ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹರಿಯಾಣದಲ್ಲಿ ಕೋತಿ ಮೇಲೆ ಅಮಾನುಷ ಹಲ್ಲೆ, ಬೀದಿಯಲ್ಲಿ ಮೆರವಣಿಗೆ; ಮನುಷತ್ವ ಮರೆತ ಮೃಗೀಯ ವರ್ತನೆಗೆ ವ್ಯಾಪಕ ಅಕ್ರೋಶ

Viral Video: ಹರಿಯಾಣದ ಫರಿದಾಬಾದ್‌ನಲ್ಲಿ ಸ್ಥಳೀಯರು ಕೋತಿಯೊಂದನ್ನು ಸೆರೆಹಿಡಿದು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಥಳಿಸಿ, ಪಂಜರದಲ್ಲಿ ಬಂಧಿಸಿ ಮೆರವಣಿಗೆ ಮಾಡಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ ಆಗಿದ್ದು, ಪ್ರಾಣಿಗಳ ಮೇಲಿನ ಕ್ರೌರ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ.

ಕೋತಿಯನ್ನು ಸೆರೆಹಿಡಿದು ಕ್ರೂರವಾಗಿ ಹಲ್ಲೆ ನಡೆಸಿ ಮೆರವಣಿಗೆ

ಹರಿಯಾಣದಲ್ಲಿ ಕೋತಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಮೆರವಣಿಗೆ -

Profile
Pushpa Kumari Oct 22, 2026 9:18 PM

ಚಂಡೀಗಢ, ಅ. 22: ಜನವಸತಿ ಪ್ರದೇಶಗಳಲ್ಲಿ ಕೋತಿಗಳು ದಾಳಿ ನಡೆಸಿ ಸುತ್ತಮುತ್ತಲಿರುವ ಉಪಟಳ ನೀಡಿದ ಅನೇಕ ಘಟನೆಗಳು ವರದಿಯಾಗಿವೆ. ಇದೀಗ ಅದಕ್ಕಿಂತ ಭಿನ್ನವಾಗಿ ಹರಿಯಾಣದ ಫರಿದಾಬಾದ್‌ನಲ್ಲಿ ಕೋತಿಯೊಂದನ್ನು ಸೆರೆಹಿಡಿದು ಸ್ಥಳೀಯರು ಕ್ರೂರವಾಗಿ ಹಲ್ಲೆ ಎಸಗಿದ್ದಾರೆ. ಮಂಗವನ್ನು ಹಿಡಿದು, ಥಳಿಸಿ, ಪಂಜರದಲ್ಲಿ ಬಂಧಿಸಿ ಮೆರವಣಿಗೆ ಮಾಡಿದ್ದಾರೆ. ಸದ್ಯ ಈ ಘಟನೆ (Viral News) ಪ್ರಾಣಿಗಳ ಮೇಲಿನ ಕ್ರೌರ್ಯದ ಬಗ್ಗೆ ಕಳವಳ ಹುಟ್ಟುಹಾಕಿದೆ.

ಈ ಘಟನೆಯ ದೃಶ್ಯ ವೈರಲ್ ಆಗುತ್ತಿದ್ದಂತೆ ಪ್ರಾಣಿಪ್ರಿಯರು ಆಕ್ರೋಶವನ್ನು ಹೊರಹಾಕಿದ್ದಾರೆ. ಕೋತಿಯನ್ನು ಕ್ರೂರವಾಗಿ ಥಳಿಸಿ, ಪಂಜರದಲ್ಲಿ ಹಾಕಿ ಬೀದಿಗಳಲ್ಲಿ ಮೆರವಣಿಗೆ ನಡೆಸಿದವರ ವಿರುದ್ಧ ಕಿಡಿಕಾರಿದ್ದಾರೆ. ಕೋತಿಯ ಹಾವಳಿ ಹೆಚ್ಚಗಿದ್ದರೂ ಈ ರೀತಿಯಾಗಿ ಹಲ್ಲೆ ನಡೆಸಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.

ವಿಡಿಯೊ ನೋಡಿ:

​ಜನವಸತಿ ಪ್ರದೇಶಗಳಲ್ಲಿ ಕೋತಿಗಳು ದಾಳಿ ನಡೆಸುತ್ತವೆ ನಿಜ. ಆದರೆ ಇಲ್ಲಿ ಕೋತಿಯನ್ನು ಕ್ರೂರವಾಗಿ ಹಿಂಸಿಸಲಾಗಿದೆ. ಅದನ್ನು ಹಿಡಿದು, ಥಳಿಸಿ, ಬಂಧಿಸಲಾಗಿದೆ. ಈ ಘಟನೆ ಪ್ರಾಣಿಗಳ ಮೇಲಿನ ಕ್ರೌರ್ಯದ ಬಗ್ಗೆ ಕಳವಳ ಉಂಟು ಮಾಡಿದ್ದು, ಮಾನವ-ಮಂಗ ಸಂಘರ್ಷಕ್ಕೆ ಅಧಿಕಾರಿಗಳ ಪ್ರತಿಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!

ಕೋತಿಯನ್ನು ಕಾನೂನುಬಾಹಿರವಾಗಿ ಸೆರೆಹಿಡಿದು, ದೈಹಿಕವಾಗಿ ಹಿಂಸಿಸಲಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಕೋತಿಯನ್ನು ಹಿಂಸಿಸುತ್ತಿರುವುದು ಹಾಗೂ ಅದನ್ನು ಪಂಜರದಲ್ಲಿ ಬಂಧಿಸಿರುವುದನ್ನು ಕಾಣಬಹುದು. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960ರ ಸೆಕ್ಷನ್ 11ರ ಪ್ರಕಾರ ಪ್ರಾಣಿಯನ್ನು ಹೊಡೆಯುವುದು ಮತ್ತು ಅನಗತ್ಯ ನೋವು ಉಂಟು ಮಾಡುವುದು ತಪ್ಪು. ಹೀಗಾಗಿ ಪ್ರಾಣಿಗಳ ಮೇಲೆ ಅಮಾನವೀಯವಾಗಿ ವರ್ತಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬಂದಿದೆ.