ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Honour Killing: ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆಗೆ ಯತ್ನ: ಗರ್ಭಿಣಿ ತಂಗಿಯನ್ನು ಕೊಡಲಿಯಿಂದ ಕೊಚ್ಚಿದ ಪಾಪಿ

ಕೊಪ್ಪಳ ತಾಲ್ಲೂಕಿನ ಹಂದ್ರಾಳದಲ್ಲಿ ಮರ್ಯಾದಾ ಹತ್ಯೆಗೆ ಯತ್ನ ನಡೆದಿದೆ. 4 ತಿಂಗಳ ಗರ್ಭಿಣಿಯಾಗಿದ್ದ ಮೀನಾಕ್ಷಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈಯೋದಕ್ಕೆ ಅಣ್ಣ ಮಂಜುನಾಥ್ ಯತ್ನಿಸಿದ್ದಾನೆ. ಮೀನಾಕ್ಷಿಯ ಪತಿ ಉದಯನ ಸಹೋದರನ ಮದುವೆಗೆ ದಂಪತಿ ಬಂದಾಗ ಈ ಕೃತ್ಯ ಎಸಗಲಾಗಿದೆ.

ಮರ್ಯಾದಾ ಹತ್ಯೆಗೆ ಯತ್ನ: ಗರ್ಭಿಣಿ ತಂಗಿಯನ್ನು ಕೊಡಲಿಯಿಂದ ಕೊಚ್ಚಿದ ಪಾಪಿ

ಆರೋಪಿ ಮಂಜುನಾಥ್ -

ಹರೀಶ್‌ ಕೇರ
ಹರೀಶ್‌ ಕೇರ Feb 19, 2026 9:33 AM

ಕೊಪ್ಪಳ, ಫೆ.19: ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ (Honour Killing) ಯತ್ನ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಕೊಪ್ಪಳದಲ್ಲಿ (koppala news) ನಡೆದಿದ್ದು, ಅದೃಷ್ಟವಶಾತ್ ನಾಲ್ಕು ತಿಂಗಳ ಗರ್ಭಿಣಿ (pregnant) ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅಣ್ಣನೇ ಕೊಡಲಿಯಿಂದ ಕೊಚ್ಚಿ ತಂಗಿಯ ಜೀವ ತೆಗೆಯಲು ಯತ್ನಿಸಿದ್ದಾನೆ.

ಕೊಪ್ಪಳ ತಾಲ್ಲೂಕಿನ ಹಂದ್ರಾಳದಲ್ಲಿ ಮರ್ಯಾದಾ ಹತ್ಯೆಗೆ ಯತ್ನ ನಡೆದಿದೆ. 4 ತಿಂಗಳ ಗರ್ಭಿಣಿಯಾಗಿದ್ದ ಮೀನಾಕ್ಷಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈಯೋದಕ್ಕೆ ಅಣ್ಣ ಮಂಜುನಾಥ್ ಯತ್ನಿಸಿದ್ದಾನೆ. ಮೀನಾಕ್ಷಿಯ ಪತಿ ಉದಯನ ಸಹೋದರನ ಮದುವೆಗೆ ದಂಪತಿ ಬಂದಾಗ ಈ ಕೃತ್ಯ ಎಸಗಲಾಗಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಚಿತ್ತಾಪೂರ ನಿವಾಸಿ ಮೀನಾಕ್ಷಿ ಹಾಗೂ ಹಂದ್ರಾಳ ಗ್ರಾಮದ ಉದಯ್ ಪ್ರೀತಿಸಿ 2 ವರ್ಷದ ಹಿಂದೆ ಮದುವೆಯಾಗಿದ್ದರು. ಉದಯ ಎಸ್‌ಟಿ ಸಮುದಾಯದವನಾಗಿದ್ದು, ಕುರುಬರ ಸಮುದಾಯದ ಮೀನಾಕ್ಷಿ ಮನೆಯವರಲ್ಲಿ ಈ ಬಗ್ಗೆ ಸಿಟ್ಟಿತ್ತು. ನಿನ್ನೆ ಉದಯ್ ಸಹೋದರನ ಮದುವೆಗೆ ಆಗಮಿಸಿದ್ದಾಗ, ಇವರಿಗಾಗಿ ಕಾದು ಕುಳಿತಿದ್ದ ಮೀನಾಕ್ಷಿಯ ಅಣ್ಣ ಮಂಜುನಾಥ್ ಕೊಡಲಿಯಿಂದ ಕೊಚ್ಚಿ ಕೊಲೆಗೈಯ್ಯೋದಕ್ಕೆ ಯತ್ನಿಸಿದ್ದಾನೆ.

40 ದಿನದ ನವಜಾತ ಶಿಶು ಕೊಂದ ಅಜ್ಜಿ; ಮೊಮ್ಮಗಳಿಂದ ದೂರು, ಮರ್ಯಾದೆ ಹತ್ಯೆ ಶಂಕೆ

ಮೀನಾಕ್ಷಿಯ ಕೈ ಹಾಗೂ ಬೆನ್ನಿನ ಭಾಗಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆಗೆ ಅಣ್ಣ ಮಂಜುನಾಥ್ ಯತ್ನಿಸಿದ್ದಾನೆ. ಅದೃಷ್ಟವಶಾತ್ ಮೀನಾಕ್ಷಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಮಂಜುನಾಥ್‌ನನ್ನು ಅಳವಂಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಓವರ್‌ಟೇಕ್‌ ವೇಳೆ ಲಾರಿ ಚಕ್ರಕ್ಕೆ ಬೈಕ್‌ ಸಿಲುಕಿ ಇಬ್ಬರು ಸಾವು

ಕೊಪ್ಪಳ: ಓವರ್ ಟೆಕ್ ಮಾಡುವ ವೇಳೆ ಲಾರಿ ಚಕ್ರಕ್ಕೆ ಬೈಕ್‌ ಸಿಲುಕಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಉಪಲದಿನ್ನಿ ಎಂಬ ಗ್ರಾಮದಲ್ಲಿ ನಡೆದಿದೆ.

Murder Case: ಧಾರವಾಡದಲ್ಲಿ ಮರ್ಯಾದೆಗೇಡು ಹತ್ಯೆ: ದಲಿತ ಯುವಕನ ಪ್ರೀತಿಸಿ ಮದುವೆಯಾಗಿದ್ದಕ್ಕೆ ಗರ್ಭಿಣಿ ಮಗಳ ಥಳಿಸಿ ಕೊಂದ ತಂದೆ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪುರ ನಿವಾಸಿಗಳಾದ ಶ್ರೀನಿವಾಸ್ (26) ಹಾಗೂ ಸಿದ್ದನಗೌಡ (25) ಮೃತ ಸವಾರರು ಎಂದು ತಿಳಿದುಬಂದಿದೆ. ಸಂಬಂಧಿಕರೊಬ್ಬರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಶ್ರೀನಿವಾಸ್ ಸ್ನೇಹಿತನ ಜತೆಗೆ ತೆರಳುತ್ತಿದ್ದರು. ಮುಸಲಾಪುರದಿಂದ ಬೈಕ್‌ನಲ್ಲಿ ಹಿರೇ ಅರಳಹಳ್ಳಿಗೆ ಇಬ್ಬರು ತೆರಳುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಲಾರಿ ಕೆಳಗಡೆ ಸಿಲುಕಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದ ಕುರಿತು ಬೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.