ಯೆಮೆನ್, ಸೊಮಾಲಿಯಾ ಕರಾವಳಿ ಭಾಗದಲ್ಲಿ 22 ಭಾರತೀಯರಿದ್ದ 2 ಹಡಗು ಅಪಹರಿಸಿದ ಕಡಲ್ಗಳ್ಳರು
ಎರಡು ಪ್ರತ್ಯೇಕ ಘಟನೆಯಲ್ಲಿ 22 ಭಾರತೀಯರಿದ್ದ ಹಡಗಳನ್ನು ಕಡಲ್ಗಳ್ಳರು ಅಪಹರಣ ನಡೆಸಿದ್ದಾರೆ. ಯೆಮೆನ್ ಮತ್ತು ಸೊಮಾಲಿಯಾ ಬಳಿ ಈ ಘಟನೆ ನಡೆದಿದೆ. ಎರಿಟ್ರಿಯಾ ಧ್ವಜ ಹೊಂದಿದ್ದ ತೈಲ ಉತ್ಪನ್ನಗಳ ಟ್ಯಾಂಕರ್ ಎಂ.ಟಿ. ಸಿಬು 1 ಮತ್ತು ಕ್ಯಾಮರೂನ್ ಧ್ವಜ ಹೊಂದಿದ್ದ ಸರಕು ಹಡಗು ಎಂ/ವಿ ಲುಟುಫ್ ಹಡಗಳನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ ಎನ್ನಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಯೆಮೆನ್ (yemen) ಮತ್ತು ಸೊಮಾಲಿಯಾ (somalia) ಬಳಿ 22 ಭಾರತೀಯರಿದ್ದ ಎರಡು ಹಡಗುಗಳನ್ನು (ship hijack) ಶಸ್ತ್ರ ಸಜ್ಜಿತ ಕಡಲ್ಗಳ್ಳರು (piracy) ಅಪಹರಿಸಿದ್ದಾರೆ. ಎರಿಟ್ರಿಯಾ ಧ್ವಜ ಹೊಂದಿದ್ದ ತೈಲ ಉತ್ಪನ್ನಗಳ ಟ್ಯಾಂಕರ್ ಎಂ.ಟಿ. ಸಿಬು 1 ಮತ್ತು ಕ್ಯಾಮರೂನ್ ಧ್ವಜ ಹೊಂದಿದ್ದ ಸರಕು ಹಡಗು ಎಂ/ವಿ ಲುಟುಫ್ ಹಡಗಳನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ. ಎಂ.ಟಿ. ಸಿಬು 1 ಅನ್ನು ಯೆಮೆನ್ ಕರಾವಳಿಯಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿರುವ ಏಡನ್ ಕೊಲ್ಲಿಯಲ್ಲಿ ಮತ್ತು ಎಂ/ವಿ ಲುಟುಫ್ ಹಡಗನ್ನು ಸೋಮಾಲಿಯಾದ ಪಂಟ್‌ಲ್ಯಾಂಡ್ ಕರಾವಳಿಯಲ್ಲಿ ಅಪಹರಣ ಮಾಡಲಾಗಿದೆ.
ಏಡನ್ ಕೊಲ್ಲಿಯಲ್ಲಿ ಆರು ಶಸ್ತ್ರಸಜ್ಜಿತ ಕಡಲ್ಗಳ್ಳರು ಎರಿಟ್ರಿಯಾ ಧ್ವಜ ಹೊಂದಿದ್ದ ತೈಲ ಉತ್ಪನ್ನಗಳ ಟ್ಯಾಂಕರ್ ಎಂ.ಟಿ. ಸಿಬು 1 ಅನ್ನು ಅಪಹರಿಸಿದ್ದಾರೆ. ಇದರಲ್ಲಿ ಒಟ್ಟು 20 ಸಿಬ್ಬಂದಿ ಇದ್ದು, ಇವರಲ್ಲಿ 16 ಮಂದಿ ಭಾರತೀಯರು. ಎಲ್ಲಾ 20 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಕಡಲ ಆಡಳಿತ ನಿರ್ದೇಶನಾಲಯ ತಿಳಿಸಿದ್ದು, ಸಿಬ್ಬಂದಿಯಲ್ಲಿ ಒಬ್ಬ ಸಿರಿಯನ್, ಒಬ್ಬ ಸುಡಾನ್ ಮತ್ತು ಒಬ್ಬ ಇರಾಕಿ ಪ್ರಜೆ ಕೂಡ ಇದ್ದಾರೆ. ಘಟನೆಯ ಬಳಿಕ ನೇಮಕಾತಿ ಮತ್ತು ಉದ್ಯೋಗ ಸೇವಾ ಪರವಾನಗಿ ಏಜೆನ್ಸಿಯ ಬಳಿ ವರದಿ ಕೇಳಲಾಗಿದೆ.
ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ: ಊಟ, ಸ್ವಚ್ಛತೆ ಪರಿಶೀಲಿಸಿದ ತಹಸೀಲ್ದಾರ್
ಈ ಕುರಿತು ಮಾಹಿತಿ ನೀಡಿದ ಎಸ್ ಕೆಎಸ್ ಕೃಷಿವ್ ಮೆರೈನ್ ಸರ್ವಿಸಸ್‌ನ ಸುಮಿತ್ ಕಾಂತ್ ಸಿಂಗ್, ತಮ್ಮ ಕಂಪೆನಿಯು ನಾಲ್ವರು ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಅವರ ವಿವರಗಳನ್ನು ಸಾಗರ ಆಡಳಿತ ನಿರ್ದೇಶನಾಲಯಕ್ಕೆ ಒದಗಿಸಲಾಗಿದೆ ಎಂದು ತಿಳಿಸಿದರು.
ಇನ್ನೊಂದು ಘಟನೆಯಲ್ಲಿ ಸೋಮಾಲಿಯಾದ ಪಂಟ್‌ಲ್ಯಾಂಡ್ ಕರಾವಳಿಯಲ್ಲಿ ಸೋಮವಾರ ಕಡಲ್ಗಳ್ಳರು ಕ್ಯಾಮರೂನ್ ಧ್ವಜ ಹೊಂದಿದ್ದ ಸರಕು ಹಡಗು ಎಂ/ವಿ ಲುಟುಫ್ ಅನ್ನು ಅಪಹರಣ ಮಾಡಿದ್ದಾರೆ. ಇದರಲ್ಲಿ 10 ಸಿಬ್ಬಂದಿ ಇದ್ದು, ಅವರಲ್ಲಿ ಆರು ಮಂದಿ ಭಾರತೀಯರು ಎಂದು ಸೊಮಾಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಂಟ್‌ಲ್ಯಾಂಡ್‌ನ ಐಲ್ ಜಿಲ್ಲೆಯ ಮರ್ರಾಯದಿಂದ ಸುಮಾರು 3.5 ನಾಟಿಕಲ್ ಮೈಲಿ ದೂರದಲ್ಲಿ ಹಡಗನ್ನು ಅಪಹರಿಸಿ ನುಗಾಲ್ ಕರಾವಳಿಯ ಕಡೆಗೆ ಕೊಂಡೊಯ್ಯಲಾಗಿದೆ. ಸಿಬ್ಬಂದಿಯಲ್ಲಿ ಒಬ್ಬ ಟರ್ಕಿಶ್, ಒಬ್ಬ ಜಾರ್ಜಿಯನ್ ಮತ್ತು ಇಬ್ಬರು ಸರ್ಬಿಯನ್ ಭದ್ರತಾ ಸಿಬ್ಬಂದಿ ಕೂಡ ಇದ್ದರು.
Two Ships Hijacked by #Pirates, 22 Indian #Seafarers Onboard!
— NewsTanksVoiceofSea (@NewsTanksind) August 21, 2026
Marine Tanks
New Delhi | August 21, 2026
Two separate piracy incidents near Yemen and Somalia have reportedly put 22 Indian seafarers onboard two commercial vessels at risk.
In the first incident, the…
ಈ ಹಡಗು ಪೋಲಾರ್ ಮೂವ್‌ಮೆಂಟ್ ಶಿಪ್ಪಿಂಗ್ ಒಡೆತನದಲ್ಲಿದ್ದು, ಇದರಲ್ಲಿ ಟರ್ಕಿಯ ಮಿಲಿಟರಿ ತರಬೇತಿ ಸೌಲಭ್ಯಕ್ಕಾಗಿ ಶಸ್ತ್ರಾಸ್ತ್ರ ಮತ್ತು ಸಂವಹನ ಮತ್ತು ಉಪಗ್ರಹ ಉಪಕರಣಗಳನ್ನು ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಟರ್ಕಿ ಯಾವುದೇ ಮಾಹಿತಿ ನೀಡಿಲ್ಲ.
ಕಳೆದ ಏಪ್ರಿಲ್ ನಲ್ಲಿ ಎಂಟು ಕಡಲ್ಗಳ್ಳರು ಎಂ/ವಿ ಸ್ವಾರ್ಡ್‌ನ ಅಪಹರಣ ಮಾಡಿದ್ದರು. ಇದರಲ್ಲಿ ಭಾಗಿಯಾಗಿದ್ದವರೇ ಈ ಬಾರಿಯೂ ಹಡಗು ಅಪಹರಣ ನಡೆಸಿದ್ದಾರೆ ಎನ್ನಲಾಗಿದೆ. ಎಂ/ವಿ ಸ್ವಾರ್ಡ್ ಅನ್ನು ಪಂಟ್‌ಲ್ಯಾಂಡ್‌ನ ಡ್ಯಾಂಗೋರೊಯೊ ಜಿಲ್ಲೆಯ ಗಾರ್ಮಾಲ್ ಬಳಿಯ ಕರಾವಳಿಯ ಕಡೆಗೆ ತೆಗೆದುಕೊಂಡು ಹೋಗಲಾಗಿತ್ತು.