ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾಕಿಸ್ತಾನಿ ಮಿಲಿಟರಿ ಗೀತೆಗೆ ಮಹಾರಾಷ್ಟ್ರದ ಉರ್ದು ಶಾಲಾ ವಿದ್ಯಾರ್ಥಿಗಳಿಂದ ಡ್ಯಾನ್ಸ್‌!

Students Dance to Pakistani Military Song: ಉರ್ದು ಶಾಲೆಯೊಂದರಲ್ಲಿ ಪಾಕಿಸ್ತಾನಿ ಮಿಲಿಟರಿ ಗೀತೆಗೆ ವಿದ್ಯಾರ್ಥಿಗಳು ಡಾನ್ಸ್ ಮಾಡಿದ ಕಳವಳಕಾರಿ ಘಟನೆ ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ನಡೆದಿದೆ. ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಉಮರ್ಖೇಡ್ ಪಟ್ಟಣದ ಅಬ್ದುಲ್ ಗಫೂರ್ ಶಾ ಮುನ್ಸಿಪಲ್ ಉರ್ದು ಶಾಲೆ ಸಂಖ್ಯೆ 2ರ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಪಾಕಿಸ್ತಾನಿ ಮಿಲಿಟರಿ ಗೀತೆಗೆ ನೃತ್ಯ ಮಾಡಿದ ವಿದ್ಯಾರ್ಥಿಗಳು

ಪಾಕಿಸ್ತಾನಿ ಮಿಲಿಟರಿ ಗೀತೆಗೆ ನೃತ್ಯ ಮಾಡಿದ ಉರ್ದು ಶಾಲಾ ವಿದ್ಯಾರ್ಥಿಗಳು -

Priyanka P
Priyanka P Feb 14, 2026 9:38 PM

ಮುಂಬೈ, ಫೆ. 14: ಉರ್ದು ಶಾಲೆಯೊಂದರಲ್ಲಿ ಪಾಕಿಸ್ತಾನಿ ಮಿಲಿಟರಿ ಗೀತೆಗೆ (Pakistani Military Song) ವಿದ್ಯಾರ್ಥಿಗಳು ಡಾನ್ಸ್ ಮಾಡಿದ ಕಳವಳಕಾರಿ ಘಟನೆ ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ನಡೆದಿದೆ. ಸರ್ಕಾರಿ ಉರ್ದು ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ಪಾಕಿಸ್ತಾನಿ ಮಿಲಿಟರಿ ಗೀತೆಗೆ ಹೆಜ್ಜೆ ಹಾಕಿದ್ದಾರೆ. ಈ ವಿವಾದ ಭುಗಿಲೆದ್ದ ಬೆನ್ನಲ್ಲೇ ಶಾಲಾ ಆಡಳಿತದ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ನಡೆದ ಪ್ರದರ್ಶನದ ಕುರಿತು ದೂರಿನ ಮೇರೆಗೆ ಉಮರ್ಖೇಡ್ ಪಟ್ಟಣದ ಅಬ್ದುಲ್ ಗಫೂರ್ ಶಾ ಮುನ್ಸಿಪಲ್ ಉರ್ದು ಶಾಲೆ ಸಂಖ್ಯೆ 2ರ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ವಿಡಿಯೊ ವೀಕ್ಷಿಸಿ:



ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು. ವಿಡಿಯೊ ವೈರಲ್ ಆಗುತ್ತಿದ್ದಂತೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ನೃತ್ಯ ಮಾಡುವಾಗ ಅಣಕು ಕತ್ತಿಗಳನ್ನು ಪ್ರದರ್ಶಿಸಿದ್ದರು. ʼಏ ಮರ್ದ್-ಎ-ಮುಜಾಹಿದ್ ತೇರಿ ಯಲ್ಗಾರ್ ಕಹಾ ಹೈʼ ಗೀತೆಗೆ ವಿದ್ಯಾರ್ಥಿಗಳು ಕುಣಿದಿದ್ದಾರೆ. ಇದು ಪಾಕಿಸ್ತಾನಿ ಮಿಲಿಟರಿ ಗೀತೆ.

ಎಂಬಿಎ ವಿದ್ಯಾರ್ಥಿನಿ ಸಾವಿನ ಸುತ್ತ ಅನುಮಾನದ ಹುತ್ತ

ವೈರಲ್ ಆಗಿರುವ ವಿಡಿಯೊದಲ್ಲಿ ಮಕ್ಕಳು ವೇದಿಕೆಯಲ್ಲಿ ಅಣಕು ಕತ್ತಿಗಳನ್ನು ಹಿಡಿದು ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ನಂತರ ವೈರಲ್ ಆಯ್ತು. ಬಳಕೆದಾರರು ಇದನ್ನು ಪಾಕಿಸ್ತಾನಿ ಗೀತೆ ಎಂದು ಹೇಳಿದ ಬಳಿಕ ತೀವ್ರ ಆಕ್ರೋಶ ವ್ಯಕ್ತವಾಯಿತು. ಪೊಲೀಸರು ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 196(1)(c) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ತ್ರಿಕೋನ ಪ್ರೇಮ ಪ್ರಕರಣ: ಕೊಲೆಯಲ್ಲಿ ಅಂತ್ಯ

ಮುಂಬೈನ ಶಿವಾಜಿ ನಗರ ಪ್ರದೇಶದಲ್ಲಿ ಸಂಚಲನಕಾರಿ ಕೊಲೆಯ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಫರ್ಕಾನಿಯಾ ಪ್ರದೇಶದಲ್ಲಿ 19 ವರ್ಷದ ಶಿಫಾ ಅವರ ಭೀಕರ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.

ಮಂಗಳವಾರ (ಫೆಬ್ರವರಿ 10) ಮಧ್ಯಾಹ್ನ ಫರ್ಕಾನಿಯಾ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಸಿತು. 19 ವರ್ಷದ ಶಿಫಾ ಮೇಲೆ ಗುಂಡು ಹಾರಿಸಲಾಯಿತು. ಗಂಭೀರವಾಗಿ ಗಾಯಗೊಂಡ ಶಿಫಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು. ರಕ್ತಸಿಕ್ತ ರಸ್ತೆ ಮತ್ತು ಹಗಲು ಹೊತ್ತಿನಲ್ಲಿ ನಡೆದ ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿತ್ತು.

ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ, ಶಿವಾಜಿ ನಗರ ಪೊಲೀಸ್ ಠಾಣೆ ತಂಡವು ತಕ್ಷಣವೇ ಕೊಲೆಯ ತನಿಖೆಯನ್ನು ಪ್ರಾರಂಭಿಸಿತು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮಾಹಿತಿದಾರರಿಂದ ಬಂದ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಬಲೆ ಬೀಸಿ ಇಬ್ಬರು ಶಂಕಿತರನ್ನು ಬಂಧಿಸಿದರು.

25 ವರ್ಷದ ಮಹಿಳೆ ಮತ್ತು 23 ವರ್ಷದ ಯುವಕ ಬಂಧಿತ ಆರೋಪಿಗಳು. ಆರಂಭಿಕ ಪೊಲೀಸ್ ತನಿಖೆಯಲ್ಲಿ ಈ ಪಿತೂರಿಯು ಪ್ರಣಯ ಸಂಬಂಧ, ಅಸೂಯೆ ಮತ್ತು ವೈಯಕ್ತಿಕ ವಿವಾದದಿಂದ ಹುಟ್ಟಿಕೊಂಡಿದೆ ಎಂದು ತಿಳಿದುಬಂದಿದೆ.