ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮದುವೆಯಾದ ಕೆಲವೇ ಗಂಟೆಗಳಲ್ಲಿ ದಾಂಪತ್ಯದಲ್ಲಿ ಬಿರುಕು: ಪತಿಯನ್ನು ಬಿಟ್ಟು ಪ್ರಿಯಕರನನ್ನೇ ವರಿಸಲು ಹಠ ಹಿಡಿದ ನವವಧು

ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ವಿಚಿತ್ರ ಘಟನೆ ನಡೆದಿದೆ. ನವವಧು ತನ್ನ ಪತಿಯನ್ನು ತೊರೆದು ಪ್ರಿಯಕರನೊಂದಿಗೆ ಜೀವನ ಸಾಗಿಸುವುದಾಗಿ ಘೋಷಿಸಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಕುಟುಂಬದ ಒತ್ತಾಯದಿಂದ ಮದುವೆಗೆ ಒಪ್ಪಿದ್ದೆ ಎಂದು ಆಕೆ ಹೇಳಿದ್ದು, ಪೊಲೀಸರು ಎರಡೂ ಕುಟುಂಬಗಳ ಮಧ್ಯೆ ಸಮಾಲೋಚನೆ ನಡೆಸಿದರೂ ತನ್ನ ನಿರ್ಧಾರ ಬದಲಾಯಿಸಲಿಲ್ಲ ಎನ್ನಲಾಗಿದೆ.

ಮದುವೆಯಾದ ಕೆಲವೇ ಗಂಟೆಗಳಲ್ಲಿ ಪತಿ ತೊರೆದ ವಧು

ಮದುವೆ ದಿನವೇ ಬೇರ್ಪಟ್ಟ ಜೋಡಿ -

Profile
Sushmitha Jain Feb 24, 2026 8:27 PM

ಲಖನೌ, ಫೆ. 24: ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ವಿಚಿತ್ರ ಹಾಗೂ ಅಷ್ಟೇ ಆಘಾತಕಾರಿ ಘಟನೆಯೊಂದು ನಡೆದಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಧುವೊಬ್ಬಳು ತನ್ನ ಪತಿಯನ್ನು ತೊರೆದು ಪ್ರಿಯಕರನ ಜತೆ ಜೀವನ ನಡೆಸುವುದಾಗಿ ಘೋಷಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಈ ಘಟನೆಯಿಂದಾಗಿ ಎರಡೂ ಕುಟುಂಬಗಳು ಸಾರ್ವಜನಿಕವಾಗಿ ಮುಜುಗರಕ್ಕೀಡಾಗಿದ್ದು, ಮದುವೆಯ ಸಂಭ್ರಮವು ಕ್ಷಣಾರ್ಧದಲ್ಲಿ ಕಣ್ಮರೆಯಾಗಿದೆ.

ಸೋಮವಾರ (ಫೆಬ್ರವರಿ 23) ತಡರಾತ್ರಿ ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆದಿದೆ. ಮದುವೆಯ ನಂತರ ವಧು ತನ್ನ ಪತಿಯ ಮನೆಗೆ ತೆರಳಿದಳು. ಆದರೆ ಬುಧವಾರ ಮುಂಜಾನೆ ಯಾರೂ ನಿರೀಕ್ಷಿಸದ ತಿರುವು ಸಿಕ್ಕಿದೆ. ಮುಂಜಾನೆ ತೇಜಸ್ಸಿನಿಂದ ಇರಬೇಕಿದ್ದ ನವವಧು, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾಳೆ. ತನಗೆ ಈ ಮದುವೆಯಲ್ಲಿ ಆಸಕ್ತಿ ಇಲ್ಲ ಮತ್ತು ತನ್ನ ಪ್ರಿಯಕರನೊಂದಿಗೆ ಬದುಕಲು ಬಯಸುವುದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

ಪೊಲೀಸ್ ಮಧ್ಯಸ್ಥಿಕೆ ಮತ್ತು ಸಮಾಲೋಚನೆ

ವಿಷಯ ತಿಳಿದ ಪೊಲೀಸರು ತಕ್ಷಣ ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿ ಸತತವಾಗಿ ಹಲವು ಗಂಟೆಗಳ ಕಾಲ ಮನವೊಲಿಸಲು ಪ್ರಯತ್ನಿಸಿದರು. ಕೌನ್ಸೆಲಿಂಗ್ ಮೂಲಕ ಸಂಸಾರ ಉಳಿಸಲು ಯತ್ನಿಸಿದರೂ, ವಧು ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಕುಟುಂಬದ ಒತ್ತಾಯಕ್ಕೆ ಮಣಿದು ತಾನು ಈ ಮದುವೆಗೆ ಒಪ್ಪಿದ್ದೆ ಎಂದು ಆಕೆ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾಳೆ.

ನಾಗಾಲ್ಯಾಂಡ್ ವೈದ್ಯೆಯ ಮೇಲೆ ಜನಾಂಗೀಯ ನಿಂದನೆ, ಲೈಂಗಿಕ ದೌರ್ಜನ್ಯ

ನೋವಿನಲ್ಲೂ ಸಮ್ಮತಿಸಿದ ವರ

ಇತ್ತ ವಧುವಿನ ಈ ಹಿಂದಿನ ಪ್ರೇಮ ಪ್ರಕರಣದ ಬಗ್ಗೆ ತನಗೆ ಕಿಂಚಿತ್ತೂ ಸುಳಿವು ಇರಲಿಲ್ಲ ಎಂದು ವರ ಪೊಲೀಸರಿಗೆ ತಿಳಿಸಿದ್ದಾನೆ. "ಆಕೆಯ ಮನಸ್ಸಿನಲ್ಲಿ ಬೇರೊಬ್ಬ ವ್ಯಕ್ತಿ ಇದ್ದಾನೆ ಎಂದು ಮೊದಲೇ ಗೊತ್ತಿದ್ದರೆ, ನಾನು ಈ ಮದುವೆಗೆ ಎಂದಿಗೂ ಒಪ್ಪುತ್ತಿರಲಿಲ್ಲ" ಎಂದು ಆತ ನೋವಿನಿಂದ ಹೇಳಿದ್ದಾನೆ. ವಧುವಿನ ಹಠಕ್ಕೆ ಮಣಿದ ವರನ ಕಡೆಯವರು, ಬಲವಂತದ ಸಂಬಂಧಕ್ಕಿಂತ ಬೇರ್ಪಡುವುದೇ ಲೇಸು ಎಂದು ನಿರ್ಧರಿಸಿದರು.

ಅಂತಿಮವಾಗಿ, ಪರಸ್ಪರ ಒಪ್ಪಿಗೆಯ ಮೇರೆಗೆ ಮದುವೆಯನ್ನು ರದ್ದುಗೊಳಿಸಲು ಎರಡೂ ಕುಟುಂಬಗಳು ನಿರ್ಧರಿಸಿವೆ. ವಧು ತನ್ನ ತವರು ಮನೆಗೆ ಮರಳಿದ್ದು, ಕಾನೂನುಬದ್ಧವಾಗಿ ವಿವಾಹ ವಿಚ್ಛೇದನ ಪಡೆಯುವ ಪ್ರಕ್ರಿಯೆಗಳು ಆರಂಭವಾಗಿವೆ.