ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇರಳಂನಲ್ಲೊಬ್ಬ ವಿಕೃತ ಪತಿ: ಪತ್ನಿಯ ಖಾಸಗಿ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್, ಅಪ್ರಾಪ್ತ ಮಗಳ ಎದುರೇ ಲೈಂಗಿಕ ಕ್ರಿಯೆ

Keralam Horror: ತನ್ನದೇ ಪತ್ನಿಯ ಖಾಸಗಿ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಲ್ಲದೆ, ಅಪ್ರಾಪ್ತ ಮಗಳ ಎದುರೇ ವಿಕೃತ ಲೈಂಗಿಕ ಕ್ರಿಯೆ ಎಸಗುತ್ತಿದ್ದ ಆರೋಪದ ಮೇಲೆ ಕೇರಳಂನಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಾನವೀಯತೆಯನ್ನೇ ಮರೆತು ವಿಕೃತಿ ಮೆರೆದ ಈ ಘಟನೆಯಿಂದ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ.

ಪತ್ನಿಯ ಖಾಸಗಿ ವಿಡಿಯೊ ಸೇಲ್‌ ಮಾಡಿದ ಪಾಪಿ ಪತಿ!

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Aug 24, 2026 10:45 PM

ತಿರುವನಂತಪುರಂ, ಆ. 24: ಪವಿತ್ರ ದಾಂಪತ್ಯ ಮತ್ತು ತಂದೆ-ಮಗಳ ಸಂಬಂಧಕ್ಕೆ ಕಳಂಕ ತರುವಂತಹ ಅತಿ ಭೀಕರ ಘಟನೆಯೊಂದು ನೆರೆಯ ಕೇರಳಂನಲ್ಲಿ ಬೆಳಕಿಗೆ ಬಂದಿದೆ. ತನ್ನದೇ ಪತ್ನಿಯ ಖಾಸಗಿ ವಿಡಿಯೊಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಅಶ್ಲೀಲ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡಿದ್ದಲ್ಲದೆ, 4 ವರ್ಷದ ಅಪ್ರಾಪ್ತ ಮಗಳ ಎದುರೇ ನರರಾಕ್ಷಸನಂತೆ ವರ್ತಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ (Keralam Horror). ಸದ್ಯ ಈ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.

ಕೇರಳಂನ ಮಲಪ್ಪುರಂ ಮೂಲದ ಅಪರಾಧಿ ತಂದೆ-ಮಗಳ ಪವಿತ್ರ ಸಂಬಂಧಕ್ಕೆ ಕಳಂಕ ತರುವಂತೆ ನಡೆದುಕೊಂಡಿರುವ ಅಮಾನವೀಯ ಘಟನೆ ಇದಾಗಿದೆ. ಪತ್ನಿಯ ಅನುಮತಿಯಿಲ್ಲದೆ ಆಕೆಯ ಖಾಸಗಿ ವಿಡಿಯೊಗಳನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದ ಈತ, ಅವುಗಳನ್ನು ಇಂಟರ್‌ನೆಟ್‌ ಹಾಗೂ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮಗಳಲ್ಲಿ ಅಪ್‌ಲೋಡ್ ಮಾಡಿದ್ದ ಎನ್ನಲಾಗಿದೆ. ಆರೋಪಿಯು ಕೇವಲ ಖಾಸಗಿ ವಿಡಿಯೊಗಳನ್ನು ಹಂಚಿಕೊಂಡಿದ್ದಷ್ಟೆ ಅಲ್ಲದೆ ತನ್ನ ಅಪ್ರಾಪ್ತ ಮಗಳ ಸಮ್ಮುಖದಲ್ಲೇ ವಿಕೃತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದ ಎನ್ನುವ ಆಘಾತಕಾರಿ ವಿಚಾರ ತನಿಖೆಯಿಂದ ತಿಳಿದು ಬಂದಿದೆ.

ವರದಿಯ ಪ್ರಕಾರ, ಅಪರಾಧಿ ಕಳೆದ ನಾಲ್ಕು ವರ್ಷಗಳಿಂದ ತನ್ನ ಪತ್ನಿ ಮತ್ತು ಮಗಳೊಂದಿಗೆ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದ. ಅವರು ಅಲ್ಲಿದ್ದಾಗ ಆಕೆಯ ಖಾಸಗಿ ವಿಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಕುರಿತು ಸ್ನೇಹಿತರು ತಿಳಿಸಿದ ನಂತರ ಈ ದುಷ್ಕೃತ್ಯ ಬೆಳಕಿಗೆ ಬಂದವು. ಪೊಲೀಸರ ಮಾಹಿತಿ ಪ್ರಕಾರ, ಈ ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾಕ್ಕೆ ಅಪ್‌ಲೋಡ್ ಮಾಡುವ ವಿಷಯದಲ್ಲಿ ಪತ್ನಿಯು ಪತಿಗೆ ಎಚ್ಚರಿಕೆ ನೀಡಿದ್ದಳು. ಇದರೊಂದಿಗೆ ಅಪರಾಧಿಯು ಪತ್ನಿಗೆ ವೈಫ್ ಸ್ವಾಪಿಂಗ್ ಕೃತ್ಯದಲ್ಲಿ ತೊಡಗಿಸಿಕೊಳ್ಳುವಂತೆಯೂ ಒತ್ತಡ ಹೇರುತ್ತಿದ್ದ. ಆಕೆ ಇದಕ್ಕೆಂದೂ ಒಪ್ಪಿರಲಿಲ್ಲ.

ಬಿಎಂಟಿಸಿ ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಕಾಮುಕನಿಗೆ ಕಪಾಳಮೋಕ್ಷ ಮಾಡಿದ ಚಾಲಕ

ಘಟನೆಯ ನಂತರ, ದಂಪತಿ ಕೇರಳಂಗೆ ಹಿಂತಿರುಗಿದಾಗ ಪತ್ನಿಯು ಮಾನಸಿಕ ಆಪ್ತ ಸಮಾಲೋಚನೆ ತೆಗೆದುಕೊಳ್ಳುವಂತೆ ಪತಿಗೆ ಹೇಳಿದ್ದಾಳೆ. ಆಪ್ತ ಸಮಾಲೋಚನೆಯ ಹೊರತಾಗಿಯೂ ಆರೋಪಿ ತನ್ನ ಅಪ್ರಾಪ್ತ ಮಗಳ ಮುಂದೆಯೇ ಲೈಂಗಿಕ ಕೃತ್ಯದಲ್ಲಿ ತೊಡಗಿರುವ ಮತ್ತೊಂದು ವಿಡಿಯೊವನ್ನು ಪತ್ನಿ ನೋಡಿದ್ದಳು. ಈ ವಿಡಿಯೊದ ಬಗ್ಗೆ ಪ್ರಶ್ನಿಸಿದಾಗ, ಅಪರಾಧಿಯು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಆಕೆ ಪೋಲಿಸರಿಗೆ ದೂರು ನೀಡಿದ್ದಾಳೆ. ದೂರಿನ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೋಮವಾರ ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಹಾಗೂ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಬಳಿಯಿದ್ದ ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಿದೇಶಿ ಅಥವಾ ಸ್ಥಳೀಯ ವೆಬ್‌ಸೈಟ್‌ಗಳಿಗೆ ಈ ವಿಡಿಯೊಗಳನ್ನು ಮಾರಾಟ ಮಾಡಲಾಗಿದೆಯೇ ಅಥವಾ ಹಣ ಸಂಪಾದನೆಗೆ ಬಳಲಾಗಿದೆಯೇ ಎಂಬ ಕೋನದಲ್ಲಿ ಸೈಬರ್ ಕ್ರೈಮ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಂತ್ರಸ್ತರಾದ ತಾಯಿ ಮತ್ತು ಅಪ್ರಾಪ್ತ ಮಗಳಿಗೆ ಕಾನೂನು ಸೌಲಭ್ಯ ಹಾಗೂ ಮಾನಸಿಕ ಸಾಂತ್ವನ ನೀಡಲು ಕೌನ್ಸೆಲಿಂಗ್ ವ್ಯವಸ್ಥೆ ಮಾಡಲಾಗಿದೆ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.