ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಮ್ಮುವಿನ ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದೆ.. ನೆನಪಿಸಿಕೊಂಡ ಭಯೋತ್ಪಾದಕ ಮಸೂದ್ ಅಜರ್

ಭಾರತದ ಜೈಲಿನಲ್ಲಿ ಆಗಿರುವ ಭಯಾನಕ ಅನುಭವಗಳನ್ನು ಭಯೋತ್ಪಾದಕ ಮಸೂದ್ ಅಜರ್ ನೆನಪಿಸಿಕೊಂಡಿದ್ದು ಈ ಸಂದರ್ಭದಲ್ಲಿ ತಾನು ಎಷ್ಟು ಕಷ್ಟ ಪಟ್ಟಿದ್ದೇನೆ ಎಂಬುದನ್ನು ಕೂಡ ಹೇಳಿದ್ದಾನೆ. ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರ ಆಡಿಯೊ ಈಗ ವೈರಲ್ ಆಗಿದ್ದು, ಇದರಲ್ಲಿ ಆತ ಸುರಂಗವನ್ನು ಅಗೆದು ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿ ಸಿಕ್ಕಿಬಿದ್ದಿರುವುದಾಗಿ ಹೇಳಿಕೊಂಡಿದ್ದಾನೆ.

ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಮಸೂದ್ ಅಜರ್

(ಸಂಗ್ರಹ ಚಿತ್ರ) -

ನವದೆಹಲಿ: ಜಮ್ಮುವಿನಲ್ಲಿ ಜೈಲಿನಲ್ಲಿದ್ದಾಗ (Jammu jail) ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸಿಕ್ಕಿ ಬಿದ್ದು, ಬಳಿಕ ತಾನು ಕಠಿಣ ಶಿಕ್ಷೆಗೆ ಒಳಗಿರುವುದಾಗಿ ನೆನಪಿಸಿಕೊಂಡಿದ್ದಾನೆ ಭಯೋತ್ಪಾದಕ (terrorist), ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (Jem) ಮುಖ್ಯಸ್ಥ ಮಸೂದ್ ಅಜರ್ (Terrorist Masood Azhar). ಪಾಕಿಸ್ತಾನದಲ್ಲಿ (Pakistan) ನಡೆದ ಕಾರ್ಯಕ್ರಮವೊಂದರ ಆಡಿಯೊ ವೈರಲ್ (Viral audio) ಆಗಿದ್ದು, ಇದರಲ್ಲಿ ಆತ ಜಮ್ಮುವಿನ ಜೈಲಿನಲ್ಲಿದ್ದಾಗ ಅಲ್ಲಿ ಸುರಂಗವನ್ನು ಅಗೆದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಇದರ ಪರಿಣಾಮದಿಂದ ಹೆಚ್ಚು ಕಠಿಣ ಶಿಕ್ಷೆಗೆ ಒಳಗಾಗಬೇಕಾಯಿತು ಎಂದು ಹೇಳಿಕೊಂಡಿದ್ದಾನೆ.

1990 ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದ ಜೈಲಿನಲ್ಲಿದ್ದ ಅಜರ್ ಪಾಕಿಸ್ತಾನದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾಡಿರುವ ಭಾಷಣದ ಆಡಿಯೊ ಕ್ಲಿಪ್‌ನಲ್ಲಿ ಇಲ್ಲಿನ ಅನುಭವಗಳನ್ನು ಹಂಚಿಕೊಂಡಿದ್ದಾನೆ.

Anjali Nimbalkar: ವಿಮಾನದಲ್ಲಿ ಕುಸಿದು ಬಿದ್ದ ಮಹಿಳೆಗೆ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಚಿಕಿತ್ಸೆ; ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ಭಾರತದ ಸಂಸತ್ತಿನ ಮೇಲೆ 2001ರಲ್ಲಿ ನಡೆದ ದಾಳಿ ಹಾಗೂ ಮುಂಬೈನಲ್ಲಿ 2008ರಲ್ಲಿ ನಡೆದ ದಾಳಿ ಸೇರಿದಂತೆ ಹಲವು ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಅಜರ್ ನನ್ನು 1994ರಲ್ಲಿ ಬಂಧಿಸಲಾಗಿತ್ತು. ಬಳಿಕ ಜಮ್ಮು ಮತ್ತು ಕಾಶ್ಮೀರದ ಕೋಟ್ ಬಲ್ವಾಲ್ ಜೈಲಿನಲ್ಲಿದ್ದ ಅಜರ್ ಅಲ್ಲಿಂದ ತಪ್ಪಿಸಿಕೊಳ್ಳಲು ಸುರಂಗ ತೋಡಿದ್ದ. ಬಳಿಕ ಸಿಕ್ಕಿ ಬಿದ್ದು ತೀವ್ರ ಶಿಕ್ಷೆಗೆ ಗುರಿಯಾಗಿದ್ದನು.

ಕೋಟ್ ಬಲ್ವಾಲ್ ಜೈಲು ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಇರಿಸಿಕೊಳ್ಳಲು ಇರುವ ಭಾರತದ ಹೆಸರುವಾಸಿಯಾದ ಜೈಲಾಗಿದೆ. ಇಲ್ಲಿ ತಾನು ಸುರಂಗ ತೋಡಿರುವುದನ್ನು ನೋಡಿದ ಜೈಲು ಅಧಿಕಾರಿಗಳು ತೀವ್ರವಾಗಿ ತನ್ನನ್ನು ಥಳಿಸಿದ್ದಾರೆ. ಆ ಜೈಲು ಅಧಿಕಾರಿಗಳನ್ನು ಕಂಡರೆ ಈಗಲೂ ತನಗೆ ಭಯವಾಗುತ್ತದೆ ಎಂದು ಅಜರ್ ಹೇಳಿದ್ದಾನೆ.

ಜೈಲಿನಿಂದ ತಪ್ಪಿಸಿಕೊಳ್ಳಲು ನಾನು ಪ್ರಯತ್ನಿಸಿದ್ದಕ್ಕೆ ಇತರ ಭಯೋತ್ಪಾದಕರನ್ನು ಕೂಡ ಜೈಲು ಅಧಿಕಾರಿಗಳು ಥಳಿಸಿದ್ದಾರೆ. ನಾನು ಜೈಲಿನಿಂದ ತಪ್ಪಿಸಿಕೊಳ್ಳುವ ಕೊನೆಯ ದಿನ ಅವರು ಸುರಂಗವನ್ನು ನೋಡಿದರು. ಇದರಿಂದ ನನ್ನ ಯೋಜನೆ ವಿಫಲವಾಯಿತು ಎಂದು ಹೇಳಿದ್ದಾನೆ.

ಇದರ ಬಳಿಕ ತನಗೆ ಮತ್ತು ಇತರ ಕೈದಿಗಳಿಗೆ ಜೈಲಿನಲ್ಲಿರುವುದು ಮತ್ತಷ್ಟು ಕಠಿಣವಾಯಿತು. ಜೈಲಿನ ನಿಯಮ ಉಲ್ಲಂಘಿಸಿದ್ದಕ್ಕೆ ತನಕೆ ಮತ್ತು ಇತರರಿಗೆ ದೈಹಿಕ ಶಿಕ್ಷೆ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಲಿಸಲಾಯಿತು. ನಮ್ಮನ್ನು ಸರಪಳಿಗಳಲ್ಲಿ ಬಂಧಿಸಲಾಗಿತ್ತು. ನಿತ್ಯದ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಯಿತು ಎಂದು ಹೇಳಿದ್ದಾನೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಹಾದ್ ಹರಡಿ, ಭಯೋತ್ಪಾದಕರ ನೇಮಕಕ್ಕೆ 1994ರ ಫೆಬ್ರವರಿಯಲ್ಲಿ ಮಸೂದ್ ಅಜರ್ ನಕಲಿ ಗುರುತು ಮತ್ತು ಪೋರ್ಚುಗೀಸ್ ಪಾಸ್‌ಪೋರ್ಟ್‌ನೊಂದಿಗೆ ಭಾರತಕ್ಕೆ ಬಂದಿದ್ದನು. ಆದರೆ ಆತನನ್ನು ಅನಂತ್‌ನಾಗ್‌ನಲ್ಲಿ ಬಂಧಿಸಲಾಯಿತು. 1994 ರಿಂದ 1999 ರವರೆಗೆ ಜೈಲಿನಲ್ಲಿದ್ದ ಆತನ ಬಿಡುಗಡೆಗೆ ಭಯೋತ್ಪಾದಕರು ಅನೇಕ ಪ್ರಯತ್ನಗಳನ್ನು ಮಾಡಿದ್ದರು.

ದಾವಣಗೆರೆ ಗಡಿ ಗ್ರಾಮದಲ್ಲಿ ನಿಗೂಢ ಶಬ್ದ; ಕಂಪಿಸಿದ ಭೂಮಿ, ಬೆಚ್ಚಿ ಬಿದ್ದ ಗ್ರಾಮಸ್ಥರು

ಕೊನೆಯದಾಗಿ 1999ರ ಡಿಸೆಂಬರ್ ನಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಐಸಿ-814 ಅಪಹರಣ ನಡೆಸಿದ ಭಯೋತ್ಪಾದಕರು ಒತ್ತೆಯಾಳುಗಳಿಗೆ ಬದಲಾಗಿ ಮಸೂದ್ ಅಜರ್ ಬಿಡುಗಡೆ ಮಾಡಲು ಆಗ್ರಹಿಸಿತ್ತು. ಇದರ ಪರಿಣಾಮ ಅಜರ್ ನನ್ನ ಬಿಡುಗಡೆ ಮಾಡಲಾಯಿತು. ಆ ಬಳಿಕವೂ ಆತ ಭಾರತದ ಮೇಲೆ ನಿರಂತರ ಭಯೋತ್ಪಾದಕ ದಾಳಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾನೆ. ಇದರಲ್ಲಿ ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯೂ ಸೇರಿದೆ.