ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪೊಲೀಸ್‌ ಅಧಿಕಾರಿಗಳ ಸೋಗಿನಲ್ಲಿ ಸೈಬರ್‌ ವಂಚನೆ ಮಾಡ್ತಾರೆ ಹುಶಾರ್‌! ಯಾಮಾರಿದ್ರೆ ಹಣವೆಲ್ಲ ಮಾಯ

Online Fraud Case: ಆನ್‌ಲೈನ್ ವಂಚನೆ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಪೊಲೀಸ್ ಅಧಿಕಾರಿಗಳಂತೆ ನಟಿಸಿ ಅಮಾಯಕರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಸೈಬರ್ ವಂಚಕರನ್ನು ಬಂಧಿಸಿದ್ದಾರೆ. ವಿವಿಧ ತಂತ್ರಗಳನ್ನು ಬಳಸಿಕೊಂಡು ಜನರನ್ನು ಮೋಸಗೊಳಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆನ್‌ಲೈನ್ ವಂಚನೆ ಪ್ರಕರಣ ಭೇದಿಸಿದ ಉತ್ತರ ಪ್ರದೇಶದ ಪೊಲೀಸರು

ಸಾಂದರ್ಭಿಕ ಚಿತ್ರ -

Priyanka P
Priyanka P Jan 24, 2026 3:01 PM

ಲಖನೌ: ಉತ್ತರ ಪ್ರದೇಶದ ಸೈಬರ್‌ ಸೆಲ್‌ ಪೊಲೀಸರು ಅನೇಕ ಆನ್‌ಲೈನ್‌ ವಂಚನೆ ಪ್ರಕರಣಗಳನ್ನು (Online Fraud Case) ಬಳಸಿಕೊಂಡಿರುವ ಗುಂಪನ್ನು ಭೇದಿಸಿದ್ದಾರೆ. ಪೊಲೀಸ್ ಅಧಿಕಾರಿಗಳಂತೆ ನಟಿಸಿದ ಸೈಬರ್ ವಂಚಕರು ಜನರಿಗೆ ಕರೆ ಮಾಡಿ, ನೀವು ಅಶ್ಲೀಲ ಚಿತ್ರ ನೋಡುತ್ತಿದ್ದೀರಾ, ನಿಮ್ಮನ್ನು ಬಂಧಿಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಯಾವ ರೀತಿ ಬೆದರಿಕೆ ಹಾಕಿದ್ದಾರೆ ಎಂಬುದನ್ನು ವಂಚಕರು ಪೊಲೀಸರ ಮುಂದೆಯೇ ತೋರಿಸಿಕೊಟ್ಟಿದ್ದಾರೆ (cyber crime).

ಅಷ್ಟೇ ಅಲ್ಲ, ಪೊಲೀಸರ ಯುಪಿಸಿಒಪಿ ಆಪ್‍ನಿಂದ ಎಫ್ಐಆರ್‌ಗಳ ನಾಪತ್ತೆ ಮತ್ತು ಅಪಹರಣ ಪ್ರಕರಣಗಳ ಪ್ರತಿಗಳನ್ನು ಡೌನ್ಲೋಡ್ ಮಾಡಿ, ದೂರುದಾರರಿಂದ ಹಣ ಕೇಳಲು ಕರೆ ಮಾಡುತ್ತಿದ್ದರು, ಕಾಣೆಯಾದ ವ್ಯಕ್ತಿಗಳನ್ನು ಹುಡುಕಿದ್ದೇವೆ ಮತ್ತು ಅವರನ್ನು ಮನೆಗೆ ಕರೆತರುತ್ತಿದ್ದೇವೆ ಎಂದು ಹೇಳುತ್ತಿದ್ದರು.

ಸೈಬರ್ ಕ್ರೈಮ್ ಹೊಸ ತಂತ್ರ.. ಸೈಲೆಂಟ್ ಕಾಲ್ ಮೂಲಕವೂ ವಂಚಿಸ್ತಾರೆ ಎಚ್ಚರ

ಜಹಾನಗಢ ಪೊಲೀಸ್ ಠಾಣೆ ಮತ್ತು ಸೈಬರ್ ಅಪರಾಧ ವಿಭಾಗದ ಜಂಟಿ ತಂಡ ಮಧ್ಯಪ್ರದೇಶದ ಟಿಕಮ್‍ಗಢದ ಅಂಕಿತ್ ಯಾದನ್ (24) ಮತ್ತು ದೀನ್‌ದಯಾಳ್ ಯಾದವ್ (45) ಎಂಬ ವಂಚಕರನ್ನು ಬಂಧಿಸಿದೆ. ಬಂಧಿತರಿಂದ ಎರಡು ಮೊಬೈಲ್ ಫೋನ್‍ಗಳು, ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಂಚಕರ ತಂಡವು ಸಂತ್ರಸ್ತರಿಂದ ಯಾವ ರೀತಿ ಹಣ ಸುಲಿಗೆ ಮಾಡಿದ್ದೇವೆ ಎಂಬುದನ್ನು ಪೊಲೀಸರ ಮುಂದೆಯೇ ತೋರಿಸಿಕೊಟ್ಟರು.

ಮಹಿಳೆಯೊಬ್ಬರು ನೀಡಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದರು. ಈ ವೇಳೆ ಇಬ್ಬರನ್ನು ಬಂಧಿಸಿದರು. ಬಂಧಿತ ಆರೋಪಿಗಳು ಯುಪಿಸಿಒಪಿ ಆಪ್ ಮೂಲಕ ಎಫ್ಐಆರ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾಗಿ ಒಪ್ಪಿಕೊಂಡರು. ಪೊಲೀಸ್ ಅಧಿಕಾರಿಗಳಂತೆ ನಟಿಸಿದ ಆರೋಪಿಗಳು ದೂರುದಾರರಿಗೆ ಕರೆ ಮಾಡುತ್ತಿದ್ದರು. ಅವರು 2,000 ರೂ.ಗಳಿಂದ 25,000 ರೂ.ಗಳವರೆಗೆ ಹಣ ಕೇಳಿದ್ದರಿಂದ ದೂರುದಾರರು ಕರೆ ಮಾಡಿದವರನ್ನು ಅನುಮಾನಿಸಲಿಲ್ಲ. ದೂರುದಾರರು ಅವರು ಕೇಳಿದಷ್ಟು ಹಣವನ್ನು ಕಳುಹಿಸಿದ್ದಾರೆ.

ಆರೋಪಿಗಳು ಹಲವು ರಾಜ್ಯಗಳ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಸೈಬರ್ ಅಪರಾಧ ಪೋರ್ಟಲ್‍ನಲ್ಲಿ ಎನ್‍ಸಿಆರ್‌ಪಿ ಮೂಲಕ ದೂರು ವಿವರಗಳನ್ನು ಪಡೆದಾಗ, ಅವರ ವಿರುದ್ಧ 26 ದೂರುಗಳು ದಾಖಲಾಗಿರುವುದು ಕಂಡುಬಂದಿದೆ. ಉತ್ತರ ಪ್ರದೇಶದಲ್ಲಿ ಅವರು ಬಾರಾಬಂಕಿ, ಘಾಜಿಪುರ, ಅಜಮ್‍ಗಢ, ಹಮೀರ್‌ಪುರ, ಬುಲಂದ್‌ಶಹರ್, ಹಾಪುರ್, ಬಿಜ್ನೋರ್, ಆಲಿಗಢ ಮತ್ತು ಇತರೆಡೆಗಳಲ್ಲಿ ಹಲವಾರು ಮಂದಿಯನ್ನು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ಕೋಟ್ಯಾಂತರ ರೂಪಾಯಿಗಳನ್ನು ಈ ವಂಚಕರು ಸುಲಿಗೆ ಮಾಡಿದ್ದಾರೆ ಎಂದು ತಿಳಿದುಬಂದಿರುವುದರಿಂದ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಗುರುಗ್ರಾಮದಲ್ಲಿ ಸೈಬರ್ ವಂಚನೆ: ವ್ಯಕ್ತಿಯೊಬ್ಬರಿಗೆ ರೂ. 6.3 ಕೋಟಿ ವಂಚಿಸಿದ ವಂಚಕರು

ಗುರುಗ್ರಾಮದ ಸೆಕ್ಟರ್ 54 ರ 58 ವರ್ಷದ ನಿವೃತ್ತ ನೌಕರರೊಬ್ಬರು ಕಳೆದ ನಾಲ್ಕು ವರ್ಷಗಳಲ್ಲಿ ನೂರಾರು ವಹಿವಾಟುಗಳಲ್ಲಿ ರೂ. 6.3 ಕೋಟಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಮಾನಯಾನ ಸಿಬ್ಬಂದಿ, ವಕೀಲರು ಮತ್ತು ಪೊಲೀಸ್ ಅಧಿಕಾರಿಗಳಂತೆ ನಟಿಸಿದ ವಂಚಕರು ನಾಲ್ಕು ವರ್ಷಗಳ ಅವಧಿಯಲ್ಲಿ ಅವರನ್ನು ಬೆದರಿಸಿದ್ದಾರೆ. ನಕಲಿ ದಾಖಲೆಗಳು ಮತ್ತು ಡೀಪ್‌ಫೇಕ್ ಫೋಟೋಗಳನ್ನು ಬಳಸಿ ಭಯದ ಭಾವನೆಯನ್ನು ಮೂಡಿಸುವ ಮೂಲಕ ಹಣ ಸುಲಿಗೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 308(2) (ಸುಲಿಗೆ), 316(2) (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 351(2) (ಕ್ರಿಮಿನಲ್ ಬೆದರಿಕೆ), 356(2) (ಮಾನನಷ್ಟ) ಮತ್ತು 61 (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಸೆಕ್ಟರ್ 53 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.