ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೆಂಡತಿಯೊಂದಿಗೆ ಮೊಟ್ಟೆ ಜಗಳ; ನಾಲಗೆಯೇ ಕಳೆದುಕೊಂಡ ಗಂಡ!

ಮೊಟ್ಟೆ ಕರಿ ವಿಚಾರದಲ್ಲಿ ನಡೆದ ಗಲಭೆಯ ಕಾರಣದಿಂದ ಗಂಡನೊಬ್ಬ ನಾಲಿಗೆ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಊಟದ ವೇಳೆ ಪತಿ, ಪತಿಯ ನಡುವೆ ಮೊಟ್ಟೆ ಕರಿಗಾಗಿ ಜಗಳ ಉಂಟಾಗಿದೆ. ಈ ಸಂದರ್ಭದಲ್ಲಿ ಹೆಂಡತಿ ಗಂಡನ ನಾಲಿಗೆಯನ್ನು ಕಚ್ಚಿದ್ದು ಅದು ಸಂಪೂರ್ಣವಾಗಿ ಕತ್ತರಿಸಲ್ಪಟ್ಟಿದೆ. ಇದನ್ನು ಜೋಡಿಸುವುದು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಹೆಂಡತಿ ಕಚ್ಚಿದ್ದರಿಂದ ನಾಲಿಗೆ ಕಳೆದುಕೊಂಡ ಗಂಡ

ಸಂಗ್ರಹ ಚಿತ್ರ -

ಗಾಜಿಯಾಬಾದ್: ಮೊಟ್ಟೆ ಕರಿಗಾಗಿ (Egg Curry Dispute) ನಡೆದ ಜಗಳದ ಕಾರಣದಿಂದ ಗಂಡನೊಬ್ಬ ನಾಲಿಗೆ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ. ಬೇಗುಮಾಬಾದ್ ಪ್ರದೇಶದ ಸಂಜಯಪುರಿ ಪ್ರದೇಶದಲ್ಲಿ ಊಟದ ಸಮಯದಲ್ಲಿ ಎಗ್ ಕರಿಯ ಕುರಿತು ಪತಿ ಪತ್ನಿ ಜಗಳ ಮಾಡಿಕೊಂಡಿದ್ದು, ಪತ್ನಿ ಗಂಡನ ನಾಲಿಗೆಯನ್ನು ಕಚ್ಚಿದ್ದಾಳೆ. ಇದರಿಂದ ನಾಲಿಗೆ ಸಂಪೂರ್ಣ ತುಂಡಾಗಿದ್ದು, ಇದನ್ನು ಶಸ್ತ್ರಚಿಕಿತ್ಸೆ ನಡೆಸಿ ಸರಿಪಡಿಸುವುದು ಕೂಡ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಗಾಜಿಯಾಬಾದ್‌ನ ಬೇಗುಮಾಬಾದ್ ಪ್ರದೇಶದ ಸಂಜಯಪುರಿ ಪ್ರದೇಶದಲ್ಲಿ ಎಗ್ ಕರಿಯ ವಿಚಾರದಲ್ಲಿ ವಿಪಿನ್ ಮತ್ತು ಇಶಾ ನಡುವೆ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ವಿಪಿನ್ ಶಾಶ್ವತವಾಗಿ ಅಂಗವಿಕಲನಾಗಿದ್ದಾನೆ. ಪೊಲೀಸರು ಇಶಾಳನ್ನು ಬಂಧಿಸಿದ್ದಾರೆ. ವಿಪಿನ್ (32) ಮೀರತ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆಯ ಬಳಿಕವೂ ನಾಲಿಗೆಯ ಕತ್ತರಿಸಿದ ಭಾಗವನ್ನು ಮತ್ತೆ ಜೋಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಮದುವೆಗೂ ಮುನ್ನವೇ ಗರ್ಭಿಣಿಯಾದ ಯುವತಿ; ಹುಟ್ಟಿದಾಕ್ಷಣ ಮಗುವಿನ ಕತ್ತು ಹಿಸುಕಿ ಕೊಂದ ಅಜ್ಜಿ?

2025ರ ಜೂನ್ ನಲ್ಲಿ ವಿವಾಹವಾಗಿದ್ದ ವಿಪಿನ್ ಮತ್ತು ಇಶಾ ನಡುವೆ ಆಗಾಗ್ಗೆ ಜಗಳಗಳಾಗುತ್ತಿದ್ದವು. ಮೋದಿನಗರದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವಿಪಿನ್ ಪೋಷಕರಾದ ರಾಮ್ ಅವತಾರ್ ಮತ್ತು ಗೀತಾ ಅವರೊಂದಿಗೆ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದನು. ಸ್ಥಳಾವಕಾಶದ ಕೊರತೆಯ ಕಾರಣದಿಂದ ಮದುವೆಯಾದ ಮೇಲೆ ಮೇಲಿನ ಮಹಡಿಯಲ್ಲಿ ಒಂದು ಕೋಣೆ ನಿರ್ಮಿಸಿ ಇಶಾ ಮತ್ತು ವಿಪಿನ್ ಇದರಲ್ಲಿ ವಾಸಿಸತೊಡಗಿದರು.

ವಿಪಿನ್ ಮತ್ತು ಇಶಾ ಮದುವೆಯಾದ ಒಂದು ತಿಂಗಳಿನಲ್ಲೇ ಕುಟುಂಬದಲ್ಲಿ ಕಲಹ ಪ್ರಾರಂಭವಾಗಿತ್ತು. ಇಶಾ ತನಗಿಷ್ಟ ಬಂದಂತೆ ಬದುಕುತ್ತಾಳೆ. ಅವಳಿಗೆ ಏನೂ ಹೇಳುವ ಹಾಗಿಲ್ಲ. ರಹಸ್ಯವಾಗಿ ಮದ್ಯ ಮತ್ತು ಸಿಗರೇಟ್ ಸೇವಿಸಿ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಮಾಡುತ್ತಾಳೆ. ಮಗ ಆಕ್ಷೇಪಿಸಿದಾಗ ಅವನನ್ನು ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ವಿಪಿನ್ ತಾಯಿ ಹೇಳಿದ್ದಾರೆ.

ಎಗ್ ಕರಿ ವಿಚಾರದಲ್ಲಿ ಸೋಮವಾರ ಅವರಿಬ್ಬರ ಮಧ್ಯೆ ಜಗಳವಾಗಿದೆ. ವಿಪಿನ್ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಬಂದಿದ್ದು, ಪ್ರತಿದಿನ ಮೊಟ್ಟೆ ತಿನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದು ಇಶಾಳನ್ನು ಕೆರಳಿಸಿತ್ತು. ಇದು ಇಶಾಳ ಮದ್ಯದ ಕುಡಿಯುವ ವಿಚಾರಕ್ಕೆ ತಿರುಗಿದೆ. ಇಶಾ ಆತನಲ್ಲಿ ಕೋಳಿ ಮಾಂಸ ಆರ್ಡರ್ ಮಾಡಲು ಹೇಳಿದಳು. ಇದಕ್ಕೆ ವಿಪಿನ್ ಆಕ್ಷೇಪಿಸಿದ್ದಾನೆ. ರಾತ್ರಿ 11 ಗಂಟೆ ವೇಳೆಗೆ ಜಗಳ ತಾರಕಕ್ಕೇರಿದ್ದು, ವಿಪಿನ್ ಗೆ ಹಲವು ಬಾರಿ ಇಶಾ ಕಪಾಳಮೋಕ್ಷ ಮಾಡಿದ್ದಾಳೆ. ಅವಳನ್ನು ತಡೆಯಲು ವಿಪಿನ್ ಪ್ರಯತ್ನಿಸಿದ್ದು, ಈ ವೇಳೆ ಅವಳು ಅವನ ನಾಲಿಗೆಯನ್ನು ಬಲವಾಗಿ ಕಚ್ಚಿದ್ದಾಳೆ. ಇದರಿಂದ ವಿಪಿನ್ ಗೆ ತೀವ್ರವಾಗಿ ರಕ್ತಸ್ರಾವವಾಗಿದೆ. ಆತ ನೋವಿನಿಂದ ಕಿರುಚಿ, ನಾಲಗೆಯ ತುಂಡು ಹಿಡಿದು ಹೆತ್ತವರ ಬಳಿಗೆ ಓಡಿದನು. ರಕ್ತದ ಮಡುವಿನಲ್ಲಿದ್ದ ಆತನಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಬಳಿಕ ವಿಪಿನ್ ನನ್ನು ಮೀರತ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಇಶಾ ತಾನು ನಾಲಿಗೆ ಕಚ್ಚಿದ್ದಾಗಿ ಹೇಳಿದ್ದಾಳೆ ಎಂದು ಅವರು ಹೇಳಿದರು.

ವಿಪಿನ್ ನ ನಾಲಿಗೆ ಸುಮಾರು 2.5 ಸೆಂಟಿಮೀಟರ್ ನಷ್ಟು ಸಂಪೂರ್ಣವಾಗಿ ಕತ್ತರಿಸಲ್ಪಟ್ಟಿದೆ. ಇದನ್ನು ಮತ್ತೆ ಜೋಡಿಸುವುದು ಸಾಧ್ಯವಿಲ್ಲ. ಮತ್ತೆ ಎಂದಿಗೂ ಆತ ಸರಿಯಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮೂವರು ಪುರುಷರೊಂದಿಗೆ ಅಸಭ್ಯ ಸ್ಥಿತಿಯಲ್ಲಿ ಸಿಕ್ಕಿಬಿದ್ದ ಪತ್ನಿ; ಮದುವೆಯಾದ ನಾಲ್ಕೇ ತಿಂಗಳಿಗೆ ಕೊಲೆ ಮಾಡಿದ ಪತಿ

ಘಟನೆಯ ಬಳಿಕ ಸೊಸೆಯ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ಗಂಭೀರ ಗಾಯವನ್ನುಂಟು ಮಾಡಿದ್ದಾಳೆ ಎಂದು ಆರೋಪಿಸಿ ವಿಪಿನ್ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಬಂಧನಕ್ಕೆಂದು ಹೋದಾಗ ಇಶಾ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೂ ಜಗಳ ಮಾಡಿದ್ದಾಳೆ. ವಿಚಾರಣೆ ವೇಳೆ ಆಕೆ ಅತ್ತೆ, ಮಾವ ನೆರೆಹೊರೆಯವರನ್ನು ಸೇರಿಸಿ ನನಗೆ ಹೊಡೆಸಿದ್ದಾರೆ. ವಿಪಿನ್ ನಾಲಿಗೆಯನ್ನು ಕಚ್ಚಿದ್ದಾಗಿ ಹೇಳಿದ್ದಾಳೆ. ಅದು ಕೋಪದ ಭರದಲ್ಲಿ ಆಗಿದೆ. ಎಂದು ಅವಳು ಪೊಲೀಸರಿಗೆ ತಿಳಿಸಿದ್ದಾಳೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.