ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇವಲ 200 ರೂ. ಸಾಲ ವಾಪಸ್ ಕೇಳಿದಕ್ಕೆ ಹೋಯ್ತು ಟೀ ಅಂಗಡಿ ಮಾಲೀಕನ ಜೀವ!

200 ರೂಪಾಯಿ ಸಾಲದ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಅಪ್ಪಕಾರನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಟೀ ಅಂಗಡಿ ಮಾಲೀಕ ಬಾಕಿ ಇರುವ ಹಣ ನೀಡುವಂತೆ ಕೇಳಿದಕ್ಕೆ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

200 ರೂ. ಸಾಲ ವಾಪಸ್ ಕೇಳಿದಕ್ಕೆ ಹೋಯ್ತು ಟೀ ಅಂಗಡಿ ಮಾಲೀಕನ ಜೀವ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar May 17, 2026 12:44 PM

ದೊಡ್ಡಬಳ್ಳಾಪುರ: 200 ರೂಪಾಯಿ ಸಾಲದ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ (Doddabalapura) ಅಪ್ಪಕಾರನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಟೀ ಅಂಗಡಿ ಮಾಲೀಕ ಬಾಕಿ ಇರುವ ಹಣ ನೀಡುವಂತೆ ಕೇಳಿದಕ್ಕೆ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದ್ಯಾವಸಂದ್ರ ಗ್ರಾಮದ ಮಂಜುನಾಥ (40) ಕೊಲೆಯಾದ ದುರ್ದೈವಿ. ಮೇ 12 ರಂದು ಅಪ್ಪಕಾರನಹಳ್ಳಿಯ ಮುನಿಯಪ್ಪ ಎಂಬಾತ ಮಂಜುನಾಥ್ ಅವರ ಟೀ ಅಂಗಡಿಗೆ ಬಂದು ಮತ್ತೆ ಸಾಲ ಕೇಳಿದ್ದ.

ಈ ವೇಳೆ ಮಾಲೀಕ ಮಂಜುನಾಥ್, ಹಳೆಯ ಟೀ ಸಾಲದ ಬಾಕಿ ಹಣ 200 ರೂ.ಕೊಡು, ಇನ್ನು ಮುಂದೆ ಸಾಲ ಕೊಡುವುದಿಲ್ಲ ಎಂದು ಹೇಳಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿದೆ. ಸಾಲ ವಾಪಸ್​ ಕೊಡು ಎಂದಿದ್ದಕ್ಕೆ ಕೋಪಗೊಂಡ ಮುನಿರಾಜು ದೊಣ್ಣೆಯಿಂದ ಮನಸೋಯಿಚ್ಚೆ ಹಲ್ಲೆ ಮಾಡಿ ಮಂಜುನಾಥ್ ಅವರನ್ನು ಕೊಲೆ ಮಾಡಿದ್ದಾನೆ. ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆರೋಪಿ ಮುನಿಯಪ್ಪ ಈ ಹಿಂದೆ ಹೆತ್ತ ತಾಯಿಗೂ ಚಾಕು ಹಾಕಿ ಜೈಲು ಸೇರಿದ್ದ. ಇತ್ತೀಚೆಗಷ್ಟೇ ಬೇಲ್ ಮೇಲೆ ಹೊರಗೆ ಬಂದಿದ್ದ ಈತ ಈಗ ಮತ್ತೊಂದು ಕೊಲೆ ಮಾಡಿದ್ದಾನೆ. ದೊಡ್ಡಬೆಳವಂಗಲ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ; ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ

ಮಾಜಿ ಗ್ರಾ ಪಂ ಅಧ್ಯಕ್ಷನ ಹತ್ಯೆ

ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಹತ್ಯೆಯಾದ ವ್ಯಕ್ತಿಯನ್ನು ಅತಾವುಲ್ಲಾ (46) ಎಂದು ಗುರುತಿಸಲಾಗಿದೆ. ಭದ್ರಾವತಿಯ ಶೇಖ್ ದಸ್ತುಗಿರಿ, ಜಬೀವುಲ್ಲಾ ಸಹಚರರಿಂದ ಕೊಲೆ ನಡೆದಿದೆ. ಈ ಹಿಂದೆ ಇಬ್ಬರ ನಡುವೆ ಹಣದ ವಿಚಾರಕ್ಕೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ಕಾರಣದಿಂದಾಗಿ ದುಷ್ಕರ್ಮಿಗಳು ಶುಕ್ರವಾರ (ಮೇ 15) ತಡರಾತ್ರಿ ಏಕಾಏಕಿ ಬೈಕ್‍ನಲ್ಲಿ ಬಂದು ದಾಳಿ ನಡೆಸಿ, ಕತ್ತಿ ಹಾಗೂ ಮಚ್ಚುಗಳಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ.