ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಥಳೀಯ ಅಪರಾಧಗಳನ್ನು ಬಯಲಿಗೆಳೆಯುತ್ತಿದ್ದ ಮುಂಬೈನ ಯೂಟ್ಯೂಬರ್‌ ಹತ್ಯೆ

ಸ್ಥಳೀಯ ಅಪರಾಧಗಳನ್ನು ಬಯಲಿಗೆಳೆದ ಯೂಟ್ಯೂಬರ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮುಂಬೈಯಲ್ಲಿ ನಡೆದಿದೆ. ಉಲ್ಹಾಸನಗರ ರೈಲು ನಿಲ್ದಾಣದಲ್ಲಿ ಯೂಟ್ಯೂಬರ್‌ ಹರೀಶ್ ಗಜ್ವಾನಿ ಅವರನ್ನು ಬುಧವಾರ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿದೆ. ಸಾಮಾಜಿಕ ಸಮಸ್ಯೆಗಳ ಕುರಿತು ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದೇ ಕಾರಣದಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮುಂಬೈಯಲ್ಲಿ ಗುಂಡಿಕ್ಕಿ ಯೂಟ್ಯೂಬರ್‌ ಹತ್ಯೆ

ಸಂಗ್ರಹ ಚಿತ್ರ -

ಮುಂಬೈ: ಜನದಟ್ಟಣೆ ಇರುವ ರೈಲು ನಿಲ್ದಾಣದ (railway station) ಆವರಣದಲ್ಲೇ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮುಂಬೈಯಲ್ಲಿ (Mumbai) ನಡೆದಿದೆ. ಸ್ಥಳೀಯ ಅಪರಾಧಗಳ ಕುರಿತು ಜನರ ಗಮನ ಸೆಳೆಯುತ್ತಿದ್ದ ಯೂಟ್ಯೂಬರ್‌ನನ್ನು (YouTuber) ಯೂಟ್ಯೂಬರ್‌ ಹರೀಶ್ ಗಜ್ವಾನಿ (54) ಅವರನ್ನು ಬುಧವಾರ ರಾತ್ರಿ ಉಲ್ಹಾಸನಗರ ರೈಲು ನಿಲ್ದಾಣದ (Ulhasnagar Railway Station) ಆವರಣದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಆಗಾಗ್ಗೆ ಸಾಮಾಜಿಕ ಸಮಸ್ಯೆಗಳ ಕುರಿತು ಪೋಸ್ಟ್ ಮಾಡುತ್ತಿದ್ದರು. ಇದೇ ಕಾರಣದಿಂದ ಅವರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಲ್ಹಾಸನಗರ ರೈಲು ನಿಲ್ದಾಣದ ಆವರಣ ಎಂದರೆ ಜನಸಂದಣಿ ಹೆಚ್ಚಿರುವ ಸ್ಥಳವಾಗಿದೆ. ಇಲ್ಲಿ ನಡೆದಿರುವ ಯೂಟ್ಯೂಬರ್‌ ಹರೀಶ್ ಗಜ್ವಾನಿ ಅವರ ಹತ್ಯೆ ಕುರಿತು ತನಿಖೆ ನಡೆಸಲು ವಿಶೇಷ ಪೊಲೀಸ್ ತಂಡವೊಂದು ಅಪರಾಧ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಬೈಕ್ ನಲ್ಲಿ ಬಂದು ಪರಾರಿಯಾದ ದಾಳಿಕೋರರು ಬಂದೂಕಿನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೇಜೋವಧೆ, ಜಾತಿ ನಿಂದನೆ ಆರೋಪ: ಪತ್ರಕರ್ತೆ ಮತ್ತು ಅಭಿಜೀತ್ ದಿಪ್ಕೆ ವಿರುದ್ಧ ACP ವಿವೇಕ್ ಭಗತ್ ದೂರು!

ಹರೀಶ್ ಗಜ್ವಾನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕವನ್ನು ಉಂಟುಮಾಡಿದೆ. ವಿಠ್ಠಲವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ಪೊಲೀಸ್ ತಂಡ ಗಜ್ವಾನಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ರಲ್ ಆಸ್ಪತ್ರೆಗೆ ಕಳುಹಿಸಿದೆ.

ಹರೀಶ್ ಗಜ್ವಾನಿ ಅವರು ಯೂಟ್ಯೂಬ್ ಚಾನೆಲ್ ಒಂದರಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಆಗಾಗ್ಗೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಾಮಾಜಿಕ ಸಮಸ್ಯೆಗಳ ಕುರಿತು ಪೋಸ್ಟ್ ಮಾಡುತ್ತಿದ್ದರು. 2021ರಲ್ಲಿ ಅವರ ವಿರುದ್ಧ ಕೊಲೆ ಪ್ರಕರಣವೊಂದು ದಾಖಲಾಗಿತ್ತು.

ಜರ್ಮನಿಯ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ದುರಂತ: ಮೂವರು ಭಾರತೀಯರ ಸಾವು, ರೊಮೇನಿಯನ್ ಪ್ರಜೆ ಬಂಧನ!

ರೈಲು ನಿಲ್ದಾಣದ ಹೊರಗೆ ನಿಂತಿದ್ದ ಹರೀಶ್ ಗಜ್ವಾನಿ ಅವರ ತಲೆಗೆ ಗುರಿಯಿಟ್ಟು ಅಪರಿಚಿತರು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಬಳಿಕ ಹರಿತವಾದ ಆಯುಧಗಳಿಂದ ದಾಳಿ ನಡೆಸಿ ಸ್ಥಳದಲ್ಲೇ ಹತ್ಯೆ ಮಾಡಿದ್ದಾರೆ. ಬಳಿಕ ತಾವು ಬಂದಿದ್ದ ಬೈಕ್ ನಲ್ಲಿ ಪರಾರಿಯಾದರು. ಈ ಕುರಿತು ವಿಠ್ಠಲವಾಡಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಠಾಣೆ ಪೊಲೀಸರ ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂಜಯ್ ಜಾಧವ್ ಮತ್ತು ವಲಯ 4ರ ಉಪ ಪೊಲೀಸ್ ಆಯುಕ್ತ ಸಚಿನ್ ಗೋರೆ ತಿಳಿಸಿದ್ದಾರೆ.