ಪ್ರಧಾನಿ ಮೋದಿ ಆಗಮನದ ವೇಳೆ ಭದ್ರತಾ ಲೋಪ: ಬೆಂಗಳೂರಿನ 6 ಪೊಲೀಸರು ಅಮಾನತು
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ಭದ್ರತಾ ಲೋಪ ಉಂಟಾಗಿರುವ ಹಿನ್ನೆಲೆಯಲ್ಲಿ 6 ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಮೇ 10ರಂದು ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದ ವೇಳೆ ಅವರು ತೆರಳುವ ಮಾರ್ಗದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಎರಡು ಜೆಲಾಟಿನ್ ಕಡ್ಡಿಗಳು ಪತ್ತೆಯಾಗಿದ್ದವು.
ಸಂಗ್ರಹ ಚಿತ್ರ -
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಬೆಂಗಳೂರಿಗೆ (Bengaluru) ಭೇಟಿ ನೀಡಿದ್ದ ಸಮಯದಲ್ಲಿ ಉಂಟಾಗಿದ್ದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಪೊಲೀಸರನ್ನು ( cops suspend) ಅಮಾನತುಗೊಳಿಸಲಾಗಿದೆ. ಮೇ 10ರಂದು ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಅವರು ತೆರಳಬೇಕಿದ್ದ ಮಾರ್ಗದ ಭದ್ರತಾ ತಪಾಸಣೆಯ ವೇಳೆ ಎರಡು ಜೆಲಾಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಇದು ಭದ್ರತಾ ಲೋಪ ಪ್ರಕರಣವಾಗಿದ್ದರಿಂದ ತನಿಖೆ ಪೂರ್ಣಗೊಳ್ಳುವವರೆಗೆ ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಬೆಂಗಳೂರು ದಕ್ಷಿಣ-ರಾಮನಗರ (Bengaluru south-ramanagara) ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೇ ತಿಂಗಳ ಆರಂಭದಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ತೆರಳುವ ಮಾರ್ಗದ ಭದ್ರತಾ ತಪಾಸಣೆಯ ವೇಳೆ ಎರಡು ಜೆಲಾಟಿನ್ ಕಡ್ಡಿಗಳು ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು (ಕೇಂದ್ರ ವಲಯ) ಡಿಐಜಿ, ಮೇ 10ರಂದು ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸುವ ಕೆಲಕಾಲ ಮೊದಲು ನಡೆಸಿದ ನಿಯಮಿತ ಭದ್ರತಾ ತಪಾಸಣೆ ವೇಳೆ ಎರಡು ಜೆಲಾಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಇದು ಪ್ರಧಾನಿಯವರು ಭೇಟಿ ನೀಡಬೇಕಿದ್ದ ಮುಖ್ಯ ಕಾರ್ಯಕ್ರಮ ಸ್ಥಳದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿತ್ತು. ಬೆಂಗಳೂರಿನ ಹೊರವಲಯದ ಕಗಳಿಪುರದ ಬಳಿಯ ಆಶ್ರಮದ ಬಳಿ ಇರುವ ಪಾದಚಾರಿ ಮಾರ್ಗದ ಸಮೀಪ ಕಂಡು ಬಂದ ಈ ಜೆಲಾಟಿನ್ ಕಡ್ಡಿಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜೆಲಾಟಿನ್ ಕಡ್ಡಿಗಳು ಕಂಡು ಬಂದ ತಕ್ಷಣವೇ ಭದ್ರತಾ ಸಿಬ್ಬಂದಿ ಆ ಪ್ರದೇಶವನ್ನು ಸುತ್ತುವರಿದು ಬಾಂಬ್ ನಿಷ್ಕ್ರಿಯ ಮತ್ತು ವಿಧಿವಿಜ್ಞಾನ ತಂಡಗಳನ್ನು ಪರಿಶೀಲನೆಗಾಗಿ ತರೆಸಿಕೊಂಡಿತ್ತು. ಇದು ಗಂಭೀರ ಭದ್ರತಾ ಲೋಪವಾಗಿದ್ದರಿಂದ ತೀವ್ರ ತನಿಖೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಈ ಸ್ಫೋಟಕ ವಸ್ತು ಮಾರ್ಗದ ಬಳಿ ಹೇಗೆ ಬಂತು, ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗಲು ಕಾರಣವೇನು ಎನ್ನುವ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.
Anchor Jhanvi: ಬಿಗ್‌ಬಾಸ್ ಖ್ಯಾತಿಯ ಜಾಹ್ನವಿ ರಾಜಕೀಯಕ್ಕೆ ಎಂಟ್ರಿ; ಎಚ್‌ಡಿಕೆ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ
ಪ್ರಕರಣಕ್ಕೆ ಸಂಬಂಧಿಸಿ ಬಳಿಕ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಬರೆದ ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದು, ಇದು ಕ್ಷಮಿಸಲಾಗದ ಮತ್ತು ಗಂಭೀರ ಭದ್ರತಾ ಲೋಪವಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ದೇಶದ ಪ್ರಧಾನಿಯವರ ಭದ್ರತೆಯ ವಿಷಯದಲ್ಲಿ ಯಾವುದೇ ಸಣ್ಣ ಲೋಪ ಕೂಡ ಇರಬಾರದಿತ್ತು. ಇದರಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.