ಅಕ್ರಮ ಹಣ ವರ್ಗಾವಣೆ ಪ್ರಕರಣ: ರಾಬರ್ಟ್ ವಾದ್ರಾಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್ ಜಾರಿ
ಜಾರಿ ನಿರ್ದೇಶನಾಲಯವು ಸಲ್ಲಿಸಿದ ದೂರಿನ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ನ್ಯಾಯಾಲಯವು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಅವರಿಗೆ ಸಮನ್ಸ್ ಜಾರಿ ಮಾಡಿದೆ. ವಾದ್ರಾ ಮತ್ತು ಇತರ ಎಂಟು ಮಂದಿ ಮೇ 16 ರಂದು ನ್ಯಾಯಾಲಯದ ಮುಂದೆ ಹಾಜರಾಗಲು ಆದೇಶಿಸಿದೆ.
ರಾಬರ್ಟ್ ವಾದ್ರಾ (ಸಂಗ್ರಹ ಚಿತ್ರ) -
ನವದೆಹಲಿ: ಹರಿಯಾಣದ (Haryana) ಶಿಕೋಹ್‌ಪುರದಲ್ಲಿ (Shikohpur.) ನಡೆಸಿದ ಭೂ ವ್ಯವಹಾರಕ್ಕೆ (land deal) ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money laundering case) ಜಾರಿ ನಿರ್ದೇಶನಾಲಯವು (Enforcement Directorate) ಸಲ್ಲಿಸಿದ ದೂರಿನ ಆಧಾರದ ಮೇಲೆ ದೆಹಲಿ ನ್ಯಾಯಾಲಯವು (Delhi court) ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Congress MP Priyanka Gandhi Vadra) ಅವರ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ರಾಬರ್ಟ್ ವಾದ್ರಾ ಮತ್ತು ಇತರ ಎಂಟು ವ್ಯಕ್ತಿಗಳು ಮೇ 16ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಬುಧವಾರ ಆದೇಶಿಸಿದೆ.
ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್‌ಶೀಟ್ ಸಮಾನವಾದ ಪ್ರಾಸಿಕ್ಯೂಷನ್ ದೂರಿನ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಸ್ತುತ ತನಿಖೆಯ ವ್ಯಾಪ್ತಿ ತುಂಬಾ ಕಿರಿದಾಗಿದೆ. ಇದು ಕೇವಲ ವಾದಗಳಿಗೆ ಸೀಮಿತವಾಗಿದೆ. ಆರೋಪಗಳೊಂದಿಗೆ ಇತರ ದಾಖಲೆಗಳನ್ನು ಕೂಡ ಸಲ್ಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಬಗೆದಷ್ಟು ಬಯಲಾಗುತ್ತಿದೆ TCS ಮತಾಂತರ ದಂಧೆ: ಲೈಂಗಿಕ ಕಿರುಕುಳ, ಮತಾಂತರದ ಬೃಹತ್ ಜಾಲ ಬಯಲು; ಬೆಚ್ಚಿಬಿದ್ದ ದೇಶ!
ವಾದ್ರಾ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವಾದಿಸಿದ ಅವರ ಪರ ವಕೀಲರು, ಪ್ರಾಸಿಕ್ಯೂಷನ್ ದೂರನ್ನು ಪರಿಗಣಿಸದಂತೆ ನ್ಯಾಯಾಲಯಕ್ಕೆ ಒತ್ತಾಯಿಸಿದರು.
ಏನಿದು ಪ್ರಕರಣ?
2018ರ ಸೆಪ್ಟೆಂಬರ್ ನಲ್ಲಿ ರಾಬರ್ಟ್ ವಾದ್ರಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಇದನ್ನು ಜಾರಿ ನಿರ್ದೇಶನಾಲಯಕ್ಕೆ ಒಪ್ಪಿಸಲಾಗಿತ್ತು. ಆಗ ಹರಿಯಾಣ ಮುಖ್ಯಮಂತ್ರಿಯಾಗಿದ್ದ ಮನೋಹರ್ ಲಾಲ್ ಖಟ್ಟರ್, ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ರಿಯಲ್ ಎಸ್ಟೇಟ್ ದೈತ್ಯ ಡಿಎಲ್‌ಎಫ್ ಮತ್ತು ಆಸ್ತಿ ವ್ಯಾಪಾರಿ ವಿರುದ್ಧ ಭ್ರಷ್ಟಾಚಾರ, ವಂಚನೆ ಸೇರಿದಂತೆ ಹಲವು ದೂರು ದಾಖಲಾಗಿತ್ತು.
ಜಾರಿ ನಿರ್ದೇಶನಾಲಯದ ದೂರಿನ ಪ್ರಕಾರ ವಾದ್ರಾ ಅವರ ಕಂಪೆನಿಯು 2008ರ ಫೆಬ್ರವರಿಯಲ್ಲಿ ಓಂಕಾರೇಶ್ವರ ಪ್ರಾಪರ್ಟೀಸ್‌ನಿಂದ 3.5 ಎಕರೆ ಜಮೀನನ್ನು 7.5 ಕೋಟಿ ರೂ.ಗೆ ಖರೀದಿಸಿದ್ದರು. ಬಳಿಕ ಅವರ ಸಂಸ್ಥೆಯು ಈ ಭೂಮಿಯನ್ನು 58 ಕೋಟಿ ರೂ.ಗೆ ಡಿಎಲ್‌ಎಫ್‌ಗೆ ಮಾರಾಟ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿತ್ತು. 2025ರ ಜುಲೈನಲ್ಲಿ ಈ ಪ್ರಕರಣದ ದೂರಿನಲ್ಲಿ ವಾದ್ರಾ ಹೆಸರನ್ನು ಸೇರಿಸಲಾಗಿತ್ತು.