ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold smuggling: ಬಾಯಲ್ಲಿ 82 ಗ್ರಾಂ ತೂಕದ ಚಿನ್ನದ ಕ್ಯಾಪ್ಸುಲ್ ಕಳ್ಳ ಸಾಗಣೆ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕ ಅರೆಸ್ಟ್

Bengaluru airport: ದುಬೈನಿಂದ ಬೆಂಗಳೂರಿಗೆ ಬಂದಿಳಿದಿದ್ದ ಆರೋಪಿ, ಇಲ್ಲಿಂದ ಬೇರೆ ವಿಮಾನದ ಮೂಲಕ ಗಾಜಿಯಾಬಾದ್‌ಗೆ ತೆರಳಲು ಮುಂದಾಗಿದ್ದ. ಭದ್ರತಾ ತಪಾಸಣೆ ವೇಳೆ ಅನುಮಾನ ಮೂಡಿದ್ದರಿಂದ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಬಾಯಿಯಲ್ಲಿ ಚಿನ್ನದ ಕ್ಯಾಪ್ಸುಲ್‌ ಇಟ್ಟುಕೊಂಡು ಸಾಗಿಸುತ್ತಿರುವುದು ಕಂಡುಬಂದಿದೆ.

ಬಾಯಲ್ಲಿ 82 ಗ್ರಾಂ ತೂಕದ ಚಿನ್ನದ ಕ್ಯಾಪ್ಸುಲ್: ಪ್ರಯಾಣಿಕ ಅರೆಸ್ಟ್

-

Prabhakara R
Prabhakara R Aug 26, 2026 5:38 PM

ಬೆಂಗಳೂರು: ಬಾಯಲ್ಲಿ ಬರೋಬ್ಬರಿ 82 ಗ್ರಾಂ ತೂಕದ ಚಿನ್ನದ ಕ್ಯಾಪ್ಸುಲ್‌ಗಳನ್ನು ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಿಸಲು (Gold smuggling) ಯತ್ನಿಸಿದ ಪ್ರಯಾಣಿಕನೊಬ್ಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru airport) ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. ದುಬೈನಿಂದ ಆಗಮಿಸಿ, ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ಪ್ರಯಾಣಿಸಲು ಮುಂದಾಗಿದ್ದ ಪ್ರಯಾಣಿಕನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಬಂಧಿತ ಆರೋಪಿಯನ್ನು ಮೊಹಮ್ಮದ್ ಸಿರಾಜ್ ಎಂದು ಗುರುತಿಸಲಾಗಿದೆ. ದುಬೈನಿಂದ ಬೆಂಗಳೂರಿಗೆ ಬಂದಿಳಿದಿದ್ದ ಮೊಹಮ್ಮದ್ ಸಿರಾಜ್, ಇಲ್ಲಿಂದ ಬೇರೆ ವಿಮಾನದ ಮೂಲಕ ಗಾಜಿಯಾಬಾದ್‌ಗೆ ತೆರಳಲು ದೇಶೀಯ ನಿರ್ಗಮನ ಗೇಟ್ ಕಡೆಗೆ ತೆರಳುತ್ತಿದ್ದ. ಈ ವೇಳೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಭದ್ರತಾ ತಪಾಸಣಾ ಹಂತದಲ್ಲಿ ಆತನ ಮುಖಭಾವ ಹಾಗೂ ನಡವಳಿಕೆಯಲ್ಲಿ ಅಸಹಜತೆ ಕಂಡುಬಂದಿದೆ. ಆತ ಮಾತನಾಡಲು ತಡಬಡಾಯಿಸುತ್ತಿದ್ದ ಕಾರಣ ಸಿಐಎಸ್‌ಎಫ್ ಸಿಬ್ಬಂದಿಗೆ ತೀವ್ರ ಅನುಮಾನ ಮೂಡಿದೆ.

ಕೂಡಲೇ ಆತನನ್ನು ವಶಕ್ಕೆ ಪಡೆದು ಪ್ರತ್ಯೇಕ ಕೊಠಡಿಯಲ್ಲಿ ಪರಿಶೀಲಿಸಿದಾಗ, ಆತ ತನ್ನ ಬಾಯಿಯ ದವಡೆಯ ಒಳಭಾಗದಲ್ಲಿ ಚಿನ್ನದ ಪೇಸ್ಟ್‌ ತುಂಬಿದ್ದ ಎರಡು ಹಳದಿ ಲೋಹದ ಕ್ಯಾಪ್ಸುಲ್‌ಗಳನ್ನು ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಸಿಬ್ಬಂದಿ ಆತನ ಬಾಯಿಂದ ಚಿನ್ನದ ಕ್ಯಾಪ್ಸುಲ್‌ಗಳನ್ನು ಹೊರತೆಗೆಸಿದ್ದು, ಒಟ್ಟು ತೂಕ ಸುಮಾರು 82 ಗ್ರಾಂ ಎಂದು ಅಂದಾಜಿಸಲಾಗಿದೆ.

Bomb threat: ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್‌ ಬೆದರಿಕೆ; ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್

ಬಾಯಿಯ ದವಡೆ ಭಾಗದಲ್ಲಿ ಸಣ್ಣ ಕ್ಯಾಪ್ಸುಲ್‌ಗಳನ್ನು ಇಟ್ಟುಕೊಂಡರೆ ತಪಾಸಣೆ ವೇಳೆ ಪಾರಾಗಬಹುದು ಎಂಬುದು ಆರೋಪಿಯ ಲೆಕ್ಕಾಚಾರವಾಗಿತ್ತು. ಆದರೆ, ಭದ್ರತಾ ಸಿಬ್ಬಂದಿಗೆ ಆರೋಪಿ ಬಗ್ಗೆ ಅನುಮಾನ ಮೂಡಿದ್ದರಿಂದ ಪರಿಶೀಲನೆ ವೇಳ ಸಿಕ್ಕಿಬಿದ್ದಿದ್ದಾನೆ.