ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫೆರಿಸ್ ವ್ಹೀಲ್‌ಗೆ ಸಿಲುಕಿದ ಕೂದಲು; ಕಿತ್ತು ಬಂದ ಮಹಿಳೆಯ ತಲೆ ಚರ್ಮ; ಮಹಾರಾಷ್ಟ್ರದಲ್ಲೊಂದು ಭೀಕರ ದುರಂತ

ferris wheel accident: ಜಾತ್ರೆಯಲ್ಲಿ ಫೆರಿಸ್ ವೀಲ್ ಗೆ ಕೂದಲು ಸಿಲುಕಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಯವತ್ಮಾಲ್ ಜಿಲ್ಲೆಯ ಮಹಾಗಾಂವ್ ತಾಲೂಕಿನಲ್ಲಿ 'ತನ್ಹಾ ಪೋಲಾ' ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ತಕ್ಷಣವೇ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಮಹಿಳೆಯ ರಕ್ಷಣೆಗೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದರು.

ಫೆರಿಸ್ ವೀಲ್ ಗೆ ಕೂದಲು ಸಿಲುಕಿ ಮಹಿಳೆಗೆ ಗಂಭೀರ ಗಾಯ

ಸಂಗ್ರಹ ಚಿತ್ರ -

ಮಹಾರಾಷ್ಟ್ರ: ಫೆರಿಸ್ ವೀಲ್ (ferris wheel accident) ಗೆ ಮಹಿಳೆಯೊಬ್ಬರ ಕೂದಲು ಸಿಲುಕಿ ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ. ಯವತ್ಮಾಲ್ ಜಿಲ್ಲೆಯ ಮಹಾಗಾಂವ್ ತಾಲೂಕಿನಲ್ಲಿ ನಡೆದ 'ತನ್ಹಾ ಪೋಲಾ' ಹಬ್ಬದ (Tanha Pola festival) ವೇಳೆ ಆಯೋಜಿಸಿದ್ದ ಜಾತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಗಾಯಗೊಂಡ ಮಹಿಳೆಯನ್ನು ಫುಲ್‌ಸವಾಂಗಿ ನಿವಾಸಿಯಾಗಿರುವ ಬಲಿ ಮರೋಟಿ ತಾಲಿಕೋಟೆ (25) ಎಂದು ಗುರುತಿಸಲಾಗಿದೆ. ಅಲ್ಲಿ ಇದ್ದ ಪೊಲೀಸರು ತಕ್ಷಣವೇ ಮಹಿಳೆಯ ಸಹಾಯಕ್ಕೆ ಧಾವಿಸಿ ಆಕೆಯನ್ನು ಸುರಕ್ಷಿತವಾಗಿ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರು.

ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಶುಕ್ರವಾರ ನಡೆದ ಜಾತ್ರೆಯಲ್ಲಿ ಬಲಿ ಮರೋಟಿ ತಾಲಿಕೋಟೆ ಅವರ ಕೂದಲು ದೈತ್ಯ ಚಕ್ರದ ಬೇರಿಂಗ್‌ಗೆ ಸಿಲುಕಿಕೊಂಡಿದೆ. ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವೇಗವಾಗಿ ಚಕ್ರ ತಿರುಗುತ್ತಿದ್ದಾಗ ಅವರ ಕೂದಲು ಬಲವಾಗಿ ಎಳೆಯಲ್ಪಟ್ಟಿದ್ದರಿಂದ ತಲೆಚರ್ಮದ ದೊಡ್ಡ ಭಾಗವೇ ಕಿತ್ತು ಬಂದು ತೀವ್ರ ಗಾಯವಾಗಿದೆ.

ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್‌; ಟಾರ್ಚ್ ಬೆಳಕಿನಲ್ಲಿ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ

ಪುನೇಶ್ವರ ಮಹಾದೇವ ದೇವಸ್ಥಾನದ 'ತನ್ಹಾ ಪೋಲಾ' ಹಬ್ಬವನ್ನು ಪ್ರತಿ ವರ್ಷ ಒಂದು ದಿನ ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವರ ಆಶೀರ್ವಾದ ಪಡೆಯಲು ಸುತ್ತಮುತ್ತಲಿನ ಹಳ್ಳಿಗಳಿಂದ ಹೆಚ್ಚಿನ ಜನರು ಇಲ್ಲಿಗೆ ಆಗಮಿಸುತ್ತಾರೆ. ಫುಲ್‌ಸವಾಂಗಿ ನಿವಾಸಿಯಾಗಿರುವ ತಾಲಿಕೋಟೆ ಅವರು ಕೂಡ ಜಾತ್ರೆಗೆ ಬಂದಿದ್ದು, ಈ ಸಂದರ್ಭದಲ್ಲಿ ಅವರು ಫೆರಿಸ್ ವೀಲ್ ನಲ್ಲಿ ಕುಳಿತಿದ್ದಾರೆ. ಫೆರಿಸ್ ವೀಲ್ ವೇಗವಾಗಿ ತಿರುಗಲು ಪ್ರಾರಂಭಿಸಿದಾಗ ಅವರ ಕೂದಲು ಆಸನದ ಹಿಂಭಾಗದಲ್ಲಿದ್ದ ತಿರುಗುವ ಬೇರಿಂಗ್‌ಗೆ ಸಿಲುಕಿಕೊಂಡಿದೆ ಎನ್ನಲಾಗಿದೆ.



ತೀವ್ರವಾಗಿ ಕೂದಲು ಎಳೆದು ತಲೆ ಚರ್ಮದ ದೊಡ್ಡ ಭಾಗವೇ ಕಿತ್ತು ಬಂದಾಗ ಮಹಿಳೆ ನೋವಿನಿಂದ ಕಿರುಚಾಡಲಾರಂಭಿಸಿದ್ದು, ರಕ್ತಸಿಕ್ತವಾಗಿದ್ದ ಅವರನ್ನು ಕಂಡು ಜನರು ಗಾಬರಿಗೊಂಡರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ತಕ್ಷಣವೇ ಅಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಮಹಿಳೆಯ ಸಹಾಯಕ್ಕೆ ಧಾವಿಸಿದರು.

Pravasi Prapancha: ಬಾಗಿಲಿಲ್ಲದ ಭಗವಂತ; ಕುಣಿಗಲ್‌ನ ಬೆಟ್ಟದ ರಂಗನಾಥಸ್ವಾಮಿ

ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಅಂಬುರೆ, ಪೊಲೀಸ್ ಕಾನ್ಸ್ಟೇಬಲ್ ಸುಹಾಸ್ ಕಾಯ್ಟೆ ಅವರು ಸ್ಥಳೀಯರ ಸಹಾಯದಿಂದ ತಿರುಗುತ್ತಿದ್ದ ಸವಾರಿಯನ್ನು ತಕ್ಷಣ ನಿಲ್ಲಿಸಿ ಮಹಿಳೆಯನ್ನು ಕೆಳಗೆ ಇಳಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರು ಎನ್ನಲಾಗಿದೆ.