9 ವರ್ಷದ ಬಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಮದ್ರಸಾ; 30 ಕಿಲೋ ಮೀಟರ್ ದೂರದಿಂದ ರಕ್ಷಣೆ
ಮದ್ರಸಾದಲ್ಲಿ ಶಿಕ್ಷಕನಿಂದ ಹಲ್ಲೆಗೊಳಗಾದ ಬಾಲಕನೊಬ್ಬ ಸುಮಾರು 30 ಕಿಲೋಮೀಟರ್ ದೂರದಲ್ಲಿ ಒಂಟಿಯಾಗಿ ಅಲೆದಾಡುತ್ತಿದ್ದನು. ಬಾಲಕನ ದೇಹದ ಮೇಲೆ ಇದ್ದ ಗಾಯದ ಗುರುತುಗಳನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ (CWC) ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಾಲಕನನ್ನು ರಕ್ಷಿಸಿದರು.
ಸಂಗ್ರಹ ಚಿತ್ರ -
ಜಮ್ಮು: ಶಿಕ್ಷಕನಿಂದ ಹಲ್ಲೆಗೊಳಗಾದ (child abuse) ಮದ್ರಸಾ ಬಾಲಕನೊಬ್ಬ (Madrasa, boy) ಸಂಸ್ಥೆಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು, ಆತನನ್ನು ಈಗ ರಕ್ಷಿಸಲಾಗಿದೆ. ಕುರಿಗಾಹಿಯೊಬ್ಬರ ಮಗ ಜಮ್ಮುವಿನ (Jammu) ಮದ್ರಸಾದ ವಿದ್ಯಾರ್ಥಿಯಾಗಿದ್ದ 9 ವರ್ಷದ ಬಾಲಕ ಸುಮಾರು 30 ಕಿ.ಮೀ ದೂರದಲ್ಲಿ ಪತ್ತೆಯಾಗಿದ್ದಾನೆ. ಸ್ಥಳೀಯರು ಆತನ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ (Child Welfare Committee) ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಆತನನ್ನು ರಕ್ಷಿಸಿದರು. ಬಳಿಕ ವಿಚಾರಣೆಗೊಳಪಡಿಸಿ ಮದ್ರಸಾ ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಜಿಲ್ಲೆಯ ಮದ್ರಸಾವೊಂದರಲ್ಲಿ 9 ವರ್ಷದ ಬಾಲಕನ ಮೇಲೆ ಶಿಕ್ಷಕರೊಬ್ಬರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಕುರಿಗಾಹಿಯೊಬ್ಬರ ಮಗನಾದ ಬಾಲಕ ಶಿಕ್ಷಕನಿಂದ ಹಲ್ಲೆಗೊಳಗಾದ ಅನಂತರ ಸಂಸ್ಥೆಯಿಂದ ಓಡಿಹೋಗಿದ್ದಾನೆ. ಆತ ಸುಮಾರು 30 ಕಿಲೋ ಮೀಟರ್ ದೂರದಲ್ಲಿ ಒಂಟಿಯಾಗಿ ಅಲೆದಾಡುತ್ತಿರುವುದು ಸ್ಥಳೀಯರು ಗಮನಿಸಿದ್ದಾರೆ.
ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ: ದಂಪತಿ ಸಾವು, ಮಗುವಿಗೆ ತೀವ್ರ ಗಾಯ
ಬಾಲಕನನ್ನ ಈ ಕುರಿತು ವಿಚಾರಣೆ ನಡೆಸಿದಾಗ ಆತ ಯಾವುದೇ ಮಾಹಿತಿ ನೀಡಲಿಲ್ಲ. ಆತನ ದೇಹದ ಮೇಲಿದ್ದ ಗಾಯದ ಗುರುತುಗಳನ್ನು ಗಮನಿಸಿದ ಸ್ಥಳೀಯರು, ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದರು.
ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ಬಾಲಕನನ್ನು ರಕ್ಷಿಸಿ, ವೈದ್ಯಕೀಯ ನೆರವು ಹಾಗೂ ಸಮಾಲೋಚನೆ ಗೆ ವ್ಯವಸ್ಥೆ ಕಲ್ಪಿಸಿದರು.
ಮದ್ರಸಾದಲ್ಲಿ ಎಲ್ಲಾ ಮಕ್ಕಳಿಗೂ ಒಂದಲ್ಲ ಒಂದು ಕಾರಣಕ್ಕೆ ಹೊಡೆಯಲಾಗುತ್ತಿತ್ತು ಎಂದು ಬಾಲಕ ನೀಡಿರುವ ಹೇಳಿಕೆ ಪ್ರಕಾರ ದೂರು ದಾಖಲಿಸಿರುವ ಅಧಿಕಾರಿಗಳು ಮಕ್ಕಳ ರಕ್ಷಣಾ ಕಾನೂನುಗಳ ಅಡಿಯಲ್ಲಿ ಮದ್ರಸಾ ಆಡಳಿತ ಮಂಡಳಿ ಮತ್ತು ಆರೋಪಿ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಲಾಗಿದೆ. ವೈದ್ಯಕೀಯ ತಪಾಸಣೆಯ ಅನಂತರ ಬಾಲಕನನ್ನು ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಕಿಶ್ತ್‌ವಾರ್‌ನ ಉಪ ಆಯುಕ್ತ ಪಂಕಜ್ ಕುಮಾರ್ ಹೇಳಿದ್ದಾರೆ.
Hassan News: ಸ್ನೇಹಿತರ ಜತೆ ಟ್ರಿಪ್ ಹೋಗಿದ್ದ ಯುವತಿ ಹಾಸನದ ಲಾಡ್ಜ್‌ನಲ್ಲಿ ಅನುಮಾನಾಸ್ಪದ ಸಾವು!
ಈ ಕುರಿತು ಪ್ರತಿಕ್ರಿಯಿಸಿರುವ ಮಕ್ಕಳ ಹಕ್ಕುಗಳ ಕಾರ್ಯಕರ್ತರು, ಇದು ಖಂಡನೀಯ. ಕಲಿಕೆಯ ಸ್ಥಳಗಳು ಹಿಂಸೆ ಅಥವಾ ಚಿತ್ರಹಿಂಸೆಯ ತಾಣಗಳಾಗಲು ಅವಕಾಶ ನೀಡಬಾರದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.