ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

King Release Date: ಹೈ-ಆಕ್ಟೇನ್ ಆಕ್ಷನ್ ಶಾರುಖ್‌ ಮೂವಿ ʻಕಿಂಗ್‌ʼ! ರಿಲೀಸ್‌ ಡೇಟ್‌ ಅನೌನ್ಸ್‌

Sharukh: ಸಿದ್ಧಾರ್ಥ್ ಆನಂದ್ ನಿರ್ದೇಶನದ, ಶಾರುಖ್ ಖಾನ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕಿಂಗ್ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಕಳೆದ ವರ್ಷ ಶಾರುಖ್ ಖಾನ್ ಅವರ ಹುಟ್ಟುಹಬ್ಬದಂದು, ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಬಹುನಿರೀಕ್ಷಿತ ಚಿತ್ರ ಕಿಂಗ್‌ನ ಶೀರ್ಷಿಕೆ ರಿವೀಲ್‌ ಮಾಡಿದ್ದರು. ಇದು ಪಠಾಣ್ ನಂತರ ಶಾರುಖ್‌ ಹಾಗೂ ಸಿದ್ಧಾರ್ಥ್ ಮಾಡುತ್ತಿರುವ ಎರಡನೇ ಸಿನಿಮಾ ಆಗಿದೆ.

ಹೈ-ಆಕ್ಟೇನ್ ಆಕ್ಷನ್ ಶಾರುಖ್‌ ಮೂವಿ ʻಕಿಂಗ್‌ʼ! ರಿಲೀಸ್‌ ಡೇಟ್‌ ಅನೌನ್ಸ್‌

ಶಾರುಖ್‌ ಖಾನ್‌ -

Yashaswi Devadiga
Yashaswi Devadiga Jan 24, 2026 6:03 PM

ಸಿದ್ಧಾರ್ಥ್ ಆನಂದ್ ನಿರ್ದೇಶನದ, ಶಾರುಖ್ ಖಾನ್ (Sharukh Khan) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಕಿಂಗ್ ಬಿಡುಗಡೆ (King Release Date) ದಿನಾಂಕ ಹೊರಬಿದ್ದಿದೆ. ಕಳೆದ ವರ್ಷ ಶಾರುಖ್ ಖಾನ್ ಅವರ ಹುಟ್ಟುಹಬ್ಬದಂದು, ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಬಹುನಿರೀಕ್ಷಿತ ಚಿತ್ರ ಕಿಂಗ್‌ನ ಶೀರ್ಷಿಕೆ (Title) ರಿವೀಲ್‌ ಮಾಡಿದ್ದರು. ಇದು ಪಠಾಣ್ ನಂತರ ಶಾರುಖ್‌ ಹಾಗೂ ಸಿದ್ಧಾರ್ಥ್ ಮಾಡುತ್ತಿರುವ ಎರಡನೇ ಸಿನಿಮಾ ಆಗಿದೆ. ಜವಾನ್’ ಸಿನಿಮಾದಲ್ಲೂ ಶಾರುಖ್-ದೀಪಿಕಾ (Sharukh Deepika) ಕಾಂಬಿನೇಷನ್ ಇದೆ. ಈ ಜೋಡಿ ‘ಕಿಂಗ್’ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ.

ರಿಲೀಸ್‌ ಯಾವಾಗ?

ಪಠಾಣ್ ಚಿತ್ರದ 3 ವರ್ಷಗಳ ವಾರ್ಷಿಕೋತ್ಸವದ ಮುನ್ನಾದಿನದಂದು ಶಾರುಖ್ ಖಾನ್ ಮತ್ತು ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ಘೋಷಣೆ ಮಾಡಿದ್ದಾರೆ. ಈ ಚಿತ್ರವು ಡಿಸೆಂಬರ್ 24, 2026 ರಂದು ತೆರೆಗೆ ಬರಲಿದೆ.

ಇದನ್ನೂ ಓದಿ: ಸೆಲ್ಫಿ ತೆಗೆಯಲು ಬಂದ ಅಭಿಮಾನಿಗೆ ಅವಮಾನ ಮಾಡಿದ್ರಾ ಶಾರುಖ್‌ ಖಾನ್‌? ವೈರಲ್‌ ಆಗ್ತಿರೋ ವಿಡಿಯೋದಲ್ಲೇನಿದೆ?

ಬಿಡುಗಡೆ ದಿನಾಂಕದ ಜೊತೆಗೆ, ತಯಾರಕರು ಅಭಿಮಾನಿಗಳಿಗೆ 'ಕಿಂಗ್' ಪ್ರಪಂಚದ ಸುಳಿವುನ್ನು ನೀಡಿದ್ದಾರೆ. 'ಕಿಂಗ್' ಈಗ ಕೇವಲ 11 ತಿಂಗಳಲ್ಲಿ ವರ್ಷದ ಕೊನೆಯಲ್ಲಿ ಘರ್ಜಿಸಲು ಸಿದ್ಧವಾಗಿದೆ.

ಶಾರುಖ್ ಖಾನ್ ಅವರ ಹುಟ್ಟುಹಬ್ಬದಂದು ನವೆಂಬರ್ 2 ರಂದು ಬಿಡುಗಡೆಯಾದ ಈ ರೋಮಾಂಚಕಾರಿ ಶೀರ್ಷಿಕೆಯು, ಅವರ ಆಕ್ಷನ್ ಆಧಾರಿತ ಲುಕ್, ಶಾರುಖ್-ವಿಶೇಷ ಥೀಮ್ ಸಾಂಗ್ ಮೂಲಕ ಪರಿಚಯಿಸಿತು, ದಿನಾಂಕ ಬಹಿರಂಗವಾಗುತ್ತಿದ್ದಂತೆ, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುತ್ತಲೇ ಇದೆ.

ಹೈ-ಆಕ್ಟೇನ್ ಆಕ್ಷನ್ ಎಂಟರ್‌ಟೈನರ್

ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಿಸಿದ ಕಿಂಗ್, 2026 ರ ಬಹುನಿರೀಕ್ಷಿತ ದೊಡ್ಡ ಪರದೆಯ ಪ್ರದರ್ಶನವಾಗಿ ರೂಪುಗೊಳ್ಳುತ್ತಿದೆ.

ಹೈ-ಆಕ್ಟೇನ್ ಆಕ್ಷನ್ ಎಂಟರ್‌ಟೈನರ್ ಎಂದು ವಿವರಿಸಲಾದ ಕಿಂಗ್ , ಶೈಲಿ, ವರ್ಚಸ್ಸು ಮತ್ತು ಅಡ್ರಿನಾಲಿನ್-ಪ್ಯಾಕ್ಡ್ ಕಥೆ ಹೇಳುವಿಕೆಯನ್ನು ಮರು ವ್ಯಾಖ್ಯಾನಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: FACT CHECK: ಮೃಣಾಲ್ ಠಾಕೂರ್-ಧನುಷ್ ಮದುವೆ ಆಗಿರೋದು ನಿಜನಾ? ಫೋಟೋ ವೈರಲ್‌

ಇದು ಸಿದ್ಧಾರ್ಥ್ ಆನಂದ್ ಅವರ ಇದುವರೆಗಿನ ಅತ್ಯಂತ ಜನಪ್ರಿಯ ಯೋಜನೆಯಾಗುವ ನಿರೀಕ್ಷೆಯಿದೆ, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಿಸಿರುವಈ ಚಿತ್ರದಲ್ಲಿ ಈ ಹೈ-ವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಸುಹಾನಾ ಖಾನ್ ಜೊತೆಗೆ ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ಜೈದೀಪ್ ಅಹ್ಲಾವತ್, ಅರ್ಷದ್ ವಾರ್ಸಿ ಮತ್ತು ಅಭಿಷೇಕ್ ಬಚ್ಚನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.