ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

4 ವರ್ಷಗಳ ಬಳಿಕ ಹೈ ಪ್ರೊಫೈಲ್ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಪತ್ನಿಯನ್ನು ಕೊಂದು ದರೋಡೆಯ ಕಥೆ ಕಟ್ಟಿದ ಪ್ರೊಫೆಸರ್ ಅರೆಸ್ಟ್

ಚಂಡೀಗಢದ ಪಂಜಾಬ್ ಯುನಿವರ್ಸಿಟಿಯ ಹಿರಿಯ ಪ್ರಾಧ್ಯಾಪಕ ಬಿಬಿ ಗೋಯಲ್‌ನನ್ನು ಪತ್ನಿ ಸೀಮಾ ಗೋಯಲ್ ಅವರ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಪೊಲೀಸ್ ತಂಡವು ದೀರ್ಘ ಕಾಲದ ತನಿಖೆಯ ನಂತರ ಈ ಹೈ–ಪ್ರೊಫೈಲ್ ಕೊಲೆ ಪ್ರಕರಣವನ್ನು ಭೇದಿಸಿದ್ದು, ಬ್ರೇನ್–ಮ್ಯಾಪಿಂಗ್ ಮತ್ತು BEOS ಪ್ರೊಫೈಲಿಂಗ್ ಮೂಲಕ ಪ್ರಮುಖ ಸಾಕ್ಷ್ಯಗಳನ್ನು ಪತ್ತೆ ಹಚ್ಚಲಾಗಿದೆ.

ಪತ್ನಿ ಕೊಂದ ಆರೋಪದ ಮೇಲೆ ಪ್ರೊಫೆಸರ್ ಅರೆಸ್ಟ್

ಸಾಂದರ್ಭಿಕ ಚಿತ್ರ -

Priyanka P
Priyanka P Dec 13, 2025 4:20 PM

ಚಂಡೀಗಢ, ಡಿ. 13: ಪಂಜಾಬ್ ವಿಶ್ವವಿದ್ಯಾಲಯದ (Punjab University) ಕ್ಯಾಂಪಸ್‌ನಲ್ಲಿ ಪ್ರಾಧ್ಯಾಪಕರೊಬ್ಬರ ಪತ್ನಿಯ ಕೊಲೆಯಾಗಿತ್ತು. ಈ ಪ್ರಕರಣದ ತನಿಖೆಯು ನಿಧಾನವಾಗಿ ಮತ್ತು ಆಗಾಗ ನಿಲ್ಲುತ್ತಾ ಸಾಗಿದ್ದರೂ, ಈಗ ಹೈಟೆಕ್ ತಂತ್ರಜ್ಞಾನದ ಮೂಲಕ ಕೊನೆಗೂ ಆ ರಹಸ್ಯ ಬಯಲಾಗಿದೆ. ಈ ಕೊಲೆಗೆ ಮಹಿಳೆಯ ಪತಿ, ಪ್ರಾಧ್ಯಾಪಕನೇ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದಿದೆ (Crime News).

ಈ ಪ್ರಕರಣದಲ್ಲಿ ಪ್ರೊಫೆಸರ್ ಬಿಬಿ ಗೋಯಲ್ ಪೊಲೀಸರು ಬಂಧಿಸಿದ್ದಾರೆ. 2021ರ ನವೆಂಬರ್‌ನಲ್ಲಿ ದೀಪಾವಳಿಯ ದಿನ ಅವರ ಪತ್ನಿ ಸೀಮಾ ಗೋಯಲ್ ಮೃತದೇಹ ಪತ್ತೆಯಾಗಿತ್ತು. ಅವರು ಕೊಲೆಯಾದ ನಾಲ್ಕು ವರ್ಷದ ನಂತರ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೃಹಿಣಿಯಾಗಿದ್ದ ಸೀಮಾ ಗೋಯಲ್ ಅವರ ಹತ್ಯೆ ಪ್ರಕರಣದಲ್ಲಿ, ಪ್ರೊಫೆಸರ್ ಗೋಯಲ್ ಅವರ ಬ್ರೇನ್–ಮ್ಯಾಪಿಂಗ್ ಪರೀಕ್ಷೆಯಲ್ಲಿ ಕಂಡುಬಂದ ಕೆಲವು ಮಾದರಿಗಳು, ಅವರನ್ನು ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ.

ಸಾಧುವಿನ ವೇಷದಲ್ಲಿ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯ ಬಂಧನ

ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಪೊಲೀಸರು, ಸಾಮಾನ್ಯವಾಗಿ ಬ್ರೇನ್–ಮ್ಯಾಪಿಂಗ್ ಎಂದು ಕರೆಯಲಾಗುವ ಬ್ರೇನ್ ಎಲೆಕ್ಟ್ರಿಕಲ್ ಆಸಿಲೇಷನ್ ಸಿಗ್ನೇಚರ್ ತಂತ್ರಜ್ಞಾನವನ್ನು ಕೊಲೆ ಪ್ರಕರಣವೊಂದರಲ್ಲಿ ಬಳಸಿರುವುದು ಇದೇ ಮೊದಲು ಎನ್ನಲಾಗಿದೆ.

ಪಂಜಾಬ್ ಯುನಿವರ್ಸಿಟಿಯ ಬಿಸಿನೆಸ್ ಸ್ಕೂಲ್‌ನ ಹಿರಿಯ ಪ್ರಾಧ್ಯಾಪಕರಾಗಿರುವ ಬಿಬಿ ಗೋಯಲ್ ಅವರನ್ನು ಪೊಲೀಸರು ಇನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅವರ ಪುತ್ರಿಯ ಹೇಳಿಕೆಗಳು ಪ್ರಮುಖ ಸಾಕ್ಷಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2021ರಲ್ಲಿ ಬಿಬಿ ಗೋಯಲ್ ನೀಡಿದ್ದ ಮೂಲ ಹೇಳಿಕೆಯ ಆಧಾರದ ಮೇಲೆ, ಈ ಕೊಲೆಯನ್ನು ಅಪರಿಚಿತ ದುಷ್ಕರ್ಮಿಗಳು ನಡೆಸಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.

ಆ ರಾತ್ರಿ ಏನಾಯಿತು?

ಬಿಬಿ ಗೋಯಲ್ ಆಗ ಹೇಳಿದ್ದ ಪ್ರಕಾರ, ಹಿಂದಿನ ರಾತ್ರಿ ಅವರು ಮೇಲ್ಮಹಡಿಯಲ್ಲಿರುವ ಮತ್ತೊಂದು ಕೋಣೆಯಲ್ಲಿ ಮಲಗಿದ್ದರು. ಬೆಳಗ್ಗೆ ಸುಮಾರು 7.30ರ ವೇಳೆಗೆ ನೆಲಮಹಡಿಯಲ್ಲಿ ಕೈ ಮತ್ತು ಕಾಲುಗಳನ್ನು ಬಟ್ಟೆಯ ತುಂಡುಗಳಿಂದ ಕಟ್ಟಿರುವ ಸ್ಥಿತಿಯಲ್ಲಿ ಗಾಯದ ಗುರುತುಗಳೊಂದಿಗೆ ಸೀಮಾ ಅವರ ಮೃತದೇಹವನ್ನು ನೋಡಿದ್ದಾಗಿ ಅವರು ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ಬರುವುದಕ್ಕೂ ಮುನ್ನವೇ, ಅವರು ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿ ಮನೆಗೆ ಪ್ರವೇಶಿಸಿ ತಮ್ಮ ಪತ್ನಿಯನ್ನು ಕೊಂದು ಪರಾರಿಯಾಗಿರಬಹುದು ಎಂದು ಪೊಲೀಸರಿಗೆ ಬಿಬಿ ಗೋಯಲ್ ದೂರು ನೀಡಿದ್ದರು. ನಂತರ ಸೀಮಾ ಅವರ ಮರಣೋತ್ತರ ಪರೀಕ್ಷಾ ವರದಿಯಲ್ಲಿ, ಉಸಿರುಗಟ್ಟಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿತು. ಆದರೆ ಪೊಲೀಸ್ ತನಿಖೆಯಲ್ಲಿ ಮನೆಗೆ ಬಲವಂತವಾಗಿ ನುಗ್ಗಿದ ಯಾವುದೇ ಗುರುತುಗಳು ಕಂಡುಬರಲಿಲ್ಲ ಮತ್ತು ಮನೆಯಿಂದ ಯಾವುದೇ ಅಮೂಲ್ಯ ವಸ್ತುಗಳು ಕಾಣೆಯಾಗಿರಲಿಲ್ಲ. ಇದರಿಂದ ದರೋಡೆಕೋರರ ಕೃತ್ಯದ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿದ್ದರು.

ಮಗಳನ್ನು ಪ್ರೀತಿಸಿದ್ದಕ್ಕೆ ಕ್ರಿಕೆಟ್‌ ಬ್ಯಾಟ್‌ನಲ್ಲಿ ಹೊಡೆದು ಯವಕನನ್ನು ಕೊಂದ ಪೋಷಕರು!

ಮೃತ ಸೀಮಾ ಅವರ ಸಹೋದರರು, ಈ ಅಪರಾಧವನ್ನು ಮನೆಯೊಳಗಿನವರೇ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ತನಿಖೆಯನ್ನು ವೇಗಗೊಳಿಸುವಂತೆ ಒತ್ತಾಯಿಸಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ದೆಹಲಿಯಲ್ಲಿ ಬ್ರೇನ್–ಮ್ಯಾಪಿಂಗ್ ಪರೀಕ್ಷೆ ನಡೆಸಿದ ಬಳಿಕವೇ ಇದೀಗ ಬಿಬಿ ಗೋಯಲ್ ಅವರನ್ನು ಬಂಧಿಸಲಾಗಿದೆ.

2021ರ ಡಿಸೆಂಬರ್‌ನಲ್ಲಿ, ಪೊಲೀಸರು ಪ್ರೊಫೆಸರ್ ಮೇಲೆ ನಾರ್ಕೊ ಅನಾಲಿಸಿಸ್ ಪರೀಕ್ಷೆ ನಡೆಸಲು ಅನುಮತಿ ಕೋರಿದ್ದರು. ಆದರೆ ಅವರಿಗೆ ಅಸ್ತಮಾ ಸಮಸ್ಯೆ ಇರುವುದರಿಂದ ವೈದ್ಯಕೀಯವಾಗಿ ಅಸಮರ್ಥರು ಎಂದು ಘೋಷಿಸಲ್ಪಟ್ಟ ಕಾರಣ, ಆ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಈ ವರ್ಷದ ಆರಂಭದಲ್ಲಿ ಪೊಲೀಸರು ಬಿಬಿ ಗೋಯಲ್ ಮೇಲೆ ಬ್ರೇನ್–ಮ್ಯಾಪಿಂಗ್ ನಡೆಸಲು ಮುಂದಾದರು.