ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಘೋರ ಕೃತ್ಯ: ಹೆಣ್ಣು ಮಗು ಜನಿಸಿದ್ದಕ್ಕೆ ಒಂದು ದಿನದ ಕಂದಮ್ಮನನ್ನೇ ಬಲಿ ಪಡೆದ ಪಾಪಿ ತಾಯಿ

Crime news: ಗಂಡು ಮಗು ಬೇಕೆಂಬ ಆಸೆಯಿಂದ ತನ್ನ ಒಂದು ದಿನದ ಹೆಣ್ಣು ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರು ಆಘಾತಕಾರಿ ಘಟನೆ ಮಧ್ಯಪ್ರದೇಶದ ಅಶೋಕನಗರದಲ್ಲಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಆರೋಪಿಯನ್ನು ಚಂದೇರಿಯ ಸಕರ್ರಾ ಗ್ರಾಮದ ನಿವಾಸಿ ಭಾವನಾ ವಿಶ್ವಕರ್ಮ ಎಂದು ಗುರುತಿಸಲಾಗಿದೆ.

ಹೆಣ್ಣು ಮಗು ಜನಿಸಿದ್ದಕ್ಕೆ ಒಂದು ದಿನದ ಕಂದಮ್ಮನನ್ನೇ ಕೊಂದ ಪಾಪಿ ತಾಯಿ

ಸಾಂದರ್ಭಿಕ ಚಿತ್ರ -

Priyanka P
Priyanka P Oct 7, 2026 1:41 PM

ಇಂದೋರ್, ಅ.7: ಲೋಕದಲ್ಲಿ ಯಾರೇ ಕೆಟ್ಟವರಿರಲಿ, ತಾಯಿ ಮಾತ್ರ ಕೆಟ್ಟವಳಾಗಿರಲ್ಲ ಎಂಬ ಮಾತಿದೆ. ಆದರೆ, ಈ ಮಾತನ್ನು ಇಲ್ಲೊಬ್ಬಳು ನೀಚ ತಾಯಿ ಇದನ್ನು ಸುಳ್ಳು ಮಾಡಿದ್ದಾಳೆ. ಜಗತ್ತಿಗೆ ಕಾಲಿಟ್ಟು ಕೇವಲ ಒಂದು ದಿನವಾಗಿದ್ದ ಹೆಣ್ಣು ಮಗುವನ್ನು ಹತ್ಯೆ ಮಾಡಿದ್ದಾಳೆ. ಗಂಡು ಮಗು ಬೇಕೆಂಬ ಆಸೆಯಿಂದ ತನ್ನ ಒಂದು ದಿನದ ಹೆಣ್ಣು ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ (mother kills newborn). ಮಧ್ಯಪ್ರದೇಶದ ಅಶೋಕನಗರದಲ್ಲಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ 24 ವರ್ಷದ ಮಹಿಳೆಯೊಬ್ಬಳು ಈ ಕೃತ್ಯ ಎಸಗಿದ್ದಾಳೆ. ಆರೋಪಿಯನ್ನು ಚಂದೇರಿಯ ಸಕರ್ರಾ ಗ್ರಾಮದ ನಿವಾಸಿ ಭಾವನಾ ವಿಶ್ವಕರ್ಮ ಎಂದು ಗುರುತಿಸಲಾಗಿದೆ (Crime news).

ಶುಕ್ರವಾರ (ಅ.2) ರಾತ್ರಿ 11 ಗಂಟೆ ಸುಮಾರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾವನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಜನನದ ಸ್ವಲ್ಪ ಸಮಯದ ನಂತರ, ನವಜಾತ ಶಿಶುವನ್ನು ಪಿಎನ್‌ಸಿ ವಾರ್ಡ್‌ನಿಂದ ಎಸ್‌ಎನ್‌ಸಿಯುಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ತಿಳಿಸಿದ್ದಾರೆ. ಶನಿವಾರ (ಅ.3) ಶಿಶುವನ್ನು ಕಂಬಳಿಯಲ್ಲಿ ಸುತ್ತಿ ತಾಯಿಯ ಪಕ್ಕದಲ್ಲಿ ಮಲಗಿಸಲಾಗಿತ್ತು. ಅತ್ತೆ ಮಲಗಿದ್ದಾಗ ಭಾವನಾ ಮಗುವನ್ನು ಕಂಬಳಿಯಿಂದ ಮುಚ್ಚಿಟ್ಟಿದ್ದಾಳೆ ಎನ್ನಲಾಗಿದೆ.

ಸುಮಾರು ಎರಡು ಮೂರು ನಿಮಿಷಗಳ ನಂತರ, ಮಗು ಮೃತಪಟ್ಟಿರಬಹುದು ಎಂದು ಭಾವಿಸಿ, ಅವಳು ತನ್ನ ಹಿಡಿತವನ್ನು ಸಡಿಲಿಸಿದಳು. ಸುಮಾರು ಅರ್ಧ ಗಂಟೆಯ ನಂತರ, ಮಗುವಿನ ಬಾಯಿಯಿಂದ ರಕ್ತ ಬರುತ್ತಿರುವುದು ಕಂಡುಬಂದಿತು. ಮಹಿಳೆ ತನ್ನ ಅತ್ತೆಗೆ ತಿಳಿಸಿದಳು. ಕೂಡಲೇ ಅವರು ಶಿಶುವನ್ನು ವೈದ್ಯರ ಬಳಿಗೆ ಕರೆದೊಯ್ದರು. ಆ ವೇಳೆಗಾಗಲೇ ಮಗು ಮೃತಪಟ್ಟಿತ್ತು.

ಅಸ್ಸಾಂ ವಿದ್ಯಾರ್ಥಿನಿ ನಿಮಿಷಾ ಕೊಲೆ ಆರೋಪಿ ಆಸಿಫ್ ಅಲಿ ಪರಾರಿಯಾಗಲು ಯತ್ನ; ಗುಂಡೇಟು

ಶನಿವಾರ (ಅ.3) ಬೆಳಗ್ಗೆಯಿಂದಲೇ ಮಹಿಳೆ ಅಳುತ್ತಿದ್ದಳು. ಆದರೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಗ್ಗೆ ಆಕೆ ದುಃಖಿತಳಾಗಿದ್ದಾಳೆಂದು ಯಾರಿಗೂ ಅರ್ಥವಾಗಲಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರು. ನವಜಾತ ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ವರದಿಯಲ್ಲಿ ಉಸಿರುಗಟ್ಟಿಸಿರುವುದು ಸಾವಿಗೆ ಕಾರಣ ಎಂದು ದೃಢಪಡಿಸಿತು.

“ಮರಣೋತ್ತರ ವರದಿಯ ನಂತರ, ನಾವು ಮಗುವಿನ ತಂದೆ ಮತ್ತು ಅಜ್ಜಿಯನ್ನು ವಿಚಾರಣೆ ನಡೆಸಿದ್ದೇವೆ. ಭಾವನಾ ಅವರ ಹೇಳಿಕೆಯನ್ನು ದಾಖಲಿಸಿದ್ದೇವೆ. ಆಕೆ ಅಪರಾಧವನ್ನು ಒಪ್ಪಿಕೊಂಡಳು” ಎಂದು ಎಸ್ಪಿ ಹೇಳಿದರು. ತನಗೆ ಗಂಡು ಮಗು ಜನಿಸಬೇಕೆಂದು ಆಶಿಸಿದ್ದೆ. ಆದರೆ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ತುಂಬಾ ದುಃಖಿತಳಾಗಿದ್ದೆ ಎಂದು ಆಕೆ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ. ದಂಪತಿಗೆ ಈಗಾಗಲೇ ಎರಡು ವರ್ಷದ ಹೆಣ್ಣು ಮಗು ಇದೆ.

ಆಕೆ ಇಬ್ಬರು ಹೆಣ್ಣು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯ ಬಗ್ಗೆ ಚಿಂತಿತಳಾಗಿದ್ದಳು. ಎರಡನೇ ಮಗುವೂ ಹೆಣ್ಣು ಆಗಿದ್ದರಿಂದ ತನ್ನ ಕುಟುಂಬದಿಂದ ಮೂದಲಿಕೆಗೆ ಹೆದರಿದ್ದಳು ಎಂದು ಎಸ್ಪಿ ಹೇಳಿದರು. ಈ ಸಂಬಂಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.