110 ಜನರನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾ ಮಿಲಿಟರಿ ವಿಮಾನ ಪತನ; 80 ಮಂದಿ ಸಾವಿನ ಶಂಕೆ
Colombian Military Plane Crashes: ಸುಮಾರು 110 ಜನರನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾದ ಮಿಲಿಟರಿ ವಿಮಾನ ಸೋಮವಾರ (ಮಾರ್ಚ್ 23) ಪತನವಾಗಿದ್ದು, ಸುಮಾರು 80 ಮಂದಿ ಮೃತಪಟ್ಟಿದ್ದಾರೆ. ಕೊಲಂಬಿಯಾದ ಪೋರ್ಟೊ ಲೆಗುಯಿಜಾಮೊದ ದಕ್ಷಿಣ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ -
ಬೊಗೊಟ, ಮಾ. 23: ಸುಮಾರು 110 ಜನರನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾದ ಮಿಲಿಟರಿ ವಿಮಾನ ಸೋಮವಾರ (ಮಾರ್ಚ್ 23) ಪತನವಾಗಿದೆ (Colombian Military Plane Crashes). ಕೊಲಂಬಿಯಾದ ಪೋರ್ಟೊ ಲೆಗುಯಿಜಾಮೊದ ದಕ್ಷಿಣ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ಕನಿಷ್ಠ 80 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. 20 ಮಂದಿ ಗಾಯಗೊಂಡಿದ್ದಾರೆ. ʼʼಲಾಕ್‌ಹೀಡ್ ಮಾರ್ಟಿನ್ ಹರ್ಕ್ಯುಲಸ್ ಸಿ -130 ವಿಮಾನವು ಕೊಲಂಬಿಯಾದ ದಕ್ಷಿಣ ಅಮೆಜಾನ್ ಪ್ರದೇಶದ ಪೆರುವಿನ ಗಡಿಯ ಸಮೀಪದಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಸಶಸ್ತ್ರ ಪಡೆಗಳ ಸೈನಿಕರನ್ನು ಕರೆದೊಯ್ಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆʼʼ ಎಂದು ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಝ್ (Pedro Sánchez) ಅವರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
"ಮೃತರ ನಿಖರ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ. ಜತೆಗೆ ಅಪಘಾತದ ಕಾರಣವೂ ಗೊತ್ತಾಗಿಲ್ಲ" ಎಂದು ಪೆಡ್ರೊ ಸ್ಯಾಂಚೆಝ್ ಹೇಳಿದ್ದಾರೆ. "ರಕ್ಷಣಾ ಘಟಕಗಳು ಸ್ಥಳಕ್ಕೆ ಧಾವಿಸಿವೆ. ಇದು ದೇಶಕ್ಕೆ ತೀವ್ರ ನೋವಿನ ಘಟನೆ. ನಮ್ಮ ಪ್ರಾರ್ಥನೆಗಳು ಸ್ವಲ್ಪ ಮಟ್ಟಿಗೆ ಸಾಂತ್ವನವನ್ನು ತರಲಿ" ಎಂದು ನೋವು ತೋಡಿಕೊಂಡಿದ್ದಾರೆ.
ಕೊಲಂಬಿಯಾದಲ್ಲಿ ಮಿಲಿಟರಿ ವಿಮಾನ ಪತನ:
BREAKING: Colombian military plane believed to be carrying approximately 100 people crashes in Puerto Leguízamo, defense minister says. pic.twitter.com/pNWy3TP8Z0
— AZ Intel (@AZ_Intel_) March 23, 2026
"ಕೊಲಂಬಿಯಾದ ಫ್ಯುರ್ಜಾ ಏರೋಸ್ಪೇಷಿಯಲ್ ಹರ್ಕ್ಯುಲಸ್ ವಿಮಾನವು ನಮ್ಮ ಸೈನಿಕರನ್ನು ಕರೆದೊಯ್ಯುತ್ತಿದ್ದಾಗ ಪತನವಾಗಿದೆ. ಪೋರ್ಟೊ ಲೆಗುಯಿಜಾಮೊನಿಂದ (ಪುಟುಮಾಯೊ) ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಅಪಘಾತಕ್ಕೀಡಾಗಿದೆʼʼ ಎಂದು ಪೆಡ್ರೊ ಹೇಳಿದ್ದಾರೆ. "ಘಟನೆಯ ಸ್ಥಳಕ್ಕೆ ಮಿಲಿಟರಿ ಘಟಕದ ಸದಸ್ಯರು ಧಾವಿಸಿದ್ದಾರೆ. ಅದಾಗ್ಯೂ ಸಂತ್ರಸ್ತರ ನಿಖರ ಸಂಖ್ಯೆ ಮತ್ತು ಅಪಘಾತದ ಕಾರಣ ಇನ್ನೂ ನಿರ್ಧರಿಸಲಾಗಿಲ್ಲʼʼ ಎಂದು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭವಾಗಿದೆ.
ಲ್ಯಾಂಡಿಂಗ್ ವೇಳೆ ಮತ್ತೊಂದು ತೇಜಸ್ ಲಘು ಯುದ್ಧ ವಿಮಾನ ಪತನ; ವಾಯುಪಡೆ ಹೇಳಿದ್ದೇನು?
ನಗರ ಕೇಂದ್ರದಿಂದ ಸುಮಾರು 3 ಕಿ.ಮೀ. ದೂರದಲ್ಲಿ ಅಪಘಾತ ಸಂಭವಿಸಿದೆ ಎಂದು ಬ್ಲ್ಯೂರೇಡಿಯೋ ವರದಿ ಮಾಡಿದೆ. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ವಿಮಾನ ಪತನದ ದೃಶ್ಯ:
Video footage shows the burning wreckage of a Colombian Air Force C-130 Hercules after crashing earlier during take off from Puerto Leguízamo, with authorities reporting that the death toll includes at least 90 officers with the Fuerza Pública de Colombia.
— Mor Edge Insight (@MorEdge_Insight) March 23, 2026
(OSINTdefender) pic.twitter.com/yH5bNAkXkB
ಹರ್ಕ್ಯುಲಸ್ ಸಿ-130 ವಿಮಾನಗಳನ್ನು ಮೊದಲು 1950ರ ದಶಕದಲ್ಲಿ ಪರಿಚಯಿಸಲಾಯಿತು. ಕೊಲಂಬಿಯಾ 1960ರ ದಶಕದ ಉತ್ತರಾರ್ಧದಲ್ಲಿ ಬಳಸಲು ಆರಂಭಿಸಿತು. ಈ ವರ್ಷದ ಫೆಬ್ರವರಿ ಅಂತ್ಯದಲ್ಲಿ, ಬೊಲಿವಿಯನ್ ವಾಯುಪಡೆಗೆ ಸೇರಿದ ಮತ್ತೊಂದು ಹರ್ಕ್ಯುಲಸ್ ಸಿ-130 ವಿಮಾನವು ಜನನಿಬಿಡ ಆಲ್ಟೊ ನಗರದಲ್ಲಿ ಪತನಗೊಂಡು 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ವಸತಿ ಕಟ್ಟಡ ನಾಶವಾಗಿದ್ದಲ್ಲದೇ 30 ಜನರು ಗಾಯಗೊಂಡಿದ್ದರು.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.