40 ದಿನದ ನವಜಾತ ಶಿಶು ಕೊಂದ ಅಜ್ಜಿ; ಮೊಮ್ಮಗಳಿಂದ ದೂರು, ಮರ್ಯಾದೆ ಹತ್ಯೆ ಶಂಕೆ
Honor Killing in Chikkaballapur: ಪ್ರೀತಿಸಿ ಮದುವೆಯಾದ ದಂಪತಿಗೆ ಜನಸಿದ್ದ ಗಂಡು ಮಗು ಡಿಸೆಂಬರ್ 21 ರಂದು ಮೃತಪಟ್ಟಿತ್ತು. ಮಗು ಮೃತಪಟ್ಟಾಗ ಅಜ್ಜಿ ಬಳಿಯೇ ಇತ್ತು. ಹೀಗಾಗಿ ತನ್ನ ಮಗುವಿನ ಸಾವಿನಲ್ಲಿ ಅಜ್ಜಿಯ ಕೈವಾಡವಿದೆ ಎಂದು 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಅನುಮಾನ ವ್ಯಕ್ತಪಡಿಸಿ, ಚೇಳೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.
ಸಾಂದರ್ಭಿಕ ಚಿತ್ರ -
ಚಿಕ್ಕಬಳ್ಳಾಪುರ, ಡಿ.25: ಜಿಲ್ಲೆಯ ಚೇಳೂರು ಪಟ್ಟಣದಲ್ಲಿ ನಡೆದಿದ್ದ 40 ದಿನಗಳ ನವಜಾತ ಗಂಡು ಶಿಶು ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಮಗು ಸಾವಿನಲ್ಲಿ ಅಜ್ಜಿಯ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ. ಅಪ್ರಾಪ್ತ ವಯಸ್ಸಿನ ಮೊಮ್ಮಗಳು, ಹಿಂದೂ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಕ್ಕೆ ದ್ವೇಷ ಹೊಂದಿದ್ದ ಅನ್ಯಕೋಮಿನ ಅಜ್ಜಿ, ಮೊಮ್ಮಗಳ ನವಜಾತ ಶಿಶುವನ್ನು ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಪ್ರೀತಿಸಿ ಮದುವೆಯಾದ ದಂಪತಿಗೆ ಜನಸಿದ್ದ ಗಂಡು ಮಗು ಡಿಸೆಂಬರ್ 21 ರಂದು ಮೃತಪಟ್ಟಿತ್ತು. ಮಗು ಮೃತಪಟ್ಟಾಗ ಅಜ್ಜಿ ಬಳಿಐೇ ಇತ್ತು. ಆದರೆ, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಅಜ್ಜಿ ವಾದಿಸಿದ್ದಾಳೆ ಎನ್ನಲಾಗಿದೆ. ಆದರೆ ತನ್ನ ಮಗುವಿನ ಸಾವಿನಲ್ಲಿ ಅಜ್ಜಿಯ ಕೈವಾಡವಿದೆ ಎಂಬ ಅನುಮಾನ ವ್ಯಕ್ತಪಡಿಸಿದ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ, ಚೇಳೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.
ಈ ದೂರಿನ ಆಧಾರದ ಮೇಲೆ ಬಿಎನ್ಎಸ್ 194 ಸೆಕ್ಷನ್ ಅಡಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ನವಜಾತ ಶಿಶುವಿನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಚೇಳೂರು ತಹಶಿಲ್ದಾರ್ ಶ್ವೇತಾ ಅವರ ನೇತೃತ್ವದಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಲಾಗಿದೆ.
ಬಿಕ್ಲು ಶಿವ ಹತ್ಯೆ ಪ್ರಕರಣ; ಶಾಸಕ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್
ಯುವಕನ ವಿರುದ್ಧ ಪೋಕ್ಸೊ ಕೇಸ್ ದಾಖಲು
ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಹಿಂದೂ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ನವಜಾತ ಶಿಶುವಿನ ಮರಣಕ್ಕೆ ನಿಖರ ಕಾರಣ ಏನು? ಇದರಲ್ಲಿ ಅಜ್ಜಿಯ ಪಾತ್ರವಿದೆಯೇ ಎಂಬುದನ್ನು ತಿಳಿಯಲು ಪೊಲೀಸರು ಮರಣೋತ್ತರ ವರದಿ ನಿರೀಕ್ಷಿಸುತ್ತಿದ್ದಾರೆ.