ಉಡುಪಿಯಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದು ಮೈಮೇಲೆ ಹರಿದ ಕ್ರೇನ್; ಬೆಚ್ಚಿಬೀಳಿಸುವ ವಿಡಿಯೊ ಇಲ್ಲಿದೆ
ಉಡುಪಿ ಜಿಲ್ಲೆಯ ಪೆರಂಪಳ್ಳಿಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕ್ರೇನ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಇದರ ಭಯಾನಕ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎದುರು ಬರುತ್ತಿದ್ದ ಕಾರಿಗೆ ಕ್ರೇನ್ ಚಾಲಕ ದಾರಿ ಬಿಟ್ಟು ಕೊಡುವಾಗ ಈ ಅಪಘಾತ ಸಂಭವಿಸಿದೆ.
ಸಂಗ್ರಹ ಚಿತ್ರ -
ಉಡುಪಿ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ (pedestrian) ಮೇಲೆ ಕ್ರೇನ್ (crane) ಹರಿದ ಘಟನೆ ಉಡುಪಿಯ (Udupi) ಪೆರಂಪಳ್ಳಿಯಲ್ಲಿ (Perampalli) ಇತ್ತೀಚೆಗೆ ನಡೆದಿದೆ. ಪೆರಂಪಳ್ಳಿಯ ಹೆರ್ಗಾ ಕೃಷಿ ಸೇವಾ ಸಹಕಾರ ಸಂಘದ (Herga Agricultural Service Cooperative Society) ಮುಂದೆ ಈ ಘಟನೆ ನಡೆದಿದ್ದು, ಇದರ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಂದೆ ಬರುತ್ತಿದ್ದ ಕಾರಿಗೆ ದಾರಿ ಮಾಡಿಕೊಡಲು ಕ್ರೇನ್ ಚಾಲಕ ವಾಹನವನ್ನು ತಿರುಗಿಸಿದ್ದಾನೆ. ಇದರಿಂದ ಆ ಅಪಘಾತ ಸಂಭವಿಸಿದೆ. ಪಾದಚಾರಿ ಮೇಲೆ ಕ್ರೇನ್ ಹರಿದಿದ್ದು, ಗಂಭೀರ ಗಾಯಗೊಂಡ ಆತನನ್ನು ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಫೆಬ್ರವರಿ 12 ರಂದು ಸಂಜೆ 5.50 ರ ಸುಮಾರಿಗೆ ಉಡುಪಿಯ ಪೆರಂಪಳ್ಳಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ಒಬ್ಬಂಟಿಯಾಗಿ ನಡೆಯುತ್ತಿದ್ದ ವ್ಯಕ್ತಿಯ ಮೇಲೆ ಕ್ರೇನ್ ಹರಿದು ಹೋಗಿದೆ. ಇದರ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಗಳಮುಖಿ ಜತೆ ಪ್ರೀತಿಯಲ್ಲಿದ್ದ ಯುವಕ; ಬಾಡಿಗೆ ಮನೆಯಲ್ಲಿ ಇಬ್ಬರೂ ಅನುಮಾನಾಸ್ಪದ ಸಾವು
ಸಿಸಿಟಿವಿ ದೃಶ್ಯದಲ್ಲಿ ಪಾದಚಾರಿ ಕ್ರೇನ್‌ನ ಕೆಳಗೆ ಬೀಳುವುದನ್ನು, ಆತನ ಮೇಲೆ ಕ್ರೇನ್ ಹರಿದು ಹೋಗಿರುವುದನ್ನು ಕಾಣಬಹುದು. ಅಪಘಾತದ ಬಳಿಕ ಕ್ರೇನ್ ಚಾಲಕ ಸ್ವಲ್ಪ ಸಮಯ ತನ್ನ ವಾಹನವನ್ನು ನಿಲ್ಲಿಸಿ ಪಾದಚಾರಿಯನ್ನು ನೋಡದೆ ಹೋಗುತ್ತಾನೆ. ಬಿದ್ದ ಕೆಲವು ಕ್ಷಣಗಳ ಬಳಿಕ ಪಾದಚಾರಿಗೆ ಪ್ರಜ್ಞೆ ಮರಳಿ ಬಂದಿದ್ದು, ಆತ ಎದ್ದೇಳಲು ಕಷ್ಟಪಡುತ್ತಿದ್ದನು. ಕ್ರೇನ್ ನಿಧಾನವಾಗಿದ್ದರಿಂದ ಆತನಿಗೆ ಕೊಂಚ ಗಾಯವಾಗಿದೆ ಎನ್ನಲಾಗಿದೆ.
ಅಪಘಾತದ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಚಾಲಕನನ್ನು ಪತ್ತೆಹಚ್ಚಲು ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
A pedestrian narrowly escaped death after being run over by a crane in a shocking accident in Karnataka's Perampalli.
— Vani Mehrotra (@vani_mehrotra) February 18, 2026
The incident took place when the man was walking along the roadside. A crane ran over him, leaving him with serious injuries.
Locals immediately rushed the… pic.twitter.com/QrkrFXOOyA
ರಾಜಸ್ಥಾನದಲ್ಲಿ ಕ್ರೇನ್ ಡಿಕ್ಕಿ: ವ್ಯಕ್ತಿ ಸಾವು
ವರ್ಷದ ಆರಂಭದಲ್ಲಿ ರಾಜಸ್ಥಾನದ ದೌಸಾದಲ್ಲಿರುವ ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಕೈಲಾಶ್ ಗುರ್ಜರ್ (56) ಮೃತರು. ಗುರ್ಜರ್ ಅವರು ಮನ್ಪುರ್ ಚೌರಾಹಾ ಮಾರುಕಟ್ಟೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಕ್ರೇನ್ ಡಿಕ್ಕಿಯಾಗಿತ್ತು. ಅದರ ಚಕ್ರಗಳು ಅವರ ದೇಹದ ಮೇಲೆ ಹರಿದು ಹೋಗಿದ್ದವು. ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಚಾಲಕ ಪರಾರಿಯಾಗಿದ್ದು, ಗುರ್ಜರ್ ಅವರ ಮಗ ಸಲ್ಲಿಸಿದ ದೂರಿನ ಆಧಾರದ ಮೇಲೆ ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಮತ್ತೊಂದು ಬೆಂಕಿ ದುರಂತ; ಹಗಲಲ್ಲೇ ಹೊತ್ತಿ ಉರಿದ ಖಾಸಗಿ ಬಸ್
ಈ ಎರಡು ಘಟನೆಗಳ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ನೆಟ್ಟಿಗರು ಕ್ರೇನ್ ಚಾಲಕರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.