ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಮ್ಮು-ಕಾಶ್ಮೀರದಲ್ಲಿ ಹೈಬ್ರಿಡ್‌ ಉಗ್ರರು ಸಕ್ರಿಯ; ದಾಳಿಯ ನಂತರ ಸಾಮಾನ್ಯ ಜನರ ನಡುವೆ ಬೆರೆತು ತಪ್ಪಿಸಿಕೊಳ್ಳುವ ತಂತ್ರ

Latif Bhat: ಜಮ್ಮು-ಕಾಶ್ಮೀರದ ಕುಲ್ಗಾಂನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಈ ದಾಳಿಯ ಹಿಂದೆ ಲಷ್ಕರ್-ಎ-ತೊಯ್ಬಾ ಕಮಾಂಡರ್ ಲತೀಫ್ ಭಟ್ ಹಾಗೂ ಆತನ ಸಹಚರರ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ.

ಇಬ್ಬರು ವಲಸೆ ಕಾರ್ಮಿಕರ ಹತ್ಯೆ, ಲತೀಫ್ ಭಟ್ ಮೇಲೆ ಶಂಕೆ

ಲತಿಫ್‌ ಭಟ್‌ (ಸಂಗ್ರಹ ಚಿತ್ರ) -

Profile
Sushmitha Jain Aug 1, 2026 8:36 PM

ಶ್ರೀನಗರ, ಆ. 1: ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದು, ಈ ದಾಳಿಯ ಹಿಂದೆ ಲಷ್ಕರ್-ಎ-ತೊಯ್ಬಾ (LeT) ಕಮಾಂಡರ್ ಲತೀಫ್ ಭಟ್ ಮತ್ತು ಆತನ ಸಹಚರರ ಕೈವಾಡವಿರುವ ಸಾಧ್ಯತೆಯಿದೆ ಎಂದು ಭದ್ರತಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ. ಶುಕ್ರವಾರ (ಜುಲೂ 31) ಸಂಜೆ ನಡೆದ ದಾಳಿಯಲ್ಲಿ ಛತ್ತೀಸ್‌ಗಢ ಮೂಲದ ದೀಪಕ್ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಕಾರ್ಮಿಕ ಭೂಪೇಂದ್ರ ಆಸ್ಪತ್ರೆಗೆ ಸಾಗಿಸುವ ಅಸುನೀಗಿದರು.

10 ದಿನಗಳಲ್ಲಿ ಇದು ಉಗ್ರರು ನಡೆಸಿದ ಎರಡನೇ ಟಾರ್ಗೆಟ್ ದಾಳಿ. ಕಳೆದ ವಾರ ಅನಂತನಾಗ್‌ನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಘಟನೆಯ ಬಳಿಕ ಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿವೆ.

ಪ್ರಾಥಮಿಕ ತನಿಖೆಯ ಪ್ರಕಾರ, ಎರಡೂ ದಾಳಿಗಳಲ್ಲಿ ಎಕೆ-47 ರೈಫಲ್ ಬದಲಿಗೆ ಸಣ್ಣ ಕ್ಯಾಲಿಬರ್ ಪಿಸ್ತೂಲ್ ಬಳಸಲಾಗಿದೆ. ಇದು ಸ್ಥಳೀಯವಾಗಿ ನೇಮಕಗೊಂಡ ಹೈಬ್ರಿಡ್ ಉಗ್ರರ ಕಾರ್ಯವೈಖರಿಯನ್ನು ಸೂಚಿಸುತ್ತಿದ್ದು, ದಾಳಿಯ ನಂತರ ಸಾಮಾನ್ಯ ಜನರ ನಡುವೆ ಬೆರೆತು ತಪ್ಪಿಸಿಕೊಳ್ಳುವ ತಂತ್ರವನ್ನು ಅನುಸರಿಸಿರುವ ಸಾಧ್ಯತೆಯಿದೆ.

ಭದ್ರತಾ ಅಧಿಕಾರಿಗಳ ಪ್ರಕಾರ, ಈ ದಾಳಿಗಳ ಮಾದರಿ ಲಷ್ಕರ್‌ನ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಂಘಟನೆಯ ಕಾರ್ಯವಿಧಾನಕ್ಕೆ ಹೊಂದಿಕೆಯಾಗುತ್ತದೆ. TRF ಉಗ್ರರು ಪಿಸ್ತೂಲ್ ಬಳಸಿ ಕ್ಷಿಪ್ರ ದಾಳಿ ನಡೆಸಿ ಜನಸಂದಣಿಯಲ್ಲಿ ಮಾಯವಾಗುವ ತಂತ್ರಕ್ಕೆ ಹೆಸರುವಾಸಿಯಾಗಿದ್ದಾರೆ.

ಭಾರತ ಬಾಹ್ಯಾಕಾಶಕ್ಕೆ ಉಪಗ್ರಹ ಕಳುಹಿಸಿದರೆ ಪಾಕಿಸ್ತಾನ ಗಡಿಯಾಚೆಗೆ ಭಯೋತ್ಪಾದಕರನ್ನು ಕಳುಹಿಸುತ್ತಿದೆ: ರಾಜನಾಥ್ ಸಿಂಗ್

ಭದ್ರತಾ ಸಂಸ್ಥೆಗಳ ಮಾಹಿತಿ ಪ್ರಕಾರ, ಲತೀಫ್ ಭಟ್‌ನ ಸಹಚರ ವಾರಿಸ್ ಶಾ ಈ ದಾಳಿಗಳಿಗೆ ಅಗತ್ಯವಾದ ಮಾಹಿತಿ ಸಂಗ್ರಹ ಹಾಗೂ ಲಾಜಿಸ್ಟಿಕ್ ನೆರವು ಒದಗಿಸಿದ್ದಾನೆ ಎಂಬ ಶಂಕೆಯಿದೆ. ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರು ಉಗ್ರರಿಗಾಗಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿವೆ.

ಲತೀಫ್ ಭಟ್ ಈ ಹಿಂದೆ ಶೋಪಿಯಾನ್ ಎನ್‌ಕೌಂಟರ್ ವೇಳೆ ಲಷ್ಕರ್‌ನ ಉನ್ನತ ಕಮಾಂಡರ್ ಜಾಕಿರ್ ಗಣೈ ಜೊತೆ ಸಿಕ್ಕಿಬಿದ್ದಿದ್ದ. ಆ ಕಾರ್ಯಾಚರಣೆಯಲ್ಲಿ ಜಾಕಿರ್ ಹತನಾಗಿದ್ದರೂ, ಲತೀಫ್ ಭಟ್ ತಪ್ಪಿಸಿಕೊಂಡಿದ್ದ. ಬಳಿಕ ಗಡಿಯಾಚೆಯ ಉಗ್ರ ಸಂಘಟನೆಗಳ ಸೂಚನೆಯಂತೆ ನಿದ್ರಿತ ಜಾಲಗಳನ್ನು ಪುನಃ ಸಕ್ರಿಯಗೊಳಿಸಿ, ಭದ್ರತಾ ಸಿಬ್ಬಂದಿ ಹಾಗೂ ಹೊರರಾಜ್ಯದ ನಾಗರಿಕರನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.