ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kanpur Horror: ತಲೆ ಕತ್ತರಿಸಿ ವ್ಯಕ್ತಿಯ ಕ್ರೂರ ಹತ್ಯೆ; ರಸ್ತೆಯಲ್ಲಿ ಬಿದ್ದಿದ್ದ ದೇಹ, ಶಿರ ಹಳ್ಳದಲ್ಲಿ ಪತ್ತೆ

Crime News: ಕೊಲೆ ನಡೆದ ಸ್ಥಳದ ಬಳಿ ಟೈರ್ ಜಾರಿದ ಗುರುತು ಕಂಡುಬಂದಿದ್ದು, ಭಾರಿ ವಾಹನವೊಂದು ಹಠಾತ್ತನೆ ಬ್ರೇಕ್ ಹಾಕಿರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸ್ವಲ್ಪ ಮೊದಲು ಟ್ರ್ಯಾಕ್ಟರ್ ಅದೇ ಮಾರ್ಗದಲ್ಲಿ ಹಾದು ಹೋಗಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಹತ್ತಿರದ ಟ್ರ್ಯಾಕ್ಟರ್ ಮಾಲಕರನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

ವ್ಯಕ್ತಿಯ ಶಿರಚ್ಛೇದ ಮಾಡಿ ಕ್ರೂರ ಹತ್ಯೆ

ಸಾಂದರ್ಭಿಕ ಚಿತ್ರ -

Priyanka P
Priyanka P Sep 23, 2026 6:21 PM

ಲಖನೌ, ಸೆ. 23: 45 ವರ್ಷದ ಕಾಸ್ಮೆಟಿಕ್ಸ್ (ಸೌಂದರ್ಯವರ್ಧಕ) ಅಂಗಡಿ ಮಾಲಕ ರಾಜಕಿಶೋರ್ ಎಂಬವವರನ್ನು ಅತ್ಯಂತ ಕ್ರೂರವಾಗಿ ಶಿರಚ್ಛೇದ ಮಾಡಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ(Crime News). ಕಾನ್ಪುರದ ಬಿಲ್ಹೌರ್ ಕೊತ್ವಾಲಿ ವ್ಯಾಪ್ತಿಯ ಖುರ್ದ್ ಖೋಜನ್‌ಪುರ ಗ್ರಾಮದ ಸಮೀಪವಿರುವ ಬಿಲ್ಹೌರ್-ಮಕ್ನಾಪುರ ರಸ್ತೆಯಲ್ಲಿ ಮಂಗಳವಾರ (ಸೆಪ್ಟೆಂಬರ್‌ 22) ಮುಂಜಾನೆ ಈ ಭೀಕರ ಘಟನೆ ನಡೆದಿದೆ (Kanpur Horror). ಅವರ ಕತ್ತರಿಸಿದ ತಲೆಯು ಘಟನಾ ಸ್ಥಳದಿಂದ ಸುಮಾರು 15 ಅಡಿ ದೂರದಲ್ಲಿದ್ದ ಹಳ್ಳದಲ್ಲಿ ಪತ್ತೆಯಾಗಿದೆ . ಶರೀರ ರಸ್ತೆ ಬದಿ ಬಿದ್ದಿತ್ತು.

ಘಟನಾ ಸ್ಥಳಕ್ಕೆ ಪಶ್ಚಿಮ ಡಿಸಿಪಿ ಎಸ್‌ಎಂ ಖಾಸಿಂ ಅಬಿದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ತಂಡಗಳು ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೇವ್ಹಾ ಗ್ರಾಮದ ರಾಜ್‌ಕಿಶೋರ್ ಸುಮಾರು 20 ವರ್ಷಗಳ ಹಿಂದೆ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಬಿಲ್ಹೌರ್ ಪಟ್ಟಣದ ವೈಷ್ಣವನಗರಕ್ಕೆ ತೆರಳಿದ್ದರು. ಅಲ್ಲಿ ಅವರು ಸ್ವಂತ ಮನೆ ನಿರ್ಮಿಸಿಕೊಂಡು ಛೋಟಿ ಬಜಾರ್‌ನಲ್ಲಿಸೌಂದರ್ಯವರ್ಧಕ ಅಂಗಡಿ ನಡೆಸುತ್ತಿದ್ದರು.

ಘಟನೆ ನಡೆದ ದಿನ ಅವರು ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಯಿಂದ ಹೊರಟು, ಸೌಂದರ್ಯವರ್ಧಕಗಳನ್ನು ಮಾರಾಟ ಮಾಡಲು ದೇವ್ಹಾ ಕಡೆಗೆ ಸೈಕಲ್‌ನಲ್ಲಿ ಹೋಗಿದ್ದರು ಎಂದು ಪತ್ನಿ ಮಧು ಹೇಳಿದ್ದಾರೆ. ತಲೆಯಿಲ್ಲದ ಮುಂಡವು ರಸ್ತೆಬದಿಯಲ್ಲಿ ಬಿದ್ದಿರುವುದನ್ನು ಕಂಡು ದಾರಿಹೋಕರು ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ದೇಹದಿಂದ ಸುಮಾರು 15 ಅಡಿ ದೂರದಲ್ಲಿರುವ ನೀರು ತುಂಬಿದ ಹಳ್ಳದಲ್ಲಿ ಪೊದೆಗಳ ನಡುವೆ ತಲೆ ಪತ್ತೆಯಾಗಲು ಸುಮಾರು ಎರಡು ಗಂಟೆಗಳು ಬೇಕಾಯಿತು.

ಕಾಲೇಜು ವಿದ್ಯಾರ್ಥಿನಿಯನ್ನು ಬೈಕ್‌ನಲ್ಲಿ ಬೆನ್ನಟ್ಟಿ ಕಿರುಕುಳ: ದೆಹಲಿಯಲ್ಲಿ ನಿಲ್ಲದ ದೌರ್ಜನ್ಯ

ದೇಹದ ಬೇರೆಡೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಡಿಸಿಪಿ ಅಬಿದಿ ಹೇಳಿದ್ದಾರೆ. ಪೊಲೀಸರು ಸ್ಥಳದ ಸುಮಾರು 900 ಮೀಟರ್ ದೂರದವರೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಇದರಲ್ಲಿ ರಾಜ್‌ಕಿಶೋರ್ ಬೆಳಗ್ಗೆ 8:12ಕ್ಕೆ ಹಾದುಹೋಗುವುದನ್ನು ಕಂಡು ಬಂದಿದೆ.

ಘಟನಾ ಸ್ಥಳದ ಬಳಿ ಟೈರ್ ಜಾರಿದ ಗುರುತು ಕಂಡುಬಂದಿದ್ದು, ಭಾರಿ ವಾಹನವೊಂದು ಹಠಾತ್ತನೆ ಬ್ರೇಕ್ ಹಾಕಿರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸ್ವಲ್ಪ ಮೊದಲು ಟ್ರ್ಯಾಕ್ಟರ್ ಅದೇ ಮಾರ್ಗದಲ್ಲಿ ಹಾದು ಹೋಗಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಹತ್ತಿರದ ಟ್ರ್ಯಾಕ್ಟರ್ ಮಾಲಕರಲ್ಲಿ ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಇದು ಕೊಲೆಯೋ ಅಥವಾ ಅಪಘಾತವೋ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಿಂದ ಮಾತ್ರ ಸ್ಪಷ್ಟವಾಗುತ್ತದೆ ಎಂದು ತನಿಖಾಧಿಕಾರಿಗಳು ಒತ್ತಿ ಹೇಳಿದ್ದಾರೆ.

ಫೊರೆನ್ಸಿಕ್ ತಂಡಗಳಿಗೆ ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ರಾಜ್‌ಕಿಶೋರ್ ಅವರ ಕೈ, ಕಾಲು, ತಲೆ ಅಥವಾ ಮುಖದ ಮೇಲೆ ಯಾವುದೇ ಗೋಚರ ಗಾಯಗಳಿಲ್ಲ. ರಾಜ್‌ಕಿಶೋರ್ ಅವರಿಗೆ ಹಿಂದಿನಿಂದ ತೀವ್ರವಾಗಿ ದಾಳಿ ಮಾಡಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಗ್ರಾಮಸ್ಥರು ಈ ಹತ್ಯೆಯನ್ನು ಕ್ರೂರ ಎಂದು ಬಣ್ಣಿಸಿದರೂ, ರಾಜ್‌ಕಿಶೋರ್‌ಗೆ ಯಾವುದೇ ವೈರತ್ವವಿರಲಿಲ್ಲ ಎಂದು ಹೇಳಿದ್ದಾರೆ. ಅವರ ಹಿರಿಯ ಪುತ್ರಿಯು ತನ್ನ ತಂದೆ ಸರಳ, ಶಾಂತ ಸ್ವಭಾವದ ವ್ಯಕ್ತಿಯಾಗಿದ್ದು, ಅವರು ಯಾರೊಂದಿಗೂ ವೈರತ್ವವನ್ನು ಹೊಂದಿರಲಿಲ್ಲ ಅಥವಾ ಜಗಳ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಭಾರಿ ಕುತೂಹಲ ಮೂಡಿಸಿದೆ.