ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪುರಸಭೆ ಚುನಾವಣೆಯ ಮತದಾನದ ಬಳಿಕ ಬಿಜೆಪಿ ಅಭ್ಯರ್ಥಿ, ಪತಿ, ಮಗುವಿನೊಂದಿಗೆ ನಾಪತ್ತೆ; ಅಪಹರಣದ ಶಂಕೆ

ಪುರಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿದ ಮೇಲೆ ಬಿಜೆಪಿ ಅಭ್ಯರ್ಥಿಯು ತಮ್ಮ ಕುಟುಂಬದೊಂದಿಗೆ ನಾಪತ್ತೆಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಬಾರನ್‌ನ ವಾರ್ಡ್ 16ರ ಬಿಜೆಪಿ ಅಭ್ಯರ್ಥಿ ಅಂತಿಮಾ ಯಾದವ್ ಮತ್ತು ಅವರ ಕುಟುಂಬವನ್ನು ಅಪಹರಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಕುಟುಂಬದೊಂದಿಗೆ ಬಿಜೆಪಿ ಅಭ್ಯರ್ಥಿ ನಾಪತ್ತೆ

ಸಂಗ್ರಹ ಚಿತ್ರ -

ರಾಜಸ್ಥಾನ: ಬಿಜೆಪಿ ಅಭ್ಯರ್ಥಿ (BJP candidate) ತಮ್ಮ ಕುಟುಂಬದೊಂದಿಗೆ ನಾಪತ್ತೆಯಾಗಿರುವ (BJP candidate family missing) ಘಟನೆ ರಾಜಸ್ಥಾನದ (Rajasthan) ಬಾರನ್‌ನಲ್ಲಿ ನಡೆದಿದೆ. ಪುರಸಭಾ ಚುನಾವಣೆಯ (municipal election) ಮೊದಲ ಹಂತದ ಮತದಾನದ ಬಳಿಕ ಬಿಜೆಪಿ ಅಭ್ಯರ್ಥಿ ಅಂತಿಮಾ ಯಾದವ್, ಅವರ ಪತಿ ಮತ್ತು ಮಗು ನಾಪತ್ತೆಯಾಗಿದ್ದಾರೆ. ಅವರ ಮೂರು ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿವೆ. ಇದರಿಂದ ಅವರ ಸಂಬಂಧಿಕರು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಆತಂಕ ಹೆಚ್ಚಾಗಿದೆ. ಈ ಕುರಿತು ಅಪಹರಣ ಪ್ರಕರಣ ದಾಖಲಿಸಿರುವ ಪೊಲೀಸರು ಅವರನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಮತ್ತು ವಕೀಲರಾಗಿರುವ ಅಂತಿಮಾ ಯಾದವ್ ಅವರು ಪತಿ, ವಕೀಲ ಸಂಜಯ್ ಯಾದವ್ ಮತ್ತು ಅವರ 7-8 ವರ್ಷದ ಮಗು ಸೆಪ್ಟೆಂಬರ್ 9ರಿಂದ ನಾಪತ್ತೆಯಾಗಿದ್ದಾರೆ. ಅಂತಿಮಾ ಯಾದವ್ ಅವರು ಪುರಸಭಾ ವ್ಯಾಪ್ತಿಯ ಬಾರನ್‌ನ ವಾರ್ಡ್ 16ರ ಅಭ್ಯರ್ಥಿಯಾಗಿದ್ದರು. ಆ ದಿನ ಮೊದಲ ಹಂತದ ಮತದಾನವಾಗಿದ್ದು, ಅಂತಿಮಾ ಅವರು ಕೊನೆಯದಾಗಿ ಅಂಬೇಡ್ಕರ್ ಭವನದಲ್ಲಿರುವ ಮತದಾನ ಕೇಂದ್ರದಲ್ಲಿ ಕಾಣಿಸಿಕೊಂಡಿದ್ದರು. ಆ ದಿನ ಸಂಜೆ 5 ಗಂಟೆಯವರೆಗೂ ಅಲ್ಲಿದ್ದರು. ಮತದಾನ ಮುಗಿದ ಅನಂತರ ಅವರು ಮನೆಗೆ ಹೊರಟಿದ್ದು, ಆದರೆ ಅವರು ಮನೆ ತಲುಪಿರಲಿಲ್ಲ.

ಉಗ್ರಗಾಮಿ ಚಟುವಟಿಕೆಗೆ ನೆರವು: ಭಯೋತ್ಪಾದಕ ಹಫೀಜ್ ಸಯೀದ್ ಗೆ ಜಾಮೀನು ರಹಿತ ವಾರಂಟ್ ಜಾರಿ

ಪ್ರಚಾರ ಮತ್ತು ಮತದಾನ ಕೇಂದ್ರದಲ್ಲಿ ಮತದಾರರನ್ನು ಭೇಟಿಯಾದ ಬಳಿಕ ಮನೆಗೆ ಮರಳುತ್ತಿದ್ದ ಅವರನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ. ಅವರ ಪತಿ ಮತ್ತು ಮಗುವನ್ನು ಬಳಿಕ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಅಂತಿಮಾ ಅವರ ಕುಟುಂಬ ಆರೋಪಿಸಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅಂತಿಮಾ ಅವರ ಸಂಬಂಧಿ ರಾಜೇಂದ್ರ ಯಾದವ್, ಬೂತ್‌ನಲ್ಲಿ ನಾನು ಮತದಾನ ಏಜೆಂಟ್ ಆಗಿದ್ದೆ. ಸಂಜೆಯವರೆಗೂ ಅವರನ್ನು ಅಲ್ಲಿ ನೋಡಿದ್ದೆ. ಮತದಾನದ ಅನಂತರ ಅವರು ಮನೆಗೆ ಬಾರದಿದ್ದುದರಿಂದ ಹುಡುಕಲು ಪ್ರಾರಂಭಿಸಿದೆವು. ಆದರೆ ಸಿಗದೇ ಇದ್ದುದರಿಂದ ಅಂತಿಮಾ ಅವರ ಅತ್ತೆ ಅಂಗೂರಿ ಬಾಯಿ ಮತ್ತು ತಾಯಿ ಕೃಷ್ಣಾ ಬಾಯಿ ಕೊತ್ವಾಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು ಎಂದರು.

ಬಿಜೆಪಿ ಅಭ್ಯರ್ಥಿ ನಾಪತ್ತೆಯಾಗಿರುವುದು ಪಕ್ಷದಲ್ಲೂ ಆತಂಕ ಉಂಟು ಮಾಡಿದೆ. ಮತದಾನ ಮುಗಿದಾಗಿನಿಂದ ಪಕ್ಷಕ್ಕೆ ಅಂತಿಮಾ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ನಗರ ಅಧ್ಯಕ್ಷ ಒಪಿ ಪರೇಟಾ ತಿಳಿಸಿದ್ದಾರೆ.

ಪಕ್ಷವು ಅವರ ಕುಟುಂಬವನ್ನು ಸಂಪರ್ಕಿಸಿದೆ. ಆದರೆ ಈವರೆಗೆ ಅವರ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಭ್ಯರ್ಥಿಯ ಪತ್ತೆಗೆ ಬಿಜೆಪಿ ತನ್ನದೇ ಆದ ಮಟ್ಟದಲ್ಲಿ ಪ್ರಯತ್ನಗಳನ್ನು ನಡೆಸುತ್ತಿದೆ. ವಾರ್ಡ್ 16ರಲ್ಲಿ ಬಿಜೆಪಿಯ ಸ್ಥಿತಿ ಬಲವಾಗಿದೆ. ಇಲ್ಲಿ ಪಕ್ಷ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

ಕೈದಿ ಪ್ರಜ್ವಲ್ ರೇವಣ್ಣಗೆ ಫೋನ್, ಸಿಮ್ ಕಾರ್ಡ್ ಪೂರೈಕೆ: ಜೈಲು ಸಿಬ್ಬಂದಿ ಸೇರಿ 7 ಮಂದಿ ಬಂಧನ

ಕೋಟ್ವಾಲಿ ಪೊಲೀಸರು ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಕೋಟ್ವಾಲಿ ವೃತ್ತ ನಿರೀಕ್ಷಕ ಹೀರಾ ಲಾಲ್ ಪುನಿಯಾ ತಿಳಿಸಿದ್ದಾರೆ.