ್‌ಗೆ ಅದು ಇಷ್ಟವಿರಲಿಲ್ಲ.

ರಾಮಲೀಲಾ ಪ್ರದರ್ಶನದ ಸಮಯದಲ್ಲಿ ಅಕ್ಷತ್ ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದ. ಖಳನಾಯಕನ ಪಾತ್ರಗಳಲ್ಲಿ ಆತನಿಗೆ ಹೆಚ್ಚಿನ ಆಸಕ್ತಿಯಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಅವನಿಗೆ ಕ್ರೈಂ ಥ್ರಿಲ್ಲರ್ ವೆಬ್ ಸರಣಿಗಳನ್ನು ನೋಡುವುದೆಂದರೆ ಬಹಳ ಇಷ್ಟ ಎಂದು ಹೇಳಲಾಗಿದೆ. ಅಲ್ಲದೆ, ನಾಲ್ಕು ವರ್ಷಗಳ ಹಿಂದೆ, ಅಕ್ಷತ್ ಆರು ಪುಟಗಳ ಪತ್ರವನ್ನು ಬಿಟ್ಟು ಮನೆಯಿಂದ ಓಡಿಹೋಗಿದ್ದ. ಪತ್ರದಲ್ಲಿ, ಅವನು ವೈದ್ಯಕೀಯ ಅಧ್ಯಯನವನ್ನು ಮುಂದುವರಿಸುವುದಿಲ್ಲ ಎಂದು ಬರೆದಿದ್ದ. ಇನ್ನು ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.