Reels craze: ಹುಬ್ಬಳ್ಳಿ: ರೀಲ್ಸ್‌ಗಾಗಿ ಕಾರು ಗುದ್ದಿಸಿದ ಬಾಲಕ, ಆತನ ಅಪ್ಪ ಇಬ್ಬರೂ ಸೆರೆ
ರೀಲ್ಸ್ ಮಾಡಲು ಹೋದಾಗ ಆಡಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತವಾಗಿದ್ದು, ಬಾಲಕನೋರ್ವ ಮೃತಪಟ್ಟಿದ್ದ. ನಮೀಷ್ ಇದ್ದ ಸ್ಕೂಟಿಗೆ 17ನೇ ವರ್ಷದ ಅಪ್ರಾಪ್ತ ಬಾಲಕ ಓಡಿಸುತ್ತಿದ್ದ ಆಡಿ ಕಾರು ಗುದ್ದಿದ ಪರಿಣಾಮ ನಮೀಷ್ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಆರೆಸ್ಟ್ ಆದ ತಂದೆ -
ಹುಬ್ಬಳ್ಳಿ, ಮಾ. 22: ಹುಬ್ಬಳ್ಳಿಯಲ್ಲಿ (hubballi news) ರೀಲ್ಸ್ ಮಾಡುವಾಗ ನಡೆದ ಅಪಘಾತದಲ್ಲಿ (accident) ಬಾಲಕನ ಸಾವಿಗೆ (death) ಸಂಬಂಧಿಸಿದಂತೆ ಅಪಘಾತ ಮಾಡಿದ ಬಾಲಕ ಮಾತ್ರವಲ್ಲ, ಆತನ ತಂದೆಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ರೀಲ್ಸ್ ಮಾಡಲು ಹೋದಾಗ ಆಡಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತವಾಗಿದ್ದು, ಬಾಲಕನೋರ್ವ ಮೃತಪಟ್ಟಿದ್ದ.
ರೀಲ್ಸ್ ಮಾಡುವುದು ಇಂದು ಗೀಳಾಗಿದೆ. ಅದರಲ್ಲೂ ಬಾಲಕರು, ಹದಿಹರೆಯದ ಯುವಕರು ವಾಹನಗಳನ್ನು ಕ್ರ್ಯಾಶ್ ಮಾಡೋದು ಸೇರಿದಂತೆ ಅನೇಕ ಸ್ಟಂಟ್ಗಳ ವಿಡಿಯೋ ನೋಡುವುದು, ಅದೇ ರೀತಿ ಮಾಡೋದನ್ನು ಹೆಚ್ಚಾಗಿ ಮಾಡ್ತಿದ್ದಾರೆ. ಇದೇ ರೀತಿ ವಾಹನಗಳ ಕ್ರ್ಯಾಶ್ ಮಾಡೋ ವಿಡಿಯೋ ಮಾಡಲು ಹೋದಾಗ ನಡೆಯಬಾರದ ಘಟನೆಯೊಂದು ಹುಬ್ಬಳ್ಳಿಯಲ್ಲಿ ಮಾರ್ಚ್ 19 ರಂದು ನಡೆದಿತ್ತು.
ಹುಬ್ಬಳ್ಳಿ ನಗರದ ಲಕ್ಷ್ಮಿ ನಗರದ ನಮೀಷ್ ಸಂಗಳದ ಮೃತ ಬಾಲಕ. ಹುಬ್ಬಳ್ಳಿಯ ಬಿಜೆಪಿ ಮುಖಂಡ ವಿರೇಶ್ ಸಂಗಳದ ಪುತ್ರನಾಗಿದ್ದ ನಮೀಷ್, ಯುಗಾದಿ ಹಬ್ಬದ ದಿನ ಶೇಜವಾಡ್ಕರ್ ಪ್ಲಾಟ್ನಲ್ಲಿ ಸ್ನೇಹಿತರ ಜೊತೆ ರೀಲ್ಸ್ ಮಾಡಲು ಹೋಗಿದ್ದ. ನಮೀಷ್ ಇದ್ದ ಸ್ಕೂಟಿಗೆ 17ನೇ ವರ್ಷದ ಅಪ್ರಾಪ್ತ ಬಾಲಕ ಓಡಿಸುತ್ತಿದ್ದ ಆಡಿ ಕಾರು ಗುದ್ದಿದ ಪರಿಣಾಮ ನಮೀಷ್ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
Hubballi news: ಸ್ಟಂಟ್ & ಕ್ರ್ಯಾಶ್ ರೀಲ್ಸ್ ಹುಚ್ಚಾಟಕ್ಕೆ ಬಿಜೆಪಿ ಮುಖಂಡನ ಪುತ್ರ ಬಲಿ
ನಮೀಷ್ ಸಂಗಳದ್ ಹಾಗೂ ಕಾರು ಓಡಿಸುತ್ತಿದ್ದ ಬಾಲಕ ಮತ್ತು ಇನ್ನಿಬ್ಬರು ಬಾಲಕರು ಸೇರಿ ಒಟ್ಟು ನಾಲ್ವರು ಬಾಲಕರು ಕ್ರ್ಯಾಶ್ ರೀಲ್ಸ್ ಮಾಡಲು ಹೋಗಿದ್ದರಂತೆ. ನಮೀಷ್ ಸಂಗಳದ ಸ್ಕೂಟಿ ಓಡಿಸಿಕೊಂಡು ಬರ್ತಿದ್ದರೆ ಎದುರಿನಿಂದ ಅಪ್ರಾಪ್ತ ಬಾಲಕ ಕಾರು ಓಡಿಸಿಕೊಂಡು ಬರ್ತಿದ್ದ. ಅವು ಎರಡು ಕ್ರ್ಯಾಶ್ ಆಗುವ ವಿಡಿಯೋವನ್ನು ಇನ್ನಿಬ್ಬರು ಬಾಲಕರು ಮಾಡಲು ಮುಂದಾಗಿದ್ದರು. 17ನೇ ವರ್ಷದ ಬಾಲಕ ಓಡಿಸುತ್ತಿದ್ದ ಕಾರು ಹಾಗೂ ಸ್ಕೂಟಿ ತೀರಾ ವೇಗವಾಗಿದ್ದರಿಂದ ನಿಯಂತ್ರಣ ತಪ್ಪಿ ಸ್ಕೂಟಿ ಮತ್ತು ಕಾರ್ ನಡುವೆ ಅಪಘಾತವಾಗಿತ್ತು. ಹೀಗಾಗಿ ಸ್ಥಳದಲ್ಲೇ ಬಾಲಕ ಮೃತ ಪಟ್ಟಿದ್ದ.
ಬಾಲಕನ ತಂದೆ ಆರೆಸ್ಟ್
ಅಪಘಾತ ಮಾಡಿರುವ 17 ವರ್ಷದ ಬಾಲಕನನ್ನು ಬಂಧಿಸಿ ಬಾಲಕರ ಬಾಲ ಮಂದಿರಕ್ಕೆ ಕಳುಹಿಸಿದರೆ, ಅಪ್ರಾಪ್ತ ಮಗನಿಗೆ ಕಾರು ನೀಡಿದ್ದ ಬಾಲಕನ ತಂದೆ ನಾಗರಾಜ್ ರಾಯ್ಕರ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೀಲ್ಸ್ ಹುಚ್ಚಾಟವಾಡಬಾರದು. ಹೆತ್ತವರು ಮಕ್ಕಳಿಗೆ ತಮ್ಮ ವಾಹನ ನೀಡಬಾರದು ಅಂತ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಜನರಲ್ಲಿ ಮನವಿ ಮಾಡಿದ್ದಾರೆ.