ಪಾಕಿಸ್ತಾನದೊಂದಿಗೆ ನಂಟು: ಉತ್ತರಪ್ರದೇಶದಲ್ಲಿ ಬೃಹತ್ ಬೇಹುಗಾರಿಕೆ ಜಾಲ ಪತ್ತೆ
ಪಾಕಿಸ್ತಾನದೊಂದಿಗೆ ನಂಟು ಹೊಂದಿರುವ ಬೃಹತ್ ಬೇಹುಗಾರಿಕೆ ಜಾಲವನ್ನು ಉತ್ತರ ಪ್ರದೇಶದಲ್ಲಿ ಪತ್ತೆಹಚ್ಚಲಾಗಿದೆ.ಗುಪ್ತಚರ ಇಲಾಖೆ ಮಾಹಿತಿಯಂತೆ ಮಾರ್ಚ್ 14ರಂದು ಗಾಜಿಯಾಬಾದ್‌ನ ಕೌಶಂಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಪೊಲೀಸರಿಗೆ ಇದು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ಬಹುದೊಡ್ಡ ಬೇಹುಗಾರಿಕೆ ಜಾಲ ಎಂಬುದು ತಿಳಿದು ಬಂದಿದೆ.
-
ಉತ್ತರ ಪ್ರದೇಶ: ಪಾಕಿಸ್ತಾನದೊಂದಿಗೆ (Pakistan) ಸಂಪರ್ಕ ಹೊಂದಿದ್ದ ಬಹುದೊಡ್ಡ ಬೇಹುಗಾರಿಕೆ ಜಾಲವನ್ನು (spy network) ಉತ್ತರಪ್ರದೇಶದಲ್ಲಿ (Uttar Pradesh) ಪೊಲೀಸರು ಬೇಧಿಸಿದ್ದಾರೆ. ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಗಾಜಿಯಾಬಾದ್‌ನ ಕೌಶಂಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಅನುಮಾನಾಸ್ಪದ ಚಟುವಟಿಕೆಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಸುಮಾರು 22 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಹಲವಾರು ಅಪ್ರಾಪ್ತ ವಯಸ್ಕರು ಕೂಡ ಸೇರಿದ್ದಾರೆ. ಇವರು ಉತ್ತರ ಪ್ರದೇಶದ ಭೋವಾಪುರದಲ್ಲಿ ಹಲವು ಚಿತ್ರಗಳನ್ನು ತೆಗೆದು ವಿದೇಶಕ್ಕೆ ರವಾನಿಸುತ್ತಿದ್ದರು ಎನ್ನಲಾಗಿದೆ.
ಉತ್ತರ ಪ್ರದೇಶದ ಭೋವಾಪುರದಲ್ಲಿ ಕೆಲವು ಯುವಕರು ರೈಲ್ವೆ ನಿಲ್ದಾಣಗಳು, ಮಿಲಿಟರಿ ನೆಲೆಗಳ ಫೋಟೋ, ವಿಡಿಯೊಗಳನ್ನು ತೆಗೆದು ವಿದೇಶಕ್ಕೆ ಕಳುಹಿಸುತ್ತಿದ್ದರು. ಇದರ ಕುರಿತು ಮಾಹಿತಿ ತಿಳಿದ ತಕ್ಷಣವೇ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಪೊಲೀಸರು ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅವರು ಹಣಕ್ಕಾಗಿ ಇದನ್ನು ಮಾಡುತ್ತಿದ್ದರು. ಇಂತಹ ಚಟುವಟಿಕೆಗಳಿಗೆ ಹೆಚ್ಚಿನ ಯುವಕರನ್ನು ನೇಮಿಸಿಕೊಳ್ಳುವಂತೆ ಅವರಿಗೆ ತಿಳಿಸಲಾಗಿತ್ತು ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರು ಆರೋಪಿಗಳಲ್ಲಿ ಐವರು ಪುರುಷರು, ಓರ್ವ ಮಹಿಳೆ ಸೇರಿದ್ದಾರೆ. ಇವರ ಫೋನ್‌ಗಳಲ್ಲಿ ಹಲವಾರು ವಿಡಿಯೊ, ಛಾಯಾಚಿತ್ರ, ಸ್ಥಳಗಳು, ಮಿಲಿಟರಿಗೆ ಸಂಬಂಧಿಸಿದ ಸ್ಥಳಗಳ ಚಿತ್ರಗಳು ಕಂಡು ಬಂದಿದೆ.
ಗುಪ್ತಚರ ಇಲಾಖೆ ಮಾಹಿತಿ ಸಿಕ್ಕಿದ ಬಳಿಕ ಇಂದಿರಾಪುರಂ ಪೊಲೀಸ್, ಅಪರಾಧ ಶಾಖೆ, ಸೈಬರ್ ಅಪರಾಧ, ಗುಪ್ತಚರ ಮತ್ತು ಸ್ವಾಟ್ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (SIT) ತಕ್ಷಣವೇ ರಚಿಸಲಾಯಿತು. ಮಾರ್ಚ್ 14ರಂದು ಬಂಧಿಸಲಾದ ಆರೋಪಿಗಳ ವಿಚಾರಣೆ ಮಾರ್ಚ್ 17ರಿಂದ ಪ್ರಾರಂಭವಾಗಿದೆ. ಈ ಜಾಲವನ್ನು ಸುಹೇಲ್ ಮಲಿಕ್, ನೌಶಾದ್ ಅಲಿ ಮತ್ತು ಸಮೀರ್ ಅಲಿಯಾಸ್ ಶೂಟರ್ ನಡೆಸುತ್ತಿದ್ದರು ಎಂದು ಗುರುತಿಸಲಾಗಿದ್ದು, ಇವರು ಪಾಕಿಸ್ತಾನದಿಂದ ಬರುವ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.
ಇವರ ಪ್ರತಿ ಮಾಹಿತಿಗೆ 5 ರಿಂದ 20,000 ರೂ.ಗಳವರೆಗೆ ಪಾವತಿಸಲಾಗುತ್ತಿತ್ತು. ಬಂಧಿತ ಆರು ಆರೋಪಿಗಳಲ್ಲಿ ನಾಲ್ವರು ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾಕ್ಕೆ ಪ್ರಯಾಣಿಸಿದ್ದರು. ಅಲ್ಲಿಂದ ಅವರು ಸೂಕ್ಷ್ಮ ಗುಪ್ತಚರ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡನೇ ದೊಡ್ಡ ಪ್ರಮಾಣದ ದಾಳಿಗೆ ಸಿದ್ಧತೆಯನ್ನು ಈ ಜಾಲ ನಡೆಸುತ್ತಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಭಯೋತ್ಪಾದಕ ಯೋಜನೆಗಳನ್ನು ಪತ್ತೆಹಚ್ಚಿದ ಎಸ್ ಐಟಿ, ಇದಕ್ಕಾಗಿ ಮೊದಲು ದೆಹಲಿ-ಜಮ್ಮು ರೈಲ್ವೆ ಕಾರಿಡಾರ್‌ನಲ್ಲಿ ಸೌರಶಕ್ತಿ ಚಾಲಿತ ಸಿಸಿಟಿವಿ ಕೆಮರಾಗಳನ್ನು ಸ್ಥಾಪಿಸಿತ್ತು. ದೆಹಲಿ ಕಂಟೋನ್ಮೆಂಟ್ ಮತ್ತು ಹರಿಯಾಣದ ಸೋನಿಪತ್‌ನಲ್ಲಿರುವ ಕೆಮರಾವನ್ನು ವಿಧಿವಿಜ್ಞಾನ ತಂಡಗಳು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದೆ.
ಕೊಲ್ಹಾಪುರದ ದೇವಾಲಯದಲ್ಲಿ ದೇವಿಯ ಎದುರೇ ಪುರೋಹಿತರಿಂದ ಭಕ್ತರ ಮೇಲೆ ಹಲ್ಲೆ; ವಿಡಿಯೊ ವೈರಲ್
ಇದೇ ಪ್ರಕರಣಕ್ಕೆ ಸಂಬಂಧಿಸಿ ಸಿಮ್ ಪೂರೈಕೆ ದಂಧೆ ನಡೆಸುತ್ತಿದ್ದ ಐವರು ಅಪ್ರಾಪ್ತ ವಯಸ್ಕರು ಸೇರಿದಂತೆ ಒಂಬತ್ತು ಜನರನ್ನು ಮಾರ್ಚ್ 20ರಂದು ಎಸ್ ಐಟಿ ಬಂಧಿಸಿತ್ತು. ಇದು ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ನೇಪಾಳದೊಂದಿಗೆ ಸಂಪರ್ಕ ಜಾಲವನ್ನು ಹೊಂದಿದೆ. ಮಾರ್ಚ್ 22 ರಂದು ನೌಶಾದ್ ಅಲಿ ಅಲಿಯಾಸ್ ಲಾಲು ಎಂಬಾತನನ್ನು ಫರಿದಾಬಾದ್‌ನಲ್ಲಿ ಬಂಧಿಸಲಾಗಿದೆ. ಆತ ಟೈರ್-ಪಂಕ್ಚರ್ ರಿಪೇರಿ ಅಂಗಡಿಯನ್ನು ನಡೆಸುತ್ತಿದ್ದನು. ಆತನೊಂದಿಗೆ, ಮಥುರಾದಲ್ಲಿ ಇ-ರಿಕ್ಷಾ ಚಾಲಕಿಯಾಗಿದ್ದ ಅಪ್ರಾಪ್ತ ವಯಸ್ಕ ಮೀರಾಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಆಕೆ ಪಾಕಿಸ್ತಾನದಲ್ಲಿರುವ ಸರ್ಫರಾಜ್ ಅಲಿಯಾಸ್ ಸರ್ದಾರ್ ಎಂಬಾತನೊಂದಿಗೆ ಸಂಪರ್ಕದಲ್ಲಿದ್ದಳು. ಸಮೀರ್ ಅಲಿಯಾಸ್ ಶೂಟರ್ ಇನ್ನೂ ಪತ್ತೆಯಾಗಿಲ್ಲ.