ಸಿಯಾ ಸಹೋದರನ ವಿರುದ್ಧ 10 ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಕೀಲ; ಏನಿದು ಪ್ರಕರಣ?
ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ನ ಸಹೋದರ ಸಾಹಿಲ್ ಗೋಯಲ್ ಗೆ ವಕೀಲರೊಬ್ಬರು 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದಾರೆ. ಸಿಯಾ ಪರ ವಕಾಲತ್ತು ವಹಿಸಲು ವಕೀಲರನ್ನು ಕುಟುಂಬ ನೇಮಿಸಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ ಬಳಿಕ ಅವರಿಗೆ ವಕೀಲ ಆಶುತೋಷ್ ಶ್ರೀವಾಸ್ತವ ಅವರು ನೋಟಿಸ್ ಕಳುಹಿಸಿದ್ದಾರೆ.
ಸಂಗ್ರಹ ಚಿತ್ರ -
ಮಹಾರಾಷ್ಟ್ರ: ಪುಣೆಯ (Pune) ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ (Ketan Agarwal murder case) ಬಂಧನದಲ್ಲಿರುವ ಸಿಯಾ ಗೋಯಲ್ (Siya Goyal Case) ಪರ ಯಾವುದೇ ವಕೀಲರನ್ನು ನೇಮಕ ಮಾಡಲಾಗಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಸಿಯಾ ಸಹೋದರ ಸಾಹಿಲ್ ಗೋಯಲ್ ಗೆ ವಕೀಲರಾದ ಆಶುತೋಷ್ ಶ್ರೀವಾಸ್ತವ (advocate Aashuutosh Srivastava) ಅವರು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ಸಾಹಿಲ್ ಗೋಯಲ್ ಗೆ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿರುವ ಅವರು ತಮ್ಮ ವೃತ್ತಿಪರ ಖ್ಯಾತಿಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶದ ಪ್ರಮುಖ ಕೊಲೆ ಪ್ರಕರಣ ಎಂದು ಗುರುತಿಸಲಾಗಿರುವ ಕೇತನ್ ಅಗರ್ವಾಲ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಯಾ ಗೋಯೆಲ್ ಪರ ಕಾನೂನುಬದ್ಧವಾಗಿ ಯಾರು ವಕಾಲತ್ತು ವಹಿಸುತ್ತಿದ್ದಾರೆ ಎಂಬ ಚರ್ಚೆಗಳು ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ. ಈ ನಡುವೆ ಇದೀಗ ಸಾಹಿಲ್ ಗೋಯಲ್ ವಿರುದ್ಧ ವಕೀಲ ಆಶುತೋಷ್ ಶ್ರೀವಾಸ್ತವ ಅವರು ಮಾನನಷ್ಟ ನೋಟಿಸ್ ಜಾರಿ ಮಾಡಿದ್ದಾರೆ.
ಅಕ್ರಮ ಸಂಬಂಧದ ಕುರಿತು ಪ್ರಶ್ನಿಸಿದ ಪತ್ನಿಯನ್ನೇ ರಾಡ್‌ನಿಂದ ಹೊಡೆದು ಕೊಂದ ಪತಿ
ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಸಿಯಾ ಗೋಯಲ್ ಮತ್ತು ಆಕೆಯ ಸ್ನೇಹಿತ ಚೇತನ್ ಚೌಧರಿ ಅವರನ್ನು ಸೋಮವಾರ ವಡ್ಗಾಂವ್ ಮಾವಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ತನಿಖೆ ಮುಂದುವರಿಸುವ ಸಲುವಾಗಿ ತನಿಖಾಧಿಕಾರಿಗಳು ಅವರನ್ನು ಕಸ್ಟಡಿಗೆ ಕೇಳಿರುವುದರಿಂದ ನ್ಯಾಯಾಲಯವು ಅವರಿಬ್ಬರಿಗೂ ಜುಲೈ 3 ರವರೆಗೆ ಪೊಲೀಸ್ ಕಸ್ಟಡಿಯನ್ನು ಎರಡನೇ ಬಾರಿಗೆ ವಿಸ್ತರಿಸಿದೆ.
ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಶ್ರೀವಾಸ್ತವ ಅವರು ತಾವು ಸಿಯಾ ಅವರನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡು ನ್ಯಾಯಾಲಯಕ್ಕೆ ಹಾಜರಾಗಿ ಅವರ ಸಹಿಯನ್ನು ಹೊಂದಿರುವ ವಕಾಲತ್‌ನಾಮವನ್ನು ಸಲ್ಲಿಸಿದರು. ಈ ವೇಳೆ ತಮ್ಮ ವಕೀಲರು ಶ್ರೀವಾಸ್ತವ ಅಲ್ಲ ವಿಪುಲ್ ದುಶಿಂಗ್ ಎಂದು ಸಿಯಾ ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೇ ದುಶಿಂಗ್ ಅವರನ್ನು ಅಧಿಕೃತವಾಗಿ ನೇಮಿಸಿರುವುದಾಗಿ ಅವರ ಕುಟುಂಬವು ನ್ಯಾಯಾಲಯಕ್ಕೆ ಹೇಳಿತು.
ಈ ನಡುವೆ ಸಾಹಿಲ್ ಗೋಯಲ್ ನಾವು ಸಿಯಾ ಪರ ವಾದಿಸಲು ವಕೀಲರನ್ನು ನೇಮಕ ಮಾಡಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದರು. ಈ ಕುರಿತು ನಮ್ಮ ಕುಟುಂಬವು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ಶ್ರೀವಾಸ್ತವ ಅವರು ಸಿಯಾಳ ಸಹಿಯನ್ನು ವಂಚನೆಯಿಂದ ಪಡೆದಿರಬಹುದು. ಅವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಶ್ರೀವಾಸ್ತವ ಅವರು ಸಾಹಿಲ್ ವಿರುದ್ಧ 10 ಕೋಟಿ ರೂಪಾಯಿ ಪರಿಹಾರ ಕೋರಿ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ.
9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದ ಅಪ್ರಾಪ್ತ; ಗೆಳೆಯರಿಂದ ಬಯಲಾಯ್ತು ಘೋರ ಕೃತ್ಯ
ಶ್ರೀವಾಸ್ತವ ಅವರು ತಮ್ಮ ಕಾನೂನು ತಂಡವು ನೇರವಾಗಿ ಸಿಯಾ ಅವರನ್ನು ಸಂಪರ್ಕಿಸಿತ್ತು. ಅವರು ಸ್ವಯಂಪ್ರೇರಣೆಯಿಂದ ತಮ್ಮ ಪರವಾಗಿ ಪ್ರತಿನಿಧಿಸಲು ಅಧಿಕಾರ ನೀಡಿದ್ದಾರೆ. ವಯಸ್ಕಳಾಗಿರುವ ಸಿಯಾ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ. ಸಾಹಿಲ್ ಅವರೊಂದಿಗೆ ನಮ್ಮ ತಂಡ ಎಂದಿಗೂ ಮಾತನಾಡಲಿಲ್ಲ. ನಾನು ಸಿಯಾಳೊಂದಿಗೆ ನೇರವಾಗಿ ಮಾತನಾಡಿಲ್ಲ. ಸಾಹಿಲ್ ಏಳು ದಿನಗಳಲ್ಲಿ 10 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಬೇಷರತ್ತಾಗಿ ಲಿಖಿತ ಕ್ಷಮೆಯಾಚನೆ ಮಾಡಬೇಕು ಮತ್ತು 48 ಗಂಟೆಗಳ ಒಳಗೆ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಎಂದು ನೋಟಿಸ್ ನಲ್ಲಿ ತಿಳಿಸಿದ್ದಾರೆ. ಈ ಕುರಿತು ಸಾಹಿಲ್ ಗೋಯಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.