LPG Crisis: 12 ದಿನದ ಸಂಕಷ್ಟಕ್ಕೆ ಪರಿಹಾರ, ಇಂದಿನಿಂದ ಹೋಟೆಲ್‌ಗಳಿಗೆ ಹೆಚ್ಚಲಿದೆ ಎಲ್‌ಪಿಜಿ ಪೂರೈಕೆ
ವಾಣಿಜ್ಯ ಸಿಲಿಂಡರ್ ಪೂರೈಕೆಯನ್ನು ಈ ಹಿಂದೆ ಶೇ. 30ರಷ್ಟು ಕಡಿತಗೊಳಿಸಲಾಗಿತ್ತು. ಇದರಿಂದ ಕೇವಲ ಬೆಂಗಳೂರು ಮಾತ್ರವಲ್ಲದೆ ಕಲಬುರಗಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಜನಸಾಮಾನ್ಯರು ಮತ್ತು ಹೋಟೆಲ್ ಮಾಲೀಕರು ಪರದಾಡುವಂತಾಗಿತ್ತು. ಈಗ ಕೇಂದ್ರದ ಹೊಸ ಆದೇಶದಿಂದ ಹೋಟೆಲ್ ಉದ್ಯಮ ಮತ್ತೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಮಾ.23: ಕಳೆದ 12 ದಿನಗಳಿಂದ ವಾಣಿಜ್ಯ ಸಿಲಿಂಡರ್ (commercial cylinder) ಕೊರತೆಯಿಂದ (LPG crisis) ಕಂಗೆಟ್ಟಿದ್ದ ರಾಜ್ಯದ ಹೋಟೆಲ್ (Hotels) ಉದ್ಯಮಕ್ಕೆ ಕೊನೆಗೂ ಬಿಡುವು ಸಿಕ್ಕಿದೆ. ಇಂದಿನಿಂದ (ಸೋಮವಾರ) ಹೋಟೆಲ್‌ಗಳಿಗೆ ಹೆಚ್ಚಿನ ಪ್ರಮಾಣದ ಅನಿಲ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಪೆಟ್ರೋಲಿಯಂ ಇಲಾಖೆಯ ಸೂಚನೆಯಂತೆ, ಯುದ್ಧಪೂರ್ವದಲ್ಲಿದ್ದ ಸ್ಥಿತಿಗೆ ಅಂದರೆ ಶೇ. 50ರಷ್ಟು ಸಿಲಿಂಡರ್ ಪೂರೈಕೆಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಕೇವಲ ಕರ್ನಾಟಕಕ್ಕೆ ಮಾತ್ರ ಅನ್ಯಾಯವಾಗುತ್ತಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿತ್ತು. ಅಲ್ಲದೆ, ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.
ಕುಸಿತ ಕಂಡಿದ್ದ ಉದ್ಯಮ: ಗಲ್ಫ್ ಯುದ್ಧದ ಪರಿಣಾಮ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಅನಿಲ ಸಿಗದೆ ಹಲವು ಹೋಟೆಲ್‌ಗಳು ಬಾಗಿಲು ಹಾಕಿದ್ದವು, ಇನ್ನೂ ಕೆಲವು ಹೋಟೆಲ್‌ಗಳು ತಮ್ಮ ಮೆನುವನ್ನೇ ಬದಲಾಯಿಸಿ ಸೌದೆ ಒಲೆಗಳ ಮೊರೆ ಹೋಗಿದ್ದವು. ವಾಣಿಜ್ಯ ಸಿಲಿಂಡರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಸುವ ಉದ್ಯಮಿಗಳಿಗೆ ಹೆಚ್ಚಿನ ಅನಿಲ ಪೂರೈಕೆಯ ಅಭಯ ಹಾಗೂ ವಿಶೇಷ ಆಫರ್‌ಗಳನ್ನು ಕೇಂದ್ರ ನೀಡಿದೆ.
LPG black market: ಮನೆಬಳಕೆ ಎಲ್‌ಪಿಜಿ ಕಾಳಸಂತೆಯಲ್ಲಿ ಬಿಕರಿ, 12 ಸಾವಿರ ಸಿಲಿಂಡರ್ ವಶ