ಕಾರಿಗೆ ಎಟಿಎಂ ಮೆಷಿನ್ ಕಟ್ಟಿ ಕದ್ದೊಯ್ದ ಕಳ್ಳರು; ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಎಟಿಎಂ ಮೆಷಿನ್ ಅನ್ನು ಕಾರಿಗೆ ಕಟ್ಟಿಕೊಂಡು ಕಳ್ಳರು ಕದ್ದೊಯ್ದ ಘಟನೆ ಒಡಿಶಾದಲ್ಲಿ ನಡೆದಿದೆ. ಇದರ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಲಸೋರ್ ಜಿಲ್ಲೆಯ ತುಡಿಗಾಡಿಯಾ ಬಜಾರ್ ಪ್ರದೇಶದಲ್ಲಿಈ ಘಟನೆ ಶನಿವಾರ ಮುಂಜಾನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಮೆಷಿನ್ ಒಡೆದು ಅದನ್ನು ಅಲ್ಲೇ ಬಿಟ್ಟು ಹಣದೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ.
ಸಂಗ್ರಹ ಚಿತ್ರ -
ಒಡಿಶಾ: ಹಣಕ್ಕಾಗಿ ಕಳ್ಳರು ಎಟಿಎಂ ಅನ್ನೇ ಕದ್ದೊಯ್ದ ಘಟನೆ ಒಡಿಶಾದಲ್ಲಿ (Odisha) ನಡೆದಿದ್ದು, ಇದರ ಸಂಪೂರ್ಣ ದೃಶ್ಯವಾಳಿಗಳು ಸಿಸಿಟಿವಿ ಸೆರೆಯಾಗಿದೆ. ಸುಮಾರು 5ಕ್ಕೂ ಹೆಚ್ಚು ದರೋಡೆಕೋರರು ಸ್ವಯಂಚಾಲಿತ ಟೆಲ್ಲರ್ ಯಂತ್ರವನ್ನು (Automated Teller Machine) ಅನ್ನು ಮಹೀಂದ್ರಾ ಥಾರ್ ವಾಹನಕ್ಕೆ ಹಗ್ಗದಿಂದ ಕಟ್ಟಿ ಎಳೆದುಕೊಂಡು ಹೋಗಿದ್ದಾರೆ. ಈ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯ (Balasore district) ತುಡಿಗಾಡಿಯಾ ಬಜಾರ್ ಪ್ರದೇಶದಲ್ಲಿ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ.
ಕಪ್ಪು ಮಹೀಂದ್ರಾ ಥಾರ್ ಕಾರಿನಲ್ಲಿ ಬಂದ ಸುಮಾರು ಐದಕ್ಕೂ ಹೆಚ್ಚು ಮಂದಿ ಎಟಿಎಂ ಕಿಯೋಸ್ಕ್ ಅನ್ನು ವಾಹನಕ್ಕೆ ಹಗ್ಗದಿಂದ ಕಟ್ಟಿ ಬಳಿಕ ಎಳೆದುಕೊಂಡು ಹೋಗಿದ್ದಾರೆ. ಇದರಿಂದ ಕಿಯೋಸ್ಕ್‌ನ ಪ್ರವೇಶದ್ವಾರ ತೆರೆದು ಯಂತ್ರ ಸ್ಥಳದಿಂದ ಕಿತ್ತು ಕೊಂಡು ಹೋಗಿದೆ.
ವೈರಲ್ ವಿಡಿಯೊ ಇಲ್ಲಿದೆ:
Some unidentified miscreants conducted a robbery in Odisha’s Balasore district using a Mahindra Thar SUV. They uprooted an Automated Teller Machine (ATM) with the help of the Thar. Then they tried to dismantle it near the ATM location, but as they failed, they dragged it away, pic.twitter.com/TgutkiNy3o
— Abhishek raghav (@Abhishek4media) July 11, 2026
ಬಳಿಕ ದರೋಡೆಕೋರರು ಅದನ್ನು ನಿರ್ಜನ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಒಡೆದು ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಹಾನಿಗೊಳಗಾದ ಯಂತ್ರ ರಸ್ತೆ ಬದಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಾಮೀನು ಪಡೆದು ಜೈಲಿನಿಂದ ಹೊರಬಂದು ಪತ್ನಿ-ಮಕ್ಕಳು ಸೇರಿ 6 ಜನರನ್ನು ಹತ್ಯೆಗೈದ ಪೋಕ್ಸೊ ಅಪರಾಧಿ
ಘಟನೆಯ ಸಂಪೂರ್ಣ ದೃಶ್ಯವಾಳಿಯು ಹತ್ತಿರದಲ್ಲಿ ಅಳವಡಿಸಲಾದ ಸಿಸಿಟಿವಿ ಕೆಮರಾಗಳಲ್ಲಿ ಸೆರೆಯಾಗಿದೆ. ದುಷ್ಕರ್ಮಿಗಳು ಎಸ್‌ಯುವಿ ಹಿಂದೆ ಎಟಿಎಂ ಅನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಗಳನ್ನು ಗುರುತಿಸಲು ಮತ್ತು ದರೋಡೆಗೆ ಬಳಸಲಾದ ವಾಹನವನ್ನು ಪತ್ತೆ ಹಚ್ಚಲು ವಶಕ್ಕೆ ಪಡೆದಿದ್ದಾರೆ.
ಕಳ್ಳತನದ ಸಂದರ್ಭದಲ್ಲಿ ಎಟಿಎಂನಲ್ಲಿ ಎಷ್ಟು ನಗದು ಮೊತ್ತವಿತ್ತು ಎನ್ನುವ ಕುರಿತು ನಿಖರ ಮಾಹಿತಿ ತಿಳಿದುಬಂದಿಲ್ಲ. ಇದಕ್ಕಾಗಿ ಪೊಲೀಸರು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಈ ಪ್ರದೇಶದಲ್ಲಿ ಹಲವಾರು ಕಳ್ಳತನ ಮತ್ತು ದರೋಡೆ ಘಟನೆಗಳು ನಡೆದಿದೆ. ಈ ಪ್ರದೇಶದಲ್ಲಿ ಪೊಲೀಸರು ಸರಿಯಾಗಿ ಗಸ್ತು ನಡೆಸುತ್ತಿಲ್ಲ. ಇದರಿಂದ ಈ ಘಟನೆ ನಡೆದಿದೆ. ಈ ಭಾಗದಲ್ಲಿ ಭದ್ರತಾ ಕ್ರಮಗಳನ್ನು ಬಲಪಡಿಸಲು ಮತ್ತು ರಾತ್ರಿ ಗಸ್ತು ಹೆಚ್ಚುಗೊಳಿಸಲು ಸ್ಥಳೀಯರು ಒತ್ತಾಯಿಸಿದರು.
ಅಣಬೆ ತಿನ್ನೋ ಮುನ್ನ ಎಚ್ಚರ; ಮಶ್ರೂಮ್ ಸೇವಿಸಿ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ!
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಎಟಿಎಂ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.