ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಂದೆಯನ್ನು ಕೊಂದ 7 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ಪುತ್ರ; ನಡು ರಸ್ತೆಯಲ್ಲಿ ಕೊಡಲಿಯಿಂದ ಕಡಿದು ಹತ್ಯೆ

Rajasthan Crime: 7 ವರ್ಷಗಳ ಹಿಂದೆ ತಂದೆಯನ್ನು ಕೊಂದವನನ್ನು ಕೊಡಲಿಯಿಂದ ಕಡಿದು ಹತ್ಯೆಗೈಯ್ಯುವ ಮೂಲಕ ಪುತ್ರ ಇದೀಗ ಸೇಡು ತೀರಿಸಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕೊಲೆಗಾರನನ್ನು 2019ರಂದು ಹತ್ಯೆಗೀಡಾದ ಕೈಲಾಶ್‌ ಪುತ್ರ ಹನೀಶ್ ಎಂದು ಗುರುತಿಸಲಾಗಿದೆ.

ತಂದೆಯನ್ನು ಕೊಂದ 7 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ಪುತ್ರ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 12, 2026 5:59 PM

ಜೈಪುರ, ನ. 12: ರಾಜಸ್ಥಾನದ ರಾಜಧಾನಿ ಜೈಪುರದ ಜಗದಾಂಬಾನಗರದಲ್ಲಿ ನೆತ್ತರು ಹರಿದಿದ್ದು, 7 ವರ್ಷಗಳ ಹಿಂದೆ ತಂದೆಯನ್ನು ಕೊಂದವನನ್ನು ಕೊಡಲಿಯಿಂದ ಕಡಿದು ಹತ್ಯೆಗೈಯ್ಯುವ ಮೂಲಕ ಪುತ್ರ ಇದೀಗ ಸೇಡು ತೀರಿಸಿಕೊಂಡಿದ್ದಾನೆ. ಕೆಲವು ವರ್ಷಗಳ ಹಿಂದೆ ತಂದೆಯನ್ನು ಕೊಂದವನ ಕಥೆ ಮುಗಿಸಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಕೊಲೆಗಾರನನ್ನು 2019ರಂದು ಹತ್ಯೆಗೀಡಾದ ಕೈಲಾಶ್‌ ಪುತ್ರ ಹನೀಶ್ ಎಂದು ಗುರುತಿಸಲಾಗಿದೆ.

ಅಪರಾಧ ಹಿನ್ನೆಲೆಯ ಕೈಲಾಶ್‌ನನ್ನು 2019ರಲ್ಲಿ ಬಾರ್‌ ಒಂದರ ಸಮೀಪ ವಿಜಯ್ ಬಜಿಯಾ ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್‌ನನ್ನು ಬಂಧಿಸಲಾಗಿತ್ತು. ವಿಜಯ್ ಜೈಲಿನಿಂದ ಬಿಡುಗಡೆಯಾದ ನಂತರ ಕೈಲಾಶ್‌ನ ಮಗ ಹನೀಶ್ ಆತನ ಮೇಲೆ ಹಲವು ಬಾರಿ ದಾಳಿ ನಡೆಸಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಇದೀಗ ಕೊಡಲಿಯಿಂದ ಕಡಿದು ಹತ್ಯೆ ಮಾಡಿದ್ದಾನೆ.

ಘಟನೆ ವಿವರ

ಈ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಬುಧವಾರ (ನವೆಂಬರ್‌ 11) ಹನೀಶ್ ಮತ್ತು ವಿಜಯ್ ನಡುವೆ ಜಗಳ ಭುಗಿಲೆದ್ದಿತು. ಇದರ ಬೆನ್ನಲ್ಲೇ ಹನೀಶ್ ಮತ್ತು ಆತನ ಮೂವರು ಸಹಚರರಾದ ಯುವರಾಜ್ ಚೌಧರಿ, ದಿನೇಶ್ ಹಾಗೂ ಕಮಲೇಶ್ ಸೇರಿ ವಿಜಯ್‌ನನ್ನು ಕೊಲೆ ಮಾಡಲು ಯೋಜನೆ ರೂಪಿಸಿದರು.

ಕೊಲೆಯಾದ ರೌಡಿಶೀಟರ್‌ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ

ಹನೀಶ್ ಮತ್ತು ಆತನ ಸಹಚರರು ಅಪರಾಹ್ನ 3 ಗಂಟೆಯ ಸುಮಾರಿನಿಂದಲೇ ಕ್ಯಾಂಪರ್ ವ್ಯಾನ್‌ನಲ್ಲಿ ವಿಜಯ್‌ನನ್ನು ಹಿಂಬಾಲಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ ಸುಮಾರು 7:15ರ ಸುಮಾರಿಗೆ ವಿಜಯ್ ಕಲ್ವಾರ್‌ನಲ್ಲಿರುವ ತನ್ನ ಮನೆಗೆ ಹೊರಟಾಗ ಹನೀಶ್‌ ಮತ್ತು ಸಹಚರರು ತಮ್ಮ ವ್ಯಾನ್ ಅನ್ನು ಆತನ ಕಾರಿಗೆ ಡಿಕ್ಕಿ ಹೊಡೆಸಿದರು. ಅಪಾಯದ ಅವರಿವಾಗಿ ವಿಜಯ್‌ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಹನೀಶ್ ಕೊಡಲಿಯೊಂದನ್ನು ಹಿಡಿದುಕೊಂಡು ವಿಜಯ್‌ನನ್ನು ಬೆನ್ನಟ್ಟಿ ಆತನ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾನೆ. ಈ ದಾಳಿ ಎಷ್ಟು ಭೀಕರವಾಗಿತ್ತೆಂದರೆ ಕೊಡಲಿ ವಿಜಯ್‌ನ ತಲೆಬುರುಡೆಯಲ್ಲೇ ಸಿಕ್ಕಿಹಾಕಿಕೊಂಡಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಹನೀಶ್‌ ಸ್ಥಳದಿಂದ ಪರಾರಿಯಾಗಿದ್ದ. ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತು.

ಸ್ಥಳೀಯರು ಸೆರೆಹಿಡಿದಿದ್ದ ವಿಡಿಯೊ ಹಾಗೂ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ದುಷ್ಕರ್ಮಿಗಳ ಕ್ಯಾಂಪರ್ ವಾಹನದ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಿದರು. ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಪೊಲೀಸರು ಹನೀಶ್‌ ಮತ್ತು ಸಹಚರರ ಅಡಗುತಾಣಕ್ಕೆ ದಾಳಿ ನಡೆಸಿ ಬಂಧಿಸಿದರು. ಬಂಧಿಸಲ್ಪಟ್ಟ ನಾಲ್ವರ ಪೈಕಿ ಮೂವರಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವಸ್ಥಾನದ ಬಳಿ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆ

ಸದ್ಯ ನಾಲ್ವರೂ ತಪ್ಪೊಪ್ಪಿಕೊಂಡು ಪೊಲೀಸರ ಮುಂದೆ ಶರಣಾಗಿದ್ದಾರೆ. ವಿಜಯ್‌ ಮತ್ತು ಕೈಲಾಶ್‌ ಅಕ್ಕ-ಪಕ್ಕದ ಮನೆಯವರು. ಒಂದು ಕಾಲದಲ್ಲಿ ಒಂದೇ ಕುಟುಂಬದ ಭಾಗವಾಗಿದ್ದ ಅವರು ಬಳಿಕ ಬೇರೆ ಬೇರೆಯಾಗಿದ್ದರು. 2019ರಲ್ಲಿ ಕೈಲಾಶ್‌ನನ್ನು ವಿಜಯ್‌ ಕೊಂದ ಬಳಿಕ ಸೇಡಿಗಾಗಿ ಆತನ ಕುಟುಂಬ ಹೊಂಚು ಹಾಕುತ್ತಿತ್ತು.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.