ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಂಧಿತ ವಿವಾಹಿತ ಪ್ರೇಮಿಯ ಬಿಡುಗಡೆ ಆಗ್ರಹಿಸಿ ಮೊಬೈಲ್ ಟವರ್ ಏರಿ ಯುವತಿಯ ಹೈಡ್ರಾಮ

Viral News: ಪ್ರೇಮಿಯನ್ನು ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಬೇಕೆಂದು ಪ್ರೇಯಸಿ ಸುಮಾರು 90 ನಿಮಿಷಗಳ ಹೈವೋಲ್ಟೇಜ್ ಟವರ್ ಮೇಲೆ ಏರಿರುವ ಘಟನೆ ನಡೆದಿದೆ. ಈ ನಾಟಕೀಯ ದೃಶ್ಯದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪ್ರೇಮಿಯ ಬಿಡುಗಡೆಗಾಗಿ ಮೊಬೈಲ್ ಟವರ್ ಏರಿ ಯುವತಿಯ ಹೈಡ್ರಾಮ

ಪ್ರೇಮಿಯ ಬಿಡುಗಡೆಗಾಗಿ ಮೊಬೈಲ್ ಟವರ್ ಏರಿ ಯುವತಿಯ ಹೈಡ್ರಾಮ -

Profile
Pushpa Kumari May 17, 2026 10:46 PM

ರಾಂಚಿ, ಮೇ 17: ತಾನು ಪ್ರೀತಿಸಿದ ಯುವಕನಿಗಾಗಿ ಯುವತಿಯೊಬ್ಬಳು ಹೈಡ್ರಾಮ ಮಾಡಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಪ್ರೇಮಿಯನ್ನು ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಬೇಕೆಂದು ಪ್ರೇಯಸಿ ಸುಮಾರು 90 ನಿಮಿಷಗಳ ಹೈವೋಲ್ಟೇಜ್ ಟವರ್ ಮೇಲೆ ನಿಂತು ಬಿಡುಗಡೆಗಾಗಿ ಒತ್ತಾಯಿಸಿದ್ದಾಳೆ. ಈ ನಾಟಕೀಯ ದೃಶ್ಯದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ಜಾರ್ಖಂಡ್‌ನ ಧನ್ಬಾದ್‌ನಲ್ಲಿ ಈ ಘಟನೆ ನಡೆದಿದ್ದು ಯುವತಿ ತನ್ನ ಪ್ರೇಮಿಯನ್ನು ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮೊಬೈಲ್ ಟವರ್ ಹತ್ತಿ ಕೂತಿದ್ದಾಳೆ. ಶಹ್ರಿಯಾದ ದೇವಂತಿ ಕುಮಾರಿ ಎಂದು ಗುರುತಿಸಲಾದ ಯುವತಿ ಈ ಕೃತ್ಯ ಎಸಗಿದ್ದಾಳೆ. ಈ ದೃಶ್ಯವನ್ನು ಗಮನಿಸುತ್ತಿದ್ದ ಸ್ಥಳೀಯರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ವಿಡಿಯೊ ನೋಡಿ:

ಅಲ್ಲಿನ ನಿವಾಸಿಗಳ ಮಾಹಿತಿಯಂತೆ, ಯುವತಿಯ ಪ್ರೇಮಿ ವಿವಾಹಿತನಾಗಿದ್ದು, ನಿಮಿಯಾಘಾಟ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಿದ್ದರು. ಆತನ ಬಂಧನದಿಂದ ಅಸಮಾಧಾನಗೊಂಡ ಪ್ರಿಯತಮೆ ದೇವಂತಿ ಮೊಬೈಲ್ ಟವರ್ ಹತ್ತಿ ಹೈಡ್ರಾಮ ಮಾಡಿದ್ದಾಳೆ. ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯರು ಪದೇ ಪದೆ ಕೆಳಗಿಳಿಯಲು ಹೇಳಿದರೂ ಆಕೆ ನಿರಾಕರಿಸಿದ್ದಾಳೆ.

ಪಟಾಕಿ ಹುಚ್ಚಿಗೆ ಬಾಲಕಿ ಕಣ್ಣನ್ನೇ ತೆಗೆದನೇ ಬ್ರಿಟಿಷ್‌ ಇನ್‌ಫ್ಲುಯೆನ್ಸರ್‌?

ತನ್ನ ಪ್ರಿಯಕರನನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಕೆ ಪೊಲೀಸರ ಬಳಿ ಪಟ್ಟು ಹಿಡಿದಿದ್ದು, ಅವನೊಂದಿಗೆ ತನ್ನ ಮದುವೆ ಏರ್ಪಡಿಸಬೇಕೆಂದು ಬೇಡಿಕೆ ಇಟ್ಟಿದ್ದಾಳೆ. ಈ ಹೈಡ್ರಾಮ ನಡೆಯುತ್ತಿದ್ದಂತೆ ಸ್ಥಳದಲ್ಲಿ ದೊಡ್ಡ ಜನಸಮೂಹ ಜಮಾಯಿಸಿದ್ದು, ಪೊಲೀಸರು ಮತ್ತು ಗ್ರಾಮಸ್ಥರು ಅವಳನ್ನು ಸುರಕ್ಷಿತವಾಗಿ ಕೆಳಗೆ ಇಳಿಯುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ನಿಮಿಯಾಗಾಟ್ ಪೊಲೀಸ್ ಠಾಣಾ ಉಸ್ತುವಾರಿ ಅಂಕಿತ್ ಕುಮಾರ್ ಸಿನ್ಹಾ ಮತ್ತು ಗ್ರಾಮದ ಮುಖ್ಯಸ್ಥ ಅಹ್ಮದ್ ಅಲಿ ಯುವತಿಯ ಬಳಿ ಮಾತನಾಡಿದ್ದಾರೆ. ಸುಮಾರು 90 ನಿಮಿಷಗಳ ಕೌನ್ಸಿಲಿಂಗ್ ನಂತರ ಯುವತಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದೀರ್ಘಕಾಲದ ಮನವೊಲಿಕೆ ನಂತರ ಆಕೆಯನ್ನು ಸುರಕ್ಷಿತವಾಗಿ ಕೆಳಗೆ ಕರೆದೊಯ್ದರು. ಪೊಲೀಸರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದಿದ್ದಾರೆ. ಅಧಿಕಾರಿಗಳು ಆಕೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಠಾಣೆಗೆ ಬರುವಂತೆ ತಿಳಿಸಿದ್ದಾರೆ.