ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs IRE: ವೈಭವ್‌ ಸೂರ್ಯವಂಶಿಗೆ ಚಾನ್ಸ್‌ ನೀಡದೇ ಇರಲು ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆರೆಂಜ್‌ ಕ್ಯಾಪ್‌ ಗೆಲ್ಲುವ ಮೂಲಕ ತೀವ್ರ ಸಂಚಲನ ಮೂಡಿಸಿದ್ದ 15ರ ವಯಸ್ಸಿನ ವೈಭವ್‌ ಸೂರ್ಯವಂಶಿ ಅವರು ಐರ್ಲೆಂಡ್‌ ವಿರುದ್ಧದ ಟಿ20ಐ ಸರಣಿಯ ಭಾರತ ತಂಡದಲ್ಲಿದ್ದಾರೆ. ಆದರೆ, ಜೂನ್‌ 26 ರಂದು ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ವೈಭವ್‌ಗೆ ಅವಕಾಶ ಸಿಗಲಿಲ್ಲ.

ವೈಭವ್‌ಗೆ ಸ್ಥಾನ ನೀಡದೇ ಇರಲು ಕಾರಣ ತಿಳಿಸಿದ ಅಯ್ಯರ್‌!

ವೈಭವ್‌ಗೆ ಚಾನ್ಸ್‌ ನೀಡದೇ ಇರಲು ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್‌. -

Profile
Ramesh Kote Jun 26, 2026 7:37 PM

ಬೆಲ್‌ಫಾಸ್ಟ್‌: ಭಾರತ ಹಾಗೂ ಐರ್ಲೆಂಡ್‌ ನಡುವಣ ಎರಡು ಪಂದ್ಯಗಳ ಟಿ20ಐ (IND vs IRE) ಸರಣಿಯಲ್ಲಿನ ಆಸಕ್ತದಾಯತಕ ಸಂಗತಿ ಏನೆಂದರೆ ವೈಭವ್‌ ಸೂರ್ಯವಂಶಿ (Vaibhav Sooryavanshi) ಎಂದರೆ ತಪ್ಪಾಗಲಾರದು. ಏಕೆಂದರೆ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 776 ರನ್‌ಗಳ ಮೂಲಕ ಆರೆಂಜ್‌ ಕ್ಯಾಪ್‌ ಹಾಗೂ ಭಾರತ ಎ ಪರ ತ್ರಿಕೋನ ಏಕದಿನ ಸರಣಿಯ ಫೈನಲ್‌ ಪಂದ್ಯದಲ್ಲಿ 29 ಎಸೆತಗಳಲ್ಲಿ 94 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಐರ್ಲೆಂಡ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿರುವ ವೈಭವ್‌ಗೆ ಮೊದಲನೇ ಪಂದ್ಯದಲ್ಲಿ ಅವಕಾಶ ನೀಡಬಹುದೆಂದು ಒಂದು ನಿರೀಕ್ಷೆ ಇತ್ತು. ಆದರೆ, ಟಾಸ್‌ ವೇಳೆ ಯುವ ಬ್ಯಾಟ್ಸ್‌ಮನ್‌ ಆಡುತ್ತಿಲ್ಲ ಎಂದು ಭಾರತದ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಖಚಿತಪಡಿಸಿದರು.

ಇಲ್ಲಿನ ಸಿವಿಲ್‌ ಸರ್ವೀಸ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದ ಮೊದಲನೇ ಟಿ2ಐ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಬೌಲಿಂಗ್‌ ಆಯ್ದುಕೊಂಡರು. ಆ ಮೂಲಕ ಚೇಸಿಂಗ್‌ ಮಾಡಲು ನಿರ್ಧರಿಸಿದರು. ಈ ವೇಳೆ ಭಾರತ ತಂಡದ ಪ್ಲೇಯಿಂಗ್‌ Xi ಬಗ್ಗೆಯೂ ಬೆಳಕು ಚೆಲ್ಲಿದರು. ವಿಶೇಷವಾಗಿ ಅವರು 15ರ ವಯಸ್ಸಿನ ಯುವ ಆರಂಭಿಕ ವೈಭವ್‌ ಸೂರ್ಯವಂಶಿ ಅವರನ್ನು ಪ್ಲೇಯಿಂಗ್‌ XIಗೆ ಪರಿಗಣಿಸದೇ ಇರುವ ಬಗ್ಗೆಯೂ ವಿವರಿಸಿದರು. ತಂಡದಲ್ಲಿ ಈಗಾಗಲೇ ಅನುಭವಿ ಹಾಗೂ ನೆಲೆಯೂರಿರುವ ಆಟಗಾರರ ಇದ್ದಾರೆ, ಹಾಗಾಗಿ ವೈಭವ್‌ ತಮಗೆ ಅವಕಾಶ ಸಿಗುವ ವರೆಗೂ ಕಾಯಬೇಕೆಂದು ತಿಳಿಸಿದ್ದಾರೆ.

IND vs IRE: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ, ವೈಭವ್‌ ಸೂರ್ಯವಂಶಿಗೆ ಸ್ಥಾನವಿಲ್ಲ!

ತಮ್ಮ ಅವಕಾಶಕ್ಕಾಗಿ ವೈಭವ್‌ ಕಾಯಬೇಕು: ಅಯ್ಯರ್‌

"ದುರದೃಷ್ಟವಶಾತ್ ಇಲ್ಲ. ಅವರು ಅತ್ಯಂತ ಪ್ರತಿಭಾವಂತ ಆಟಗಾರ. ಆದರೆ ನಮ್ಮ ತಂಡದಲ್ಲಿ ಕಳೆದ ಕೆಲವು ಸರಣಿಗಳಲ್ಲಿ ಭಾರತ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಈ ಋತುವಿನುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿರುವ ಬಹುತೇಕ ಆಟಗಾರರ ಮೇಲೆಯೇ ನಾವು ವಿಶ್ವಾಸವಿಟ್ಟಿದ್ದೇವೆ."

"ವೈಭವ್‌ಗೆ ಸಮಯ ಬಂದಾಗ ಖಂಡಿತ ಅವಕಾಶ ಸಿಗುತ್ತದೆ. ಆದರೆ ಸದ್ಯಕ್ಕೆ ನಾವು ಮೂರು ಪ್ರಮುಖ ವೇಗದ ಬೌಲರ್‌ಗಳು, ಒಬ್ಬ ಆಲ್‌ರೌಂಡರ್ ಮತ್ತು ಇಬ್ಬರು ಸ್ಪಿನ್ನರ್‌ಗಳ ಸಂಯೋಜನೆಯೊಂದಿಗೆ ಕಣಕ್ಕಿಳಿಯುತ್ತಿದ್ದೇವೆ," ಎಂದು ಶ್ರೇಯಸ್‌ ಅಯ್ಯರ್ ಟಾಸ್‌ ವೇಳೆ ವಿವರಿಸಿದ್ದಾರೆ.

ಭಾರತ ತಂಡದ ಹೊಸ ನಾಯಕ ಶ್ರೇಯಸ್ ಅಯ್ಯರ್ ನಾಯಕನಾಗಿ ತಮ್ಮ ಮೊದಲ ಟಾಸ್ ಗೆದ್ದಿದ್ದು, ಸರಣಿಯ ಮೊದಲ ಟಿ20ಐ ಪಂದ್ಯದಲ್ಲಿ ಮೊದಲು ಬೌಲ್‌ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.



ಟಾಸ್ ಬಳಿಕ ಮಾತನಾಡಿದ ಅಯ್ಯರ್, "ನಾವು ಮೊದಲು ಬೌಲ್‌ ಮಾಡಲಿದ್ದೇವೆ. ಪಿಚ್ ಉತ್ತಮವಾಗಿದೆ ಎಂದು ಕಾಣುತ್ತಿದೆ. ಇದು ನಮಗೆ ಹೊಸ ಮೈದಾನ. ನಮ್ಮ ತಂಡದ ಬಹುತೇಕ ಆಟಗಾರರು ಇಲ್ಲಿ ಈ ಹಿಂದೆ ಆಡಿಲ್ಲ. ಹೀಗಾಗಿ ಇಲ್ಲಿನ ಹವಾಮಾನ, ಪರಿಸ್ಥಿತಿ ಹಾಗೂ ಪಿಚ್‌ನ ಸ್ವಭಾವವನ್ನು ಪರಿಗಣಿಸಿ ಮೊದಲು ಬೌಲ್‌ ಮಾಡಲು ನಿರ್ಧರಿಸಿದ್ದೇವೆ," ಎಂದು ಹೇಳಿದರು.

ಈ ಪಂದ್ಯಕ್ಕೆ 15 ವರ್ಷದ ಪ್ರತಿಭಾವಂತ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ಸಿಗಲಿಲ್ಲ. ಅವರ ಜೊತೆಗೆ ಸೂರ್ಯಾಂಶ್ ಶೆಡ್ಗೆ, ಪ್ರಿನ್ಸ್ ಯಾದವ್ ಹಾಗೂ ರವಿ ಬಿಷ್ಣೋಯ್ ಕೂಡ ಮೊದಲ ಟಿ20 ಪಂದ್ಯಕ್ಕೆ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯದೆ ಬೆಂಚ್‌ನಲ್ಲೇ ಉಳಿದರು.



ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್‌), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿಧ್‌ ಕೃಷ್ಣ

ಐರ್ಲೆಂಡ್‌: ಟಿಮ್‌ ಟೆಕ್ಟರ್‌ (ನಾಯಕ), ರಾಸ್‌ ಅಡೈರ್‌, ಹ್ಯಾರಿ ಟೆಕ್ಟರ್‌, ಲಾರ್ಕನ್‌ ಟಕ್ಕರ್‌ (ವಿಕೆಟ್‌ ಕೀಪರ್‌), ಬೆಂಜಮಿನ್‌ ಕಾಲಿಟ್ಜ್‌, ಗೆರೆಥ್‌ ಡೆಲಾನಿ, ಜಾರ್ಜ್‌ ಡಾರ್ಕೆಲ್‌, ಲಿಯಾಮ್‌ ಮೆಗಾರ್ಥಿ, ಮ್ಯಾಥ್ಯೂ ಹಂಫ್ರೀಸ್, ಜೈ ಮೂಂಡ್ರಿ, ಮ್ಯಾಥ್ಯೂ ಹೋಲಾರ್ಡ್‌, ಸ್ಟೆಫನ್‌ ಡೊಹೇನಿ