ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಇಮ್ರಾನ್‌ ಖಾನ್‌ಗೆ ಉತ್ತಮ ಚಿಕಿತ್ಸೆ ಕೊಡಿಸಿʼ: ಪಾಕಿಸ್ತಾನ ಮಾಜಿ ಪ್ರಧಾನಿ ಪರ ಕಪಿಲ್‌ ದೇವ್‌ ಬ್ಯಾಟಿಂಗ್‌!

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ 1992ರ ವಿಶ್ವಕಪ್‌ ವಿಜೇತ ನಾಯಕ ಇಮ್ರಾನ್‌ ಖಾನ್‌ ಅವರಿಗೆ ಮಾನವೀಯ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಭಾರತದ ದಿಗ್ಗಜ ನಾಯಕ ಹಾಗೂ ಮಾಜಿ ವಿಶ್ವಕಪ್‌ ವಿಜೇತ ನಾಯಕ ಕಪಿಲ್‌ ದೇವ್‌ ಸೋಮವಾರ ಆಗ್ರಹಿಸಿದ್ದಾರೆ. ಇಮ್ರಾನ್‌ ಖಾನ್‌ ಅವರಿಗೆ ಅತ್ಯುತ್ತಮ ವೈದ್ಯಕೀಯ ಆರೈಕೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ʻಇಮ್ರಾನ್‌ ಖಾನ್‌ಗೆ ಉತ್ತಮ ಚಿಕಿತ್ಸೆ ಕೊಡಿಸಿʼ: ಕಪಿಲ್‌ ದೇವ್‌!

ಇಮ್ರಾನ್‌ ಖಾನ್‌ ಚಿಕಿತ್ಸೆಗೆ ಆಗ್ರಹಿಸಿದ ಕಪಿಲ್‌ ದೇವ್‌. -

Profile
Ramesh Kote Aug 24, 2026 10:33 PM

ನವದೆಹಲಿ: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ವಿಶ್ವಕಪ್‌ ವಿಜೇತ ನಾಯಕ ಇಮ್ರಾನ್‌ ಖಾನ್‌ (Imran Khan) ಅವರಿಗೆ ಮಾನವೀಯ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಭಾರತದ ದಿಗ್ಗಜ ಮಾಜಿ ನಾಯಕ ಕಪಿಲ್‌ ದೇವ್‌ ಅವರು ಆಗ್ರಹಿಸಿದ್ದಾರೆ. ಇಮ್ರಾನ್‌ ಖಾನ್‌ಗೆ ಅತ್ಯುತ್ತಮ ವೈದ್ಯಕೀಯ ಆರೈಕೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕಪಿಲ್‌ ದೇವ್‌ ಸಲಹೆ ನೀಡಿದ್ದಾರೆ.

ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಝ್‌ ಷರೀಫ್‌ ಅವರಿಗೆ ಮಾಜಿ ಕ್ರಿಕೆಟಿಗರು ಕಳೆದ ಆರು ತಿಂಗಳಲ್ಲಿ ಎರಡನೇ ಬಾರಿ ಪತ್ರ ಬರೆದಿದ್ದು, ಸುಪ್ರೀಂ ಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಇಮ್ರಾನ್‌ ಖಾನ್‌ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಸುನಿಲ್‌ ಗವಾಸ್ಕರ್‌ ಸೇರಿದಂತೆ 14 ಮಾಜಿ ಅಂತಾರಾಷ್ಟ್ರೀಯ ನಾಯಕರು, ಇಮ್ರಾನ್‌ ಖಾನ್‌ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಡಿಯಾಲಾ ಜೈಲಿನಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ಈ ಆತಂಕವನ್ನು ವ್ಯಕ್ತಪಡಿಸಿದ್ದರು.

IND vs SL: ಭರ್ಜರಿ ಸಿಕ್ಸರ್‌ನಿಂದ ಸೋಲಾರ್‌ ಪ್ಯಾನೆಲ್‌ ಒಡೆದು ಹಾಕಿದ ರಿಷಭ್‌ ಪಂತ್‌! ವಿಡಿಯೊ

ಕೈದಿಯಾಗಿದ್ದರೂ ಮೂಲಭೂತ ಸೌಲಭ್ಯ ಸಿಗಬೇಕು

ಪಾಕಿಸ್ತಾನದ ಕಾನೂನುಗಳ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ ಕಪಿಲ್‌ ದೇವ್‌, ಆದರೆ ಇಮ್ರಾನ್‌ ಖಾನ್‌ ಸೇರಿದಂತೆ ಯಾವುದೇ ಕೈದಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.

“ನಮಗೆ ಆ ದೇಶದ ಕಾನೂನು ಗೊತ್ತಿಲ್ಲ, ಅದು ಸರಿ. ಆದರೆ ಯಾರೇ ಆಗಿದ್ದರೂ ಒಬ್ಬ ಕೈದಿಗೆ ಮಾನವೀಯತೆ ಮತ್ತು ಮೂಲಭೂತ ಸೌಲಭ್ಯಗಳು ಇರಬೇಕು. ಅವರು ಆ ದೇಶದ ಮಾಜಿ ಪ್ರಧಾನಿಯಾಗಿದ್ದರು ಹಾಗೂ ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು,” ಎಂದು ಕಪಿಲ್‌ ದೇವ್‌ ತಿಳಿಸಿದ್ದಾರೆ.

“ಅವರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ದೊರೆಯಬೇಕು ಎಂಬುದು ನಮ್ಮ ಆಶಯ. ನಾವು ಕೇಳುತ್ತಿರುವುದು ಬೇರೇನೂ ಅಲ್ಲ, ಯಾವುದೇ ಉತ್ತರವನ್ನು ಕೇಳುತ್ತಿಲ್ಲ. ನಾವು ಕೇವಲ ಮನವಿ ಮಾಡುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ.

IND vs SL: ಮೈದಾನದಲ್ಲಿ ಕಿತ್ತಾಡಿಕೊಂಡಿದ್ದ ಯಶಸ್ವಿ ಜೈಸ್ವಾಲ್‌, ಅಸಿತ ಫೆರ್ನಾಂಡೊಗೆ ದಂಡ!

ನನ್ನ ಸ್ನೇಹಿತನನ್ನು ಬೆಂಬಲಿಸಲು ಬಯಸುತ್ತೇನೆ: ಕಪಿಲ್‌ ದೇವ್‌

ವಸೀಂ ಅಕ್ರಮ್‌ ಮತ್ತು ವಖಾರ್‌ ಯೂನಿಸ್‌ ಹೊರತುಪಡಿಸಿ, ಬೇರೆ ಯಾರೂ ಪಾಕಿಸ್ತಾನ ಕ್ರಿಕೆಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಮ್ರಾನ್‌ ಖಾನ್‌ ಅವರಿಗೆ ಬೆಂಬಲ ಅಥವಾ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸಾರ್ವಜನಿಕವಾಗಿ ಒತ್ತಾಯಿಸಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಪಿಲ್‌, “ಅವರನ್ನು ನಾನು ದೂಷಿಸುವುದಿಲ್ಲ. ಅವರು ಪಾಕಿಸ್ತಾನಿ ಕ್ರಿಕೆಟಿಗರು ಮತ್ತು ಅಲ್ಲಿಯೇ ವಾಸಿಸುತ್ತಿದ್ದಾರೆ. ಆದರೆ ನಾವು ಹೊರಗಿನಿಂದ ನೋಡುತ್ತಿದ್ದೇವೆ. ನಾವು ಒಟ್ಟಿಗೆ ಆಡಿದ ಮತ್ತು ಅವರ ಕ್ರಿಕೆಟ್‌ ಕೌಶಲವನ್ನು ಮೆಚ್ಚಿದ ನನ್ನ ಸ್ನೇಹಿತನನ್ನು ಬೆಂಬಲಿಸಲು ನಾನು ಬಯಸುತ್ತೇನೆ,” ಎಂದು ಹೇಳಿದ್ದಾರೆ.

ಇತ್ತೀಚಿನ ಪತ್ರಕ್ಕೆ ಸಹಿ ಹಾಕಿದ 22 ಪ್ರಮುಖ ಮಾಜಿ ಕ್ರಿಕೆಟಿಗರಲ್ಲಿ ಗ್ರೆಗ್‌ ಚಾಪೆಲ್‌, ಇಯಾನ್‌ ಚಾಪೆಲ್‌, ಆಲನ್‌ ಬಾರ್ಡರ್‌, ಸುನಿಲ್‌ ಗವಾಸ್ಕರ್‌, ಡೇವಿಡ್‌ ಗೊವಾರ್‌, ಕ್ಲೈವ್‌ ಲಾಯ್ಡ್‌, ಅರ್ಜುನ ರಣತುಂಗ, ಸ್ಟೀ ವಾ ಮತ್ತು ಜಾನ್‌ ರೈಟ್‌ ಸೇರಿದಂತೆ ಹಲವು ದಿಗ್ಗಜರು ಇದ್ದಾರೆ. ಇಮ್ರಾನ್‌ ಖಾನ್‌ ಅವರು 2018ರಿಂದ 2022ರವರೆಗೆ ಪಾಕಿಸ್ತಾನದ ಪ್ರಧಾನಮಂತ್ರಿಯಾಗಿದ್ದರು. ಅಧಿಕಾರದಿಂದ ಕೆಳಗಿಳಿದ ಬಳಿಕ ಭ್ರಷ್ಟಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ಅವರು ಜೈಲಿನಲ್ಲಿದ್ದಾರೆ.