ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಿರುಕುಳ ನೀಡಿದ ಯುವಕನಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ; ನಡು ರಸ್ತೆಯಲ್ಲಿ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ

ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ಪೊಲೀಸ್ ಠಾಣೆ ಎದುರೇ ಮಹಿಳೆಯೊಬ್ಬರು ಯುವಕನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ತನ್ನ ಚಾರಿತ್ರ್ಯದ ಬಗ್ಗೆ ಯುವಕನು ತಪ್ಪು ಆರೋಪಗಳನ್ನು ಮಾಡುತ್ತಿದ್ದಾನೆ ಎಂದು ಆರೋಪಿಸಿದ ಮಹಿಳೆ, ದೂರು ನೀಡಲು ಪತಿಯೊಂದಿಗೆ ಠಾಣೆಗೆ ಬಂದಿದ್ದರು. ದೂರು ನೀಡಿ ಹೊರಬಂದಾಗಲೇ ಆ ಯುವಕ ಕಾಣಿಸಿಕೊಂಡಿದ್ದು, ಪತಿ ಹಿಡಿದಿಟ್ಟಿದ್ದ ವೇಳೆ ಮಹಿಳೆ ಕೇವಲ 52 ಸೆಕೆಂಡುಗಳಲ್ಲಿ ಸುಮಾರು 21 ಬಾರಿ ಚಪ್ಪಲಿಯಿಂದ ಹೊಡೆದಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸ್ ಸ್ಟೇಷನ್ ಎದುರೇ ಯುವಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

ಯುವಕನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಮಹಿಳೆ -

Profile
Sushmitha Jain Feb 23, 2026 10:54 PM

ಲಖನೌ, ಫೆ. 23: ಉತ್ತರ ಪ್ರದೇಶದ (Uttar Pradesh) ಅಲಿಗಢದಲ್ಲಿ (Aligarh) ಮಹಿಳೆಯೊಬ್ಬರು ಸಾರ್ವಜನಿಕವಾಗಿ ಯುವಕನೊಬ್ಬನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಅಚ್ಚರಿಯ ಸಂಗತಿಯೆಂದರೆ ಈ ಘಟನೆ ಪೊಲೀಸ್ ಠಾಣೆಯ ಮುಂದೆಯೇ ನಡೆದಿದ್ದು, ಕೇವಲ 52 ಸೆಕೆಂಡ್‌ಗಳ ಅವಧಿಯಲ್ಲಿ ಮಹಿಳೆ ಯುವಕನಿಗೆ ಸುಮಾರು 21 ಬಾರಿ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಘಟನೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಲಿಗಢ್‌ನ ಗಂಗೀರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಹಲ್ಲೆಗೊಳಗಾದ ಯುವಕನು ತನ್ನ ಚಾರಿತ್ರ್ಯದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾನೆ. ತನ್ನನ್ನು ದೀರ್ಘಕಾಲದಿಂದ ಚಾರಿತ್ರ್ಯ ವಧೆ ಮಾಡುತ್ತಿದ್ದಾನೆ ಎಂದು ಮಹಿಳೆ ದೂರಿದ್ದಾರೆ. ಈ ವಿಷಯದ ಕುರಿತು ದೂರು ನೀಡಲು ಮಹಿಳೆ ತನ್ನ ಪತಿಯೊಂದಿಗೆ ಭಾನುವಾರ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಠಾಣೆಯಲ್ಲಿ ದೂರು ಸಲ್ಲಿಸಿ ದಂಪತಿ ಹೊರಗೆ ಬಂದಾಗ, ಠಾಣೆಯ ಸಮೀಪದ ಚೌಕದಲ್ಲಿಯೇ ಆ ಯುವಕ ಕಾಣಿಸಿಕೊಂಡಿದ್ದ.

10ನೇ ತರಗತಿ ವಿದ್ಯಾರ್ಥಿಗೆ 30 ಸೆಕೆಂಡ್‌ನಲ್ಲಿ 27 ಬಾರಿ ಚಾಕುವಿನಿಂದ ಇರಿದ ಅಪ್ರಾಪ್ತರು

ತಕ್ಷಣವೇ ಮಹಿಳೆಯ ಪತಿ ಯುವಕನನ್ನು ಓಡದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಮಹಿಳೆ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಯುವಕನ ಮೇಲೆ ಸತತವಾಗಿ ಪ್ರಹಾರ ನಡೆಸಿದ್ದಾರೆ. ವಿಡಿಯೊದಲ್ಲಿ ಕಾಣುವಂತೆ, ಯುವಕನನ್ನು ರಸ್ತೆಯ ಮೇಲೆ ಕೆಳಕ್ಕೆ ಬೀಳಿಸಿ ಮಹಿಳೆಯು ಚಪ್ಪಲಿ ಹೊಡೆಯುತ್ತಿರುವು ಮತ್ತು ಕಾಲಿನಿಂದ ಒದೆಯುತ್ತಿದ್ದರೆ, ಸ್ಥಳದಲ್ಲಿದ್ದ ಜನರು ಇದನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು. ಈ ಸಂದರ್ಭದಲ್ಲಿಯೇ ಯಾರೋ ಒಬ್ಬರು ಇದನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಪೊಲೀಸರ ಕಾರ್ಯಾಚರಣೆ

ಠಾಣೆಯ ಗೇಟ್ ಮುಂದೆಯೇ ಈ ಗಲಾಟೆ ನಡೆಯುತ್ತಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಮಧ್ಯ ಪ್ರವೇಶಿಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತಂದ ಪೊಲೀಸರು, ಹಲ್ಲೆ ನಡೆಸಿದ ಮಹಿಳೆಯ ಪತಿ ಮತ್ತು ಹಲ್ಲೆಗೊಳಗಾದ ಯುವಕ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ಉಂಟುಮಾಡಿದ ಆರೋಪದ ಮೇಲೆ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.