IND vs AFG ಟಿ20ಐ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಆಡದೇ ಇರಲು ಕಾರಣ ತಿಳಿಸಿದ ಗೌತಮ್ ಗಂಭೀರ್!
ಜಿಬಾಂಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದ ವೈಭವ್ ಸೂರ್ಯವಂಶಿಯನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯಲ್ಲಿ ಬೆಂಚ್ ಕಾಯಿಸಲಾಗಿತ್ತು. ವೈಭವ್ ಬದಲು ಅಭಿಷೇಕ್ ಶರ್ಮಾ ಜೊತೆಗೆ ಸಂಜು ಸ್ಯಾಮ್ಸನ್ ಓಪನಿಂಗ್ ಮಾಡಿದ್ದರು. ಇದಕ್ಕೆ ಕಾರಣವೇನೆಂದು ಹೆಡ್ ಕೋಚ್ ಗೌತಮ್ ಗಂಭೀರ್ ವಿವರಿಸಿದ್ದಾರೆ.
ವೈಭವ್ ಸೂರ್ಯವಂಶಿ ಬಗ್ಗೆ ಗೌತಮ್ ಗಂಭೀರ್ ಹೇಳಿಕೆ -
ನವದೆಹಲಿ: ಭಾರತ ಟಿ20 ತಂಡದಲ್ಲಿ ಸದ್ಯ ಆರಂಭಿಕ ಬ್ಯಾಟ್ಸ್‌ಮನ್‌ಗಳ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿದೆ. ಜಿಂಬಾಬ್ವೆ ಟಿ20ಐ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಹೊರತಾಗಿಯೂ ವೈಭವ್ ಸೂರ್ಯವಂಶಿಯನ್ನು (vaibhav Sooryavanshi) ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯಲ್ಲಿ ಬೆಂಚ್ ಕಾಯಿಸಲಾಗಿತ್ತು. ವೈಭವ್ ಬದಲು ಅಭಿಷೇಕ್ ಶರ್ಮಾ ಜೊತೆಗೆ ಇನಿಂಗ್ಸ್ ಆರಂಭಿಸಲು ಸಂಜು ಸ್ಯಾಮ್ಸನ್‌ಗೆ (Sanju samson) ಅವಕಾಶವನ್ನು ನೀಡಲಾಗಿತ್ತು. ಅದರಂತೆ ಸಂಜು ಕೊನೆಯ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಸಿಡಿಸಿ ಕಮ್‌ಬ್ಯಾಕ್ ಮಾಡಿದ್ದರು. ಇದೀಗ ಇದೀಗ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಪ್ರತಿಕ್ರಿಯೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ನಿಮಿತ್ತ ಜಿಯೋ ಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗೌತಮ್ ಗಂಭೀರ್, ಇದು ಅತ್ಯಂತ ಕಠಿಣ ಕರೆ ಎಂಬುದು ನನಗೆ ಗೊತ್ತಿದೆ. ವೈಭವ್ ಸೂರ್ಯವಂಶಿ ಉತ್ತಮ ಫಾರ್ಮ್‌ನಲ್ಲಿದ್ದರೂ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಮುಂದುವರಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
AUS vs SA: ಮೊದಲನೇ ಏಕದಿನ ಪಂದ್ಯದಿಂದ ಪ್ಯಾಟ್ ಕಮಿನ್ಸ್ ಔಟ್? ಆಸ್ಟ್ರೇಲಿಯಾಗೆ ಆಘಾತ!
“ಇದು ಕಷ್ಟದ ನಿರ್ಧಾರ ಎಂಬುದು ನನಗೆ ಗೊತ್ತು. ಆದರೆ ನೀವು ಉತ್ತಮ ಫಾರ್ಮ್‌ನಲ್ಲಿದ್ದೀರಿ ಎಂಬುದನ್ನು ನಾನು ಅವರಿಗೆ ಅರ್ಥಮಾಡಿಸಿದ್ದೇನೆ. ಆದರೆ ದೀರ್ಘಕಾಲದಿಂದ ಉತ್ತಮ ಪ್ರದರ್ಶನ ನೀಡಿರುವ ಆಟಗಾರರು ಕೆಲವೊಮ್ಮೆ ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ,” ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳು ಅಥವಾ ಹೊರಗಿನ ಚರ್ಚೆಗಳು ತಂಡದ ಪ್ಲೇಯಿಂಗ್ XI ನಿರ್ಧರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಕೋಚ್ ಮತ್ತು ನಾಯಕರು ಪಂದ್ಯವನ್ನು ಗೆಲ್ಲಿಸಬಲ್ಲವರು ಯಾರು ಹಾಗೂ ಅತ್ಯುತ್ತಮ ಪ್ಲೇಯಿಂಗ್ XI ಯಾವುದು ಎಂಬುದನ್ನು ಆಧರಿಸಿ ತಂಡವನ್ನು ಆಯ್ಕೆ ಮಾಡುತ್ತಾರೆ. ವೈಭವ್ ಇಂದು ಆಡಿದರೆ, ಅಭಿಷೇಕ್ ಅಥವಾ ಸಂಜು ಅವರಲ್ಲಿ ಯಾರನ್ನು ಹೊರಗಿಡಬೇಕು ಎಂಬ ಬಗ್ಗೆ ಮತ್ತೊಂದು ಕಠಿಣ ಚರ್ಚೆ ನಡೆಯಬೇಕಾಗುತ್ತದೆ,” ಎಂದು ವಿವರಿಸಿದ್ದಾರೆ.
ವೈಭವ್ ಸೂರ್ಯವಂಶಿ ಆಯ್ಕೆಯ ಸಂಬಂಧ ಒಂದು ರಾತ್ರಿ ನಿದ್ರೆ ಮಾಡಿರಲಿಲ್ಲ: ಗೌತಮ್ ಗಂಭೀರ್
ಕಳೆದ ಒಂದೂವರೆ ಎರಡು ವರ್ಷಗಳಲ್ಲಿ ತಂಡಕ್ಕೆ ಉತ್ತಮ ಫಲಿತಾಂಶ ನೀಡಿರುವ ಸಂಯೋಜನೆಯನ್ನು ಕೇವಲ ಮೂರು ಅಥವಾ ನಾಲ್ಕು ಪಂದ್ಯಗಳ ವೈಫಲ್ಯದ ನಂತರ ಬದಲಾಯಿಸಲು ಸಾಧ್ಯವಿಲ್ಲ ಎಂದೂ ಗಂಭೀರ್ ಹೇಳಿದ್ದಾರೆ.
“ತುಂಬಾ ಪ್ರತಿಭಾವಂತ ಹಾಗೂ ಉತ್ತಮ ಫಾರ್ಮ್‌ನಲ್ಲಿರುವ ಯುವ ಆಟಗಾರನಿಗಾಗಿ ಈಗಾಗಲೇ ಉತ್ತಮ ಪರಿಣಾಮ ಬೀರಿರುವ ಸಂಯೋಜನೆಯನ್ನು ನಾವು ಏಕಾಏಕಿ ಕಡೆಗಣಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಆಟಗಾರರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಆ ಭದ್ರತೆಯ ಭಾವನೆಯನ್ನು ನಾವು ಮುಂದುವರಿಸಲು ಬಯಸುತ್ತೇವೆ,” ಎಂದಿದ್ದಾರೆ.
ಗುರುವಾರ ತಿರುವನಂತಪುರ ತಲುಪಲಿದೆ ಭಾರತದ ಏಕದಿನ ತಂಡ
“ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನನಗೆ ತುಂಬಾ ಸುಲಭ. ಆದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಬಹುಶಃ ಹೆಚ್ಚು ಕಷ್ಟ. ಸಂಜು ಮತ್ತು ಅಭಿಷೇಕ್ ಅವರನ್ನು ಮುಂದುವರಿಸುವ ಮೂಲಕ ನಾವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇವೆ,” ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.