ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪರ್ಯಾಯ ಶಿಕ್ಷಣ ಮಾದರಿ ರೂಪಿಸಲು ರಾಹುಲ್ ಗಾಂಧಿ ಸಲಹೆ; ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ನಾಲ್ಕು ಹಂತಗಳನ್ನು ಸೂಚಿಸಿದ ನಾಯಕ

Rahul Gandhi: ಪರ್ಯಾಯ ಶಿಕ್ಷಣ ಮಾದರಿಯನ್ನು ರೂಪಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಮತ್ತು ಹುದ್ದೆಗಳ ಭರ್ತಿ ಕ್ಯಾಲೆಂಡರ್‌ಗಳ ಕುರಿತು ವರದಿ ಸಿದ್ಧಪಡಿಸುವಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ರಾಹುಲ್ ಗಾಂಧಿ ಅವರು ಸೂಚಿಸಿದ್ದಾರೆ. ವಿದ್ಯಾರ್ಥಿಗಳನ್ನು ತಲುಪಲು 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ.

ಪರ್ಯಾಯ ಶಿಕ್ಷಣ ಮಾದರಿ ರೂಪಿಸಲು ರಾಹುಲ್ ಗಾಂಧಿ ಸಲಹೆ

ರಾಹುಲ್ ಗಾಂಧಿ (ಸಂಗ್ರಹ ಚಿತ್ರ) -

Priyanka P
Priyanka P Aug 21, 2026 11:49 AM

ನವದೆಹಲಿ, ಆ.21: ಪರ್ಯಾಯ ಶಿಕ್ಷಣ ಮಾದರಿಯನ್ನು ರೂಪಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಮತ್ತು ಹುದ್ದೆಗಳ ಭರ್ತಿ ಕ್ಯಾಲೆಂಡರ್‌ಗಳ ಕುರಿತು ವರದಿ ಸಿದ್ಧಪಡಿಸುವಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ರಾಹುಲ್ ಗಾಂಧಿ (Rahul Gandhi) ಅವರು ಸೂಚಿಸಿದ್ದಾರೆ. ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ದೋಷರಹಿತ ವ್ಯವಸ್ಥೆಯನ್ನು ರೂಪಿಸುವಂತೆ ಹಾಗೂ ಜಾತಿ ತಾರತಮ್ಯದ ವಿರುದ್ಧ ಕರ್ನಾಟಕ ಸರ್ಕಾರವು (Karnataka Government) ಅನುಮೋದಿಸಿರುವ 'ರೋಹಿತ್ ವೇಮುಲ ಬಿಲ್' ಅನ್ನು ಜಾರಿಗೆ ತರುವಂತೆ ಎಲ್ಲಾ ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ರಾಹುಲ್ ಸೂಚಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯ ಸಂದರ್ಭದಲ್ಲಿ, ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ರಾಜ್ಯ ಮಟ್ಟದ ಶಿಕ್ಷಣ ಕ್ಷೇತ್ರದಲ್ಲಿ ಗಮನ ಹರಿಸಬೇಕಾದ ನಾಲ್ಕು ಪ್ರಮುಖ ಕ್ಷೇತ್ರಗಳನ್ನು ಪ್ರಧಾನ ಕಾರ್ಯದರ್ಶಿ ಕನ್ಹಯ್ಯಾ ಕುಮಾರ್ ಅವರ ಬೆಂಬಲದೊಂದಿಗೆ ರಾಹುಲ್ ಗಾಂಧಿ ಅವರು ಸಲಹೆ ನೀಡಿದ್ದಾರೆ.

ವಿದ್ಯಾರ್ಥಿಗಳನ್ನು ತಲುಪಲು 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮವನ್ನು ಪ್ರಾರಂಭಿಸಿರುವ ರಾಹುಲ್ ಗಾಂಧಿ ಅವರು, ವಿದ್ಯಾರ್ಥಿಗಳಿಗೆ ಮತ್ತು ಆಡಳಿತಕ್ಕೆ ಹೆಚ್ಚಿನ ಶೈಕ್ಷಣಿಕ ಸ್ಪಷ್ಟತೆ ನೀಡಲು ರಾಜ್ಯಗಳು ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಸಿದ್ಧಪಡಿಸಬೇಕೆಂದು ಬಯಸಿದ್ದಾರೆ. ಇದರೊಂದಿಗೆ, ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ರಾಜ್ಯಗಳು ತಮ್ಮದೇ ಆದ ಯೋಜನೆಯನ್ನು ರೂಪಿಸಬೇಕು ಮತ್ತು 'ರೋಹಿತ್ ವೇಮುಲ ಕಾಯ್ದೆ'ಯನ್ನು ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿಗಳಿಗೆ ತಿಳಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ಐಐಟಿ ಮದ್ರಾಸ್‌ನಿಂದ ಎಂಜಿನಿಯರ್ ಮಾತ್ರವಲ್ಲ ಡಾಕ್ಟರ್‌ಗಳು ಹೊರಬರಲಿದ್ದಾರೆ: ಎಂಬಿಬಿಎಸ್‌ ಆರಂಭಿಸಲು ನಿರ್ದೇಶಕ ಕಾಮಕೋಟಿ ಸಿದ್ಧತೆ

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಈ ವರ್ಷದ ಏಪ್ರಿಲ್‌ನಲ್ಲಿ ರೋಹಿತ್ ವೇಮುಲಾ (ತಾರತಮ್ಯ, ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ, 2026 ಅನ್ನು ಅನುಮೋದಿಸಿದೆ.

11 ಮತ್ತು 12 ನೇ ತರಗತಿಯ ರಾಜಕೀಯ ವಿಜ್ಞಾನದ ಪುನರ್ರಚಿಸಲಾದ ಪಠ್ಯಪುಸ್ತಕ ಅಭಿವೃದ್ಧಿ ತಂಡದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಗೆ ಸಂಬಂಧಿಸಿದ ನಾಲ್ವರು ಸದಸ್ಯರನ್ನು ಸೇರಿಸಿಕೊಳ್ಳುವ ಎನ್‌ಸಿಇಆರ್‌ಟಿ ನಿರ್ಧಾರದ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

“ಒಂದೆಡೆ ಬಿಜೆಪಿ-ಆರ್‌ಎಸ್ಎಸ್ 'ಶುದ್ಧೀಕರಣ' ಮಾಡುತ್ತಿದ್ದು, ಅದು ಒಂದು ಪಾಪವಾಗಿದೆ. ಮತ್ತೊಂದೆಡೆ ಅವರು ಪಠ್ಯಪುಸ್ತಕಗಳ 'ಸಂಘೀಕರಣ' ಮಾಡುತ್ತಿದ್ದು, ಇದು ಒಂದು ಶಾಪವಾಗಿದೆ” ಎಂದು ವಿರೋಧ ಪಕ್ಷ ಹೇಳಿದೆ.

11 ಮತ್ತು 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕ ಅಭಿವೃದ್ಧಿ ತಂಡವನ್ನು ಎನ್‌ಸಿಇಆರ್‌ಟಿ (NCERT) ಪುನರ್ರಚಿಸಿದೆ. ಸಾಂಸ್ಕೃತಿಕ ಬೇರುಗಳು, ಭಾರತೀಯ ಜ್ಞಾನ ಪದ್ಧತಿಗಳು ಮತ್ತು ಒಳಗೊಳ್ಳುವಿಕೆಯನ್ನು ಸಂಯೋಜಿಸುವ ಆದೇಶದೊಂದಿಗೆ ಈ ತಂಡವನ್ನು ರಚಿಸಲಾಗಿದ್ದು, ಇದರ ಕನಿಷ್ಠ ನಾಲ್ವರು ಸದಸ್ಯರು ಆರ್‌ಎಸ್‌ಎಸ್ (RSS) ಜೊತೆಗೆ ಪ್ರತ್ಯಕ್ಷ ಅಥವಾ ಪರೋಕ್ಷ ನಂಟನ್ನು ಹೊಂದಿದ್ದಾರೆ.