ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೈದ್ಯನಾಗು ಎಂದಿದ್ದಕ್ಕೆ ತಂದೆಗೇ ಗುಂಡು ಹಾರಿಸಿದ ಮಗ; ತಂಗಿಯೆದುರೇ ಶವ ಕೊಚ್ಚಿ ಡ್ರಮ್‌ನಲ್ಲಿಟ್ಟ!

21 ವರ್ಷದ ಯುವಕನೊಬ್ಬ ತನ್ನ ಹೆತ್ತ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ. ವೃತ್ತಿಜೀವನದ ಬಗ್ಗೆ ತಂದೆ 49 ವರ್ಷದ ಮನ್ವೇಂದ್ರ ಸಿಂಗ್ ಹಾಗೂ ಮಗನಿಗೆ ಜಗಳ ನಡೆದಿತ್ತು ಇದೇ ಹಿನ್ನೆಲೆಯನ್ನು ಮಗ ಸಿಂಗ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ದೇಹವನ್ನು ಕತ್ತರಿಸಿ ಡ್ರಮ್​​ನಲ್ಲಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ವೈದ್ಯನಾಗು ಎಂದಿದ್ದಕ್ಕೆ ತಂದೆಗೇ ಗುಂಡು ಹಾರಿಸಿದ ಮಗ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Feb 24, 2026 9:12 AM

ನವದೆಹಲಿ: 21 ವರ್ಷದ ಯುವಕನೊಬ್ಬ ತನ್ನ ಹೆತ್ತ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಲಖನೌನಲ್ಲಿ ನಡೆದಿದೆ. ವೃತ್ತಿಜೀವನದ ಬಗ್ಗೆ ತಂದೆ 49 ವರ್ಷದ ಮನ್ವೇಂದ್ರ ಸಿಂಗ್ ಹಾಗೂ (Murder Case) ಮಗನಿಗೆ ಜಗಳ ನಡೆದಿತ್ತು ಇದೇ ಹಿನ್ನೆಲೆಯನ್ನು ಮಗ ಸಿಂಗ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ದೇಹವನ್ನು ಕತ್ತರಿಸಿ ಡ್ರಮ್​​ನಲ್ಲಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಔಷಧ ಮತ್ತು ಮದ್ಯದ ವ್ಯವಹಾರ ನಡೆಸುತ್ತಿದ್ದ ಮನ್ವೇಂದ್ರ ಸಿಂಗ್ ಶುಕ್ರವಾರದಿಂದ ನಾಪತ್ತೆಯಾಗಿದ್ದರು.

ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಅವರ ಮನೆಗೆ ಭೇಟಿ ನೀಡಿ, ಬ್ಯಾರೆಲ್‌ನಲ್ಲಿ ಅವರ ದೇಹದ ಭಾಗಗಳನ್ನು ಕಂಡಿದ್ದಾರೆ. ಘಟನೆ ಕುರಿತು ಮಗ ಅಕ್ಷತ್ ಪ್ರತಾಪ್ ಸಿಂಗ್​​ನನ್ನು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿತ್ತು. ಪೊಲೀಸರ ಪ್ರಕಾರ, ಮನ್ವೇಂದ್ರ ಸಿಂಗ್ ಮಗ ಅಕ್ಷತ್ ಬಿ.ಕಾಂ ಓದುತ್ತಿದ್ದ, ಫೆಬ್ರವರಿ 20ರಂದು ಸಿಂಗ್ ಕಾಣೆಯಾಗಿದ್ದರು, ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಆಶಿಯಾನಾದ ಸೆಕ್ಟರ್ ಎಲ್ ನಲ್ಲಿರುವ ಮನೆ ಸಂಖ್ಯೆ 91 ರಲ್ಲಿ ಡ್ರಮ್ ನಲ್ಲಿ ಮನ್ವೇಂದ್ರ ಅವರ ದೇಹವು ಡ್ರಮ್​ನಲ್ಲಿ ಪತ್ತೆಯಾಗಿತ್ತು, ತಂದೆ ಬೈದಿದ್ದರಿಂದ ಮಗ ನೊಂದಿದ್ದ. ಇದೇ ಘಟನೆಗೆ ಕಾರಣವಾಗಿರಬಹುದು ಎಂದು ನಂಬಲಾಗಿದೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ, ಅಕ್ಷತ್ ತಾನು 12 ನೇ ತರಗತಿಯಲ್ಲಿ ಜೀವಶಾಸ್ತ್ರ ಪದವಿಯೊಂದಿಗೆ ಉತ್ತೀರ್ಣನಾಗಿದ್ದೇನೆ ಎಂದು ಹೇಳಿದ್ದಾನೆ.

ತೀವ್ರ ವಿಚಾರಣೆಯ ನಂತರ ಅಕ್ಷತ್ ಕೊಲೆ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ನೀಟ್ ಪರೀಕ್ಷೆಗೆ ತಯಾರಿ ನಡೆಸುವಂತೆ ತನ್ನ ತಂದೆಯಿಂದ ಒತ್ತಡ ಇತ್ತು. ಇದರಿಂದಾಗಿ ತಾನು ಖಿನ್ನತೆಗೆ ಜಾರುತ್ತಿದ್ದೆ. ಇದೇ ಸಿಟ್ಟಿನಲ್ಲಿ ಕೊಲೆ ಮಾಡಿದೆ ಎಂದು ಆತ ಹೇಳಿದ್ದಾನೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಕುರಿತು ತಂದೆ ಮತ್ತು ಮಗನ ನಡುವೆ ಜಗಳ ನಡೆದಿತ್ತು ಎಂದು ಡಿಸಿಪಿ ವಿಕ್ರಾಂತ್ ವೀರ್ ದೃಢಪಡಿಸಿದರು. ಕೋಪದ ಭರದಲ್ಲಿ, ಅಕ್ಷತ್ ತನ್ನ ತಂದೆಗೆ ರೈಫಲ್‌ನಿಂದ ಗುಂಡು ಹಾರಿಸಿ ಕೊಂದಿದ್ದ. ನಂತರ ಶವವನ್ನು ಮೂರನೇ ಮಹಡಿಯಿಂದ ನೆಲ ಮಹಡಿಗೆ ಸ್ಥಳಾಂತರಿಸಿದ್ದಾನೆ. ಖಾಲಿ ಕೋಣೆಯಲ್ಲಿ ಶವವನ್ನು ತುಂಡು ಮಾಡಲು ಪ್ರಾರಂಭಿಸಿದಾಗ ಆತನ ಸಹೋದರಿ ನೋಡಿದ್ದಾಳೆ. ಅವನು ಅವಳ ಮುಂದೆಯೇ ದೇಹವನ್ನು ತುಂಡು ಮಾಡುವುದನ್ನು ಮುಂದುವರೆಸಿದನು ಮತ್ತು ದೇಹದ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಿದನು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಮಿಗಳ ದಿನವೇ ಪತ್ನಿಯ ಕೊಲೆ; ದರೋಡೆಯ ಕಥೆ ಕಟ್ಟಿದ ಆರೋಪಿ ಪತಿ ಸಿಕ್ಕಿ ಬಿದ್ದಿದ್ದು ಹೇಗೆ?

ಅಕ್ಷತ್ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ, ಕೆಲವನ್ನು ಸದಾರೋನಾ ಗ್ರಾಮದ ಬಳಿ ಎಸೆದಿದ್ದ ಮತ್ತು ಉಳಿದ ಭಾಗಗಳನ್ನು ಮನೆಯಲ್ಲಿ ಡ್ರಮ್‌ನಲ್ಲಿ ಮರೆಮಾಡಿದ್ದ. ದೇಹದ ಭಾಗಗಳನ್ನು ನೆಲ ಮಹಡಿಯಿಂದ ವಶಪಡಿಸಿಕೊಳ್ಳಲಾಗಿದೆ. ಶವ ಪತ್ತೆಯಾದ ನಂತರ, ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಂಡವು ಘಟನಾ ಸ್ಥಳವನ್ನು ಪರಿಶೀಲಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.