ಅತ್ಯಾಚಾರ ಪ್ರಕರಣ: 31 ವಾರಗಳ ಗರ್ಭಿಣಿ ಹದಿಹರೆಯದ ಸಂತ್ರಸ್ತೆಯ ಗರ್ಭಪಾತಕ್ಕೆ ಕೋರ್ಟ್ ಅನುಮತಿ
ಅತ್ಯಾಚಾರಕ್ಕೆ ಒಳಗಾಗಿದ್ದ ಹದಿಹರೆಯದ ಸಂತ್ರಸ್ತೆ 31 ವಾರಗಳ ಗರ್ಭಿಣಿಯಾಗಿದ್ದು, ಅವಳ ಗರ್ಭಪಾತಕ್ಕೆ ನ್ಯಾಯಾಲಯ ಅನುಮತಿ ನೀಡಿದೆ. ಈ ಕುರಿತು ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ ಸಂತಾನೋತ್ಪತ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿದ್ದು, ವೈದ್ಯಕೀಯ ಮಂಡಳಿಯ ಅಭಿಪ್ರಾಯ ಪಡೆದು ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ ಕಾಯ್ದೆಯಡಿಯಲ್ಲಿ ಅನುಮತಿಯನ್ನು ನೀಡಿದೆ.
ಸಂಗ್ರಹ ಚಿತ್ರ -
ಮುಂಬೈ: ಹದಿ ಹರೆಯದ ಅತ್ಯಾಚಾರ ಸಂತ್ರಸ್ತೆಗೆ (pregnant teenage victim) ಗರ್ಭಪಾತಕ್ಕೆ (abortion) ಬಾಂಬೆ ಹೈಕೋರ್ಟ್ (Bombay high court) ಅನುಮತಿಯನ್ನು ನೀಡಿದೆ. 31 ವಾರಗಳ ಗರ್ಭಿಣಿಯಾಗಿರುವ ಸಂತ್ರಸ್ತೆಗೆ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಸಂತಾನೋತ್ಪತ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿ ನ್ಯಾಯಾಲಯ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರ ವಿಭಾಗೀಯ ಪೀಠವು 16 ವರ್ಷದ ಯುವತಿಗೆ ಯಾವುದೇ ರೀತಿಯಲ್ಲಿ ದೈಹಿಕ ಅಥವಾ ಮಾನಸಿಕ ತೊಂದರೆಯಾಗುವುದಿಲ್ಲ ಎಂದು ವೈದ್ಯಕೀಯ ಮಂಡಳಿಯ ಅಭಿಪ್ರಾಯ ಪಡೆದ ಬಳಿಕ ನ್ಯಾಯಾಲಯ ಈ ಆದೇಶವನ್ನು ನೀಡಿದೆ.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ ಕಾಯ್ದೆಯಡಿಯಲ್ಲಿ 24 ವಾರಗಳ ಮಿತಿಯನ್ನು ಮೀರಿದ್ದು, ಅದನ್ನು ಮುಂದುವರಿಸಲು ಆಕೆ ವಿರೋಧಿಸಿರುವುದರಿಂದ ಹೈಕೋರ್ಟ್ ಆಕೆಯ ತಾಯಿಯ ಲಿಖಿತ ಒಪ್ಪಿಗೆ ಮತ್ತು ಅಗತ್ಯವಿರುವ ಎಲ್ಲಾ ವೈದ್ಯಕೀಯ ಮುನ್ನೆಚ್ಚರಿಕೆಗಳಿಗೆ ಒಳಪಟ್ಟು ಗರ್ಭಪಾತ ನಡೆಸಲು ಅನುಮತಿಯನ್ನು ನೀಡಿದೆ.
ಈ ಕುರಿತು ತೀರ್ಪು ನೀಡಿದ ಪೀಠವು, ಅಪ್ರಾಪ್ತ ಯುವತಿಯು 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಅನುಮತಿ ನೀಡಿ, ಅನಗತ್ಯ ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಉಲ್ಲೇಖಿಸಿದೆ.
ಇದಕ್ಕೂ ಮೊದಲು ಥಾಣೆ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು 24 ವಾರಗಳನ್ನು ಮೀರಿದ ಗರ್ಭಧಾರಣೆಯನ್ನು ವಿರೋಧಿಸಲಿಲ್ಲ. ಆದರೆ ಇದಕ್ಕಾಗಿ ನ್ಯಾಯಾಲಯದ ಅನುಮತಿ ಮುಖ್ಯ ಎಂದು ಹೇಳಿತ್ತು. ಫೆಬ್ರವರಿ 17 ರಂದು ಸಲ್ಲಿಸಲಾದ ಅರ್ಜಿಯಲ್ಲಿ ಅದು ಇಂತಹ ಹಲವು ಪ್ರಕರಣಗಳನ್ನು ಉಲ್ಲೇಖಿಸಿದ್ದು, ಇದಕ್ಕಾಗಿ ಪಾಲಿಸಬೇಕಾದ ಕಾರ್ಯವಿಧಾನವನ್ನು ಸ್ಪಷ್ಟಪಡಿಸಿತ್ತು. ತಕ್ಷಣವೇ ಯುವತಿಯ ಗರ್ಭಧಾರಣೆಯನ್ನು ಕೊನೆಗೊಳಿಸುವುದರಿಂದ ಯಾವುದೇ ರೀತಿಯಲ್ಲಿ ದೈಹಿಕ ಅಥವಾ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ.
ಅರ್ಜಿದಾರರ ಪರ ವಕೀಲೆ ಸಲೋನಿ ಘುಲೆ ಅವರು ಗರ್ಭಾವಸ್ಥೆಯ ಹಂತವು ಮುಂದುವರಿದಿರುವುದರಿಂದ ವೈದ್ಯಕೀಯ ಗರ್ಭಪಾತದ ಸಂದರ್ಭದಲ್ಲಿ ಯುವತಿ ಸಾಮಾನ್ಯ ಹೆರಿಗೆಯ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿರುವುದನ್ನು ನ್ಯಾಯಾಲಯಕ್ಕೆ ತಿಳಿಸಿದರು. ಅಪ್ರಾಪ್ತ ಬಾಲಕಿಗೆ ಈ ಕುರಿತು ಸಾಕಷ್ಟು ಮಾಹಿತಿ, ಸಲಹೆಯನ್ನು ನೀಡಿಲ್ಲ ಎಂದು ಹೇಳಿದರು.
ಬೈಕ್‌ನಲ್ಲಿ ಪ್ರೇಮಿಯ ಅಪಾಯಕಾರಿ ಸ್ಟಂಟ್‌ನಿಂದ ಯುವತಿಗೆ ಗಂಭೀರ ಗಾಯ: ಭಯಾನಕ ವಿಡಿಯೊ ವೈರಲ್
ಉಲ್ಹಾಸ್‌ನಗರದ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಬೇಕು ಎನ್ನುವ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಆಕೆಯನ್ನು ಈ ಹಿಂದೆ ಪರೀಕ್ಷಿಸಿದ ಇಬ್ಬರು ಸ್ತ್ರೀರೋಗತಜ್ಞರಿರುವ ಥಾಣೆಯ ಸಿವಿಲ್ ಆಸ್ಪತ್ರೆಗೆ ದಾಖಲಿಸಿ, ಅಲ್ಲೇ ಗರ್ಭಪಾತ ನಡೆಸಲು, ಸ್ತ್ರೀರೋಗತಜ್ಞರು ಇದರ ಮೇಲ್ವಿಚಾರಣೆ ನಡೆಸಲು ಸೂಚಿಸಿದೆ.