ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅನುಕಂಪದ ಸರ್ಕಾರಿ ಉದ್ಯೋಗ ಪಡೆಯಲು ನೀಚ ಕೆಲಸ; ಸುಪಾರಿ ಕೊಟ್ಟು ಅಪ್ಪನನ್ನೇ ಕೊಲ್ಲಿಸಿದ ಪಾಪಿ ಪುತ್ರ

Crime News: ಸರ್ಕಾರಿ ಕೆಲಸದ ಆಸೆಗಾಗಿ ವ್ಯಕ್ತಿಯೊಬ್ಬ ತನ್ನ ತಂದೆಯನ್ನೇ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ಧನ್ಬಾದ್ ಜಿಲ್ಲೆಯಲ್ಲಿ ನಡೆದಿದೆ. ಜೂನ್ 19 ರ ರಾತ್ರಿ ನಡೆದ ತುಳೇಶ್ವರ ನೋನಿಯಾ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಸುಪಾರಿ ಕಿಲ್ಲರ್ಸ್‌ಗಳನ್ನು ಬಂಧಿಸಲಾಗಿದೆ ಎಂದು ಧನ್ಬಾದ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಎಸ್. ಮೊಹಮ್ಮದ್ ಯಾಕೂಬ್ ತಿಳಿಸಿದ್ದಾರೆ.

ತಂದೆಯ ಸರ್ಕಾರಿ ಉದ್ಯೋಗ ಪಡೆಯಲು ಪುತ್ರ ಮಾಡಿದ ನೀಚ ಕೆಲಸ

ಸಾಂದರ್ಭಿಕ ಚಿತ್ರ -

Priyanka P
Priyanka P Jun 26, 2026 6:40 PM

ರಾಂಚಿ, ಜೂ.26: ಸರ್ಕಾರಿ ಕೆಲಸದ ಆಸೆಗಾಗಿ ವ್ಯಕ್ತಿಯೊಬ್ಬ ತನ್ನ ತಂದೆಯನ್ನೇ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ (Jharkhand) ಧನ್ಬಾದ್ ಜಿಲ್ಲೆಯಲ್ಲಿ ನಡೆದಿದೆ. ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಉದ್ಯೋಗಿಯಾಗಿದ್ದ ತನ್ನ ತಂದೆಯನ್ನು ಹತ್ಯೆ ಮಾಡಲು ಇಬ್ಬರಿಗೆ ಸುಪಾರಿ ಕೊಟ್ಟಿದ್ದ. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮಗನನ್ನು ಬಂಧಿಸಲಾಗಿದೆ. ತುಳೇಶ್ವರ ನೋನಿಯಾ ಕೊಲೆಯಾದ ದುರ್ದೈವಿ (crime news).

ಜೂನ್ 19 ರ ರಾತ್ರಿ ನಡೆದ ತುಳೇಶ್ವರ ನೋನಿಯಾ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಸುಪಾರಿ ಕಿಲ್ಲರ್ಸ್‌ಗಳನ್ನು ಬಂಧಿಸಲಾಗಿದೆ ಎಂದು ಧನ್ಬಾದ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಎಸ್. ಮೊಹಮ್ಮದ್ ಯಾಕೂಬ್ ತಿಳಿಸಿದ್ದಾರೆ.

ನೋನಿಯಾ ಬರೋರಾದ ಬಿಸಿಸಿಎಲ್ ಕಲ್ಲಿದ್ದಲು ಕಾರ್ಖಾನೆಯಲ್ಲಿ ಕಲ್ಲಿದ್ದಲು ಕೆಲಸಗಾರರಾಗಿದ್ದರು. ಬಿಸಿಸಿಎಲ್‌ನಲ್ಲಿ ಅವರಿಗೆ ಕೇವಲ ಎರಡು ವರ್ಷಗಳ ಸೇವಾವಧಿ ಮಾತ್ರ ಉಳಿದಿತ್ತು. ತಂದೆಯ ಮರಣದ ನಂತರ ಅವರ ಮಗ ವಿಜಯ್ ಚೌಹಾಣ್, ಸಿಂಪತಿ ಮೂಲಕ ಕಲ್ಲಿದ್ದಲು ಕಾರ್ಖಾನೆಯಲ್ಲಿ ಶಾಶ್ವತ ಉದ್ಯೋಗ ಪಡೆಯಲು ಬಯಸಿದ್ದ. ಹೀಗಾಗಿ ತನ್ನ ಸ್ವಂತ ತಂದೆಯನ್ನೇ ಕೊಲ್ಲಲು ಸಂಚು ರೂಪಿಸಿದ್ದ ಎಂದು ಅಧಿಕಾರಿ ಯಾಕೂಬ್ ತಿಳಿಸಿದರು.

Bengaluru triple murder: ಕೆ.ಆರ್‌. ಪುರ ತ್ರಿವಳಿ ಕೊಲೆ ಕೇಸ್‌; ಶ್ವೇತಾ ಪ್ರಿಯಕರ ಕೆನೆತ್‌ ಪುದುಚೇರಿಯಲ್ಲಿ ಅರೆಸ್ಟ್‌

ಬರೋರಾ ಪೊಲೀಸ್ ಠಾಣೆ ಪ್ರದೇಶದ ಬದೌರಾ ಕಾಲೋನಿಯ ನಿವಾಸಿಗಳಾದ ಅಮಿತ್ ಸಿಂಗ್ ಮತ್ತು ಅಖಿಲೇಶ್ ಮಲ್ಲಾ ಎಂಬವರೊಂದಿಗೆ ಚೌಹಾಣ್ ಕೊಲೆಯನ್ನು ಯೋಜಿಸಿದ್ದ. ಕೊಲೆಗೆ ಮುನ್ನ ಯಾವುದೇ ಮುಂಗಡ ಹಣ ನೀಡದಿದ್ದರೂ, ಚೌಹಾಣ್ ತನ್ನ ತಂದೆಯನ್ನು ಕೊಲ್ಲಲು ಇಬ್ಬರಿಗೆ 10 ಲಕ್ಷ ರೂ.ಗಳ ಆಮಿಷ ಒಡ್ಡಿದ್ದ. ಯಾರಿಗೂ ಅನುಮಾನ ಬರದಂತೆ ನೋಡಿಕೊಳ್ಳುವ ಸಲುವಾಗಿ, ಬಿಹಾರದ ಔರಂಗಾಬಾದ್‌ನಲ್ಲಿ ಸಂಬಂಧಿಕರ ಮದುವೆಗೆ ಹೋಗುವುದಾಗಿ ತಂದೆಗೆ ಹೇಳಿ ಬೆಳಗ್ಗೆ ಮನೆಯಿಂದ ಹೊರಟುಹೋಗಿದ್ದ.

ರಾತ್ರಿ ನೋನಿಯಾ ಅವರ ಶಿಫ್ಟ್ ಮುಗಿದ ನಂತರ, ಸಿಂಗ್ ಮತ್ತು ಮಲ್ಲಾ ಅವರಿಗೆ ತಮ್ಮ ಬೈಕ್‌ನಲ್ಲಿ ಲಿಫ್ಟ್ ನೀಡುವುದಾಗಿ ಹೇಳಿ ಏಕಾಂತ ಸ್ಥಳಕ್ಕೆ ಕರೆದೊಯ್ದರು. ಬಳಿಕ ದೊಡ್ಡ ಕಲ್ಲೊಂದರಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಸಾಕ್ಷ್ಯಗಳನ್ನು ನಾಶಪಡಿಸುವ ಮತ್ತು ಗುರುತನ್ನು ಮರೆಮಾಚುವ ಉದ್ದೇಶದಿಂದ, ಅವರ ಮುಖವನ್ನು ಜಜ್ಜಿದರು. ರಸ್ತೆ ಅಪಘಾತ ಎಂದು ಬಿಂಬಿಸಲು ಮೃತದೇಹವನ್ನು ಮುಖ್ಯ ರಸ್ತೆಗೆ ಎಳೆದೊಯ್ದರು.

ರಸ್ತೆಯಲ್ಲಿ ಮೃತದೇಹವಿರುವುದು ತಿಳಿದುಬಂದ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮೃತರು ನೋನಿಯಾ ಸಿಂಗ್ ಮತ್ತು ಮಲ್ಲಾ ಅವರೊಂದಿಗೆ ಒಂದೇ ಬೈಕ್‌ನಲ್ಲಿ ಸವಾರಿ ಮಾಡಿರುವುದು ಸ್ಪಷ್ಟವಾಗಿ ತೋರಿಸಿವೆ. ಈ ಸುಳಿವಿನ ಮೇರೆಗೆ ಪೊಲೀಸರು ಇಬ್ಬರನ್ನೂ ಬಂಧಿಸಿ ಕಠಿಣ ವಿಚಾರಣೆಗೆ ಒಳಪಡಿಸಿದರು. ಅಂತಿಮವಾಗಿ ಸಂಪೂರ್ಣ ಸತ್ಯವನ್ನು ಬಯಲಾಯಿತು. ಕೊಲೆಗೆ ಸುಪಾರಿ ಕೊಟ್ಟ ಪುತ್ರನನ್ನು ಕೂಡ ಬಂಧಿಸಲಾಯಿತು. ಆರೋಪಿ ಮಲ್ಲಾ ಅಪರಾಧ ಹಿನ್ನೆಲೆಯನ್ನು ಹೊಂದಿದ್ದಾನೆ. ಈ ಹಿಂದೆ ಮಧುಬನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಲ್ಲಿದ್ದಲು ಮತ್ತು ಡೀಸೆಲ್ ಕಳ್ಳತನ ಪ್ರಕರಣಗಳಲ್ಲಿ ಜೈಲಿನಲ್ಲಿದ್ದ.