ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇನ್ಸ್ಟಾಗ್ರಾಂನಲ್ಲಿ ಶುರುವಾದ ಪ್ರೀತಿ ಕೊಲೆಯಲ್ಲಿ ಅಂತ್ಯ; ಲಿವ್‌ ಇನ್‌ ಗೆಳತಿಯ ಕತ್ತು ಹಿಸುಕಿ ಕೊಂದ ಪ್ರಿಯಕರ

ಇನ್‌ಸ್ಟಾಗ್ರಾಂನಲ್ಲಿ ಶುರುವಾದ ಪ್ರೀತಿ ಕೊಲೆಯಲ್ಲಿ ಅಂತ್ಯವಾಗಿದ್ದು, ಪ್ರಿಯಕರ ತನ್ನ ಲಿವ್‌ ಇನ್‌ ಗೆಳತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಶನಿವಾರ ರಾತ್ರಿ ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶರತ್‌ ಹಾಗೂ ಅನುಷಾ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಶರತ್‌ ವಾಟರ್‌ ಟ್ಯಾಂಕ್‌ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಮೂಲತಃ ಹಾಸನದವರಾದ ಇವರು 6 ತಿಂಗಳಿನಿಂದ ಇ ಜೋಡಿ ಮಲ್ಲೇಶ್ವರದಲ್ಲಿ ಲಿವ್‌ ಇನ್‌ನಲ್ಲೇ ವಾಸವಿದ್ದರು.

ಲಿವ್‌ ಇನ್‌ ಗೆಳತಿಯ ಕತ್ತು ಹಿಸುಕಿ ಕೊಂದ ಪ್ರಿಯಕರ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 17, 2026 11:26 AM

ಬೆಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಶುರುವಾದ ಪ್ರೀತಿ ಕೊಲೆಯಲ್ಲಿ ಅಂತ್ಯವಾಗಿದ್ದು, ಪ್ರಿಯಕರ ತನ್ನ ಲಿವ್‌ ಇನ್‌ ಗೆಳತಿಯ (Live in Relationship) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಶನಿವಾರ ರಾತ್ರಿ (Murder Case) ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅನುಷಾ (20) ಕೊಲೆಯಾದ ಯುವತಿಯಾಗಿದ್ದು, ಶರತ್(25) ಬಂಧಿತ ಆರೋಪಿಯಾಗಿದ್ದಾನೆ. ಘಟನೆ ಸಂಬಂಧ ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ

ಶರತ್‌ ಹಾಗೂ ಅನುಷಾ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಶರತ್‌ ವಾಟರ್‌ ಟ್ಯಾಂಕ್‌ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಮೂಲತಃ ಹಾಸನದವರಾದ ಇವರು 6 ತಿಂಗಳಿನಿಂದ ಇ ಜೋಡಿ ಮಲ್ಲೇಶ್ವರದಲ್ಲಿ ಲಿವ್‌ ಇನ್‌ನಲ್ಲೇ ವಾಸವಿದ್ದರು. ವಯಕ್ತಿಕ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಸಿಟ್ಟಲ್ಲಿ ಶರತ್‌ ಅನುಷಾಳ ಕತ್ತು ಹಿಸುಕಿದ್ದು, ಆಕೆ ಮೃತಪಟ್ಟಿದ್ದಾಳೆ. ಕೊಲೆಯಾದ ಬಗ್ಗೆ ಶರತ್ ಸೋಮವಾರ ವಕೀಲರಿಗೆ ವಿಚಾರ ತಿಳಿಸಿದ್ದ‌. ಬಳಿಕ ವಕೀಲರು ಪೊಲೀಸರಿಗೆ ವಿಚಾರ ತಿಳಿದ್ದಾರೆ. ಬಳಿಕ ಶೇಷಾದ್ರಿಪುರಂ ಪೊಲೀಸರು ಪರಿಶೀಲನೆ ನಡೆಸಿ, ಕೇಸ್‌ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಅನುಷಾ ಮೃತದೇಹವನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಿಲಾಗಿದೆ.

ಅಳಿಯನಿಂದಲೇ ಮಾವನ ಕೊಲೆ

ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರದ ನೇರಳೇಘಟ್ಟ ಕಾಲನಿಯಲ್ಲಿ ನಡೆದಿದೆ. ನರಸಪ್ಪ (61) ಹತ್ಯೇಗಿಡಾದವರು. ಅಳಿಯ ಲಕ್ಷ್ಮಣ (40) ಆರೋಪಿ ಎನ್ನಲಾಗಿದೆ. ನರಸಪ್ಪ ಅವರ ಮನೆಯಲ್ಲಿಯೇ ಪುತ್ರಿ ಹಾಗೂ ಆಕೆಯ ಪತಿ ಲಕ್ಷ್ಮಣ ವಾಸವಿದ್ದರು. ಮನೆಬಿಟ್ಟು ಹೋಗುವಂತೆ ನರಸಪ್ಪ ಪದೇಪದೆ ಹೇಳುತ್ತಿದ್ದ ಕಾರಣ ಈ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಸೋಮವಾರವೂ ನರಸಪ್ಪ ಮಗಳೊಂದಿಗೆ ಜಗಳವಾಡಿ, ಆಕೆ ಮೇಲೆ ಹಲ್ಲೆ ಮಾಡಿದ್ದ.

2 ಕೋಟಿ ಇನ್ಷುರೆನ್ಸ್ ಹಣಕ್ಕಾಗಿ ಮಾಜಿ ಸೈನಿಕ ಕೊಲೆ: ಪತ್ನಿ, ಆಕೆಯ ಲವರ್‌ ಸೇರಿ 9 ಮಂದಿ ಬಂಧನ

ಇದರಿಂದ ಕೋಪಗೊಂಡ ಲಕ್ಷ್ಮಣ, ನನ್ನ ಹೆಂಡತಿಗೆ ಹೊಡೆಯುತ್ತೀಯಾ? ಎಂದು ಮಾವನೊಂದಿಗೆ ವಾಗ್ವಾದಕ್ಕಿಳಿದು ಬಳಿಕ ಕಲ್ಲಿನಿಂದ ಎರಡೂ ಕಾಲುಗಳ ಮೇಲೆ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡ ನರಸಪ್ಪ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಿಸದೆ ಸೋಮವಾರ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಆರೋಪಿ ಲಕ್ಷ್ಮಣನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.