Self Harming: ಮಕ್ಕಳ ಕೊರಗು: ಗೃಹಿಣಿ ಆತ್ಮಹತ್ಯೆ
ಮದುವೆಯಾಗಿ 4 ವರ್ಷಗಳಾದರೂ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಗಂಡ-ಹೆಂಡತಿ ನಡುವೆ ಈ ವಿಷಯ ಮತ್ತು ಬೇರೆ ಮನೆ ಮಾಡುವ ವಿಚಾರದಲ್ಲಿ ವೈಮನಸ್ಸು ಮೂಡಿದ್ದು, ತಾಲ್ಲೂಕಿನ ಮಂಚನ ಬಲೆಯ ಅಜ್ಜಿಯ ಮನೆಗೆ ಬಂದಿದ್ದಳು. ಈ ವೇಳೆ ಮನ ನೊಂದು ರುಚಿತಾ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
-
Ashok Nayak
May 17, 2026 9:41 PM
ಚಿಕ್ಕಬಳ್ಳಾಪುರ: ಮಕ್ಕಳಾಗಲಿಲ್ಲ ಎಂಬ ಕೊರಗಿನಿಂದ ಮನನೊಂದ ಗೃಹಿಣಿ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಡೆದಿದ್ದು 24 ವರ್ಷದ ರುಚಿತಾ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಎಂದು ಗುರ್ತಿಸಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ದರಬೂರು ಗ್ರಾಮದ ರುಚಿತಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವೀರಾಪುರ ಗ್ರಾಮದ ಕೇಶವ ಎಂಬುವವರ ಜೊತೆ 4 ವರ್ಷಗಳ ಹಿಂದೆ ಮದುವೆಯಾಗಿತ್ತು.
ಇದನ್ನೂ ಓದಿ: Self Harming: ಶೇರ್ ಮಾರ್ಕೇಟ್ ನಲ್ಲಿ ನಷ್ಟ: ಯುವಕ ನೇಣಿಗೆ ಶರಣು
ಮದುವೆಯಾಗಿ 4 ವರ್ಷಗಳಾದರೂ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಗಂಡ-ಹೆಂಡತಿ ನಡುವೆ ಈ ವಿಷಯ ಮತ್ತು ಬೇರೆ ಮನೆ ಮಾಡುವ ವಿಚಾರದಲ್ಲಿ ವೈಮನಸ್ಸು ಮೂಡಿದ್ದು, ತಾಲ್ಲೂಕಿನ ಮಂಚನಬಲೆಯ ಅಜ್ಜಿಯ ಮನೆಗೆ ಬಂದಿದ್ದಳು. ಈ ವೇಳೆ ಮನ ನೊಂದು ರುಚಿತಾ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.