Murder Case: ಅಮಾನುಷ ಘಟನೆ, ಮಲತಂದೆಯಿಂದ ಮಗಳ ಕೊಲೆ
Crime News: ಮೊದಲ ಪತಿ ಮೃತಪಟ್ಟ ಬಳಿಕ, ಇನ್ ಸ್ಟಾಗ್ರಾಂನಲ್ಲಿ ಆರೋಪಿ ದರ್ಶನ್ ಶಿಲ್ಪಾಗೆ ಪರಿಚಯವಾಗಿದ್ದ. ಬಳಿಕ ದರ್ಶನ್‌ನನ್ನು ಶಿಲ್ಪಾ ಎರಡನೇ ಮದುವೆಯಾಗಿದ್ದರು. ಮೊನ್ನೆ ಶಿಲ್ಪಾ ಜೊತೆಗೆ ಜಗಳವಾಡಿದ್ದ ದರ್ಶನ್ ನಿನ್ನೆ ಸಂಜೆ ಮಲಮಗಳು ಸಿರಿಯನ್ನು ಕೊಂದು ಪರಾರಿಯಾಗಿದ್ದಾನೆ.
-
ಹರೀಶ್ ಕೇರ
Oct 25, 2025 7:28 AM
ಬೆಂಗಳೂರು, ಅ.24: ಮಲತಂದೆಯೊಬ್ಬ (stepfather) 7 ವರ್ಷದ ಮಗಳ ಹತ್ಯೆ ಮಾಡಿರುವ ಅಮಾನುಷ ಘಟನೆ ಬೆಂಗಳೂರಿನ (Bengaluru crime news) ಕುಂಬಳಗೋಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ನಡೆದಿದೆ. ಮಲತಂದೆ ದರ್ಶನ್, 7 ವರ್ಷದ ಸಿರಿ ಎನ್ನುವ ಮಗಳನ್ನು ಉಸಿರುಗಟ್ಟಿಸಿ ಕೊಲೆ (murder case) ಮಾಡಿದ್ದಾನೆ. ಮಗುವಿನ ಮುಖಕ್ಕೆ ಹೊಡೆದು, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ನಿನ್ನೆ ಸಂಜೆ ಕೊಲೆ ಮಾಡಿ ಮಲತಂದೆ ದರ್ಶನ್ ಪರಾರಿಯಾಗಿದ್ದಾನೆ ಎಂದು ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಮಾಹಿತಿ ನೀಡಿದ್ದಾರೆ.
ಕೊಲೆಯಾದ ಬಾಲಕಿ ಸಿರಿಯ ತಾಯಿ, ಮೊದಲ ಪತಿ ಮೃತಪಟ್ಟ ಬಳಿಕ ದರ್ಶನ್‌ನನ್ನು ಎರಡನೇ ಮದುವೆಯಾಗಿದ್ದಳು. ಆದರೆ, ಇದೀಗ ದರ್ಶನ್ ಪತ್ನಿ ಜೊತೆ ಗಲಾಟೆ ಮಾಡಿ ಅದೇ ಕೋಪದಲ್ಲಿ ಬಾಲಕಿಯನ್ನು ಹತ್ಯೆ ಮಾಡಿದ್ದಾನೆ. ಶಿಲ್ಪಾ ಎಂಬ ಮಹಿಳೆಯ ಪುತ್ರಿ ಸಿರಿ. ಮೊದಲ ಪತಿ ಮೃತಪಟ್ಟ ಬಳಿಕ, ಇನ್ ಸ್ಟಾಗ್ರಾಂನಲ್ಲಿ ಆರೋಪಿ ದರ್ಶನ್ ಶಿಲ್ಪಾಗೆ ಪರಿಚಯವಾಗಿದ್ದ. ಬಳಿಕ ದರ್ಶನ್‌ನನ್ನು ಶಿಲ್ಪಾ ಎರಡನೇ ಮದುವೆಯಾಗಿದ್ದರು. ಮೊನ್ನೆ ಶಿಲ್ಪಾ ಜೊತೆಗೆ ಜಗಳವಾಡಿದ್ದ ದರ್ಶನ್ ನಿನ್ನೆ ಸಂಜೆ ಮಲಮಗಳು ಸಿರಿಯನ್ನು ಕೊಂದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕುಂಬಳಗೊಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ದರ್ಶನ್‌ನ ಹುಡುಕಾಟದಲ್ಲಿದ್ದಾರೆ.
ಇದನ್ನೂ ಓದಿ: Physical Abuse: ಇನ್‌ಸ್ಟಾಗ್ರಾಂನಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡು ಲೈಂಗಿಕ ದೌರ್ಜನ್ಯ; ನಾಲ್ವರು ಅಂದರ್
ಮಗನ ತಲೆಗೆ ತಂದೆಯಿಂದ ಗುಂಡು
ಬೆಂಗಳೂರು: ಆಸ್ತಿ ವಿಚಾರವಾಗಿ ನಡೆದ ಗಲಾಟೆ ವೇಳೆ ಮಗನ ಮೇಲೆಯೇ ತಂದೆ ಗನ್‌ನಿಂದ ಶೂಟ್ ಮಾಡಿರುವ ಘಟನೆ (Shootout Case) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿಯಲ್ಲಿ ನಡೆದಿದೆ. ಹರೀಶ್ (30) ಎಂಬುವವರ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗ ಹಾಗೂ ತಂದೆಯ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆದು, ಮಗನ ಮೇಲೆ ತಂದೆ ಗನ್‌ನಿಂದ ಶೂಟ್ ಮಾಡಿದ್ದಾನೆ. ಮಗ ಹರೀಶ್ ಮೇಲೆ ತಂದೆ ಸುರೇಶ್ ಫೈರಿಂಗ್ ಮಾಡಿದ್ದಾನೆ. ಹಳೆ ಲೋಡ್ ಗನ್‌ನಿಂದ ಶೂಟ್ ಮಾಡಿದ್ದು, ಗಾಯಾಳುವನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಂದೆ ಸುರೇಶ್ ಮದ್ಯ ಸೇವಿಸಿ ಜಮೀನು ಮಾರಾಟ ಮಾಡಿದ್ದ. ಇದ್ದ ಜಮೀನು ಮಾರಾಟ ಮಾಡಲು ಹರೀಶ್‌ಗೆ ಕಿರುಕುಳ ನೀಡಿದ್ದಾನೆ. ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.