ನಿದ್ರೆ ಔಷಧ ನೀಡಿ ಅತ್ಯಾಚಾರ, ವಿಡಿಯೊ ಮಾಡಿ ಬೆದರಿಕೆ: ಮೆಡಿಕಲ್ ಸ್ಟೋರ್ ಮಾಲೀಕನ ವಿರುದ್ಧ ಮಹಿಳೆ ದೂರು
ಮೆಡಿಕಲ್ ಸ್ಟೋರ್ ಮಾಲೀಕನೊಬ್ಬ ನಿದ್ರಾಜನಕ ನೀಡಿ ಅತ್ಯಾಚಾರ ಎಸಗಿ ಅದರ ವಿಡಿಯೊ ಮಾಡಿ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಆರೋಪಿಯು ಮಹಿಳೆಯೊಂದಿಗೆ ಮೂರು ತಿಂಗಳ ಕಾಲ ಸಂಬಂಧ ಹೊಂದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಉತ್ತರಪ್ರದೇಶ: ಮೂರು ತಿಂಗಳ ಕಾಲ ಮಹಿಳೆ ಮೇಲೆ ಅತ್ಯಾಚಾರ (Physical assault) ನಡೆಸಿ ಇದರ ವಿಡಿಯೊ (Video) ಮಾಡಿ ಬೆದರಿಕೆಯೊಡ್ಡುತ್ತಿದ್ದ ಮೆಡಿಕಲ್ ಸ್ಟೋರ್ (medical store) ಮಾಲೀಕನ ವಿರುದ್ಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ ಘಟನೆ ಉತ್ತರಪ್ರದೇಶದ (uttar pradesh) ಗೋರಖ್‌ಪುರದಲ್ಲಿ ನಡೆದಿದೆ. ಔಷಧ ತರಲೆಂದು ಹೋಗಿದ್ದ ಮಹಿಳೆಗೆ ನಿದ್ರಾಜನಕ ನೀಡಿ ಅತ್ಯಾಚಾರ ನಡೆಸಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡಿದರೆ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ. ಬಳಿಕ ಮೂರು ತಿಂಗಳ ಕಾಲ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಕೂಡ ತಿಳಿಸಿದ್ದಾರೆ.
ಖೋರಾಬಾರ್ ಪ್ರದೇಶದ ನಿವಾಸಿ ಮಹಿಳೆಯ ಪತಿ ದುಬೈಯಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅತ್ತೆ, ಮಾವ, ಮಕ್ಕಳೊಂದಿಗೆ ವಾಸವಾಗಿರುವ ಮಹಿಳೆಯು ಸೆಪ್ಟೆಂಬರ್ 19 ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಮಕ್ಕಳಿಗಾಗಿ ಔಷಧ ತರಲೆಂದು ಮಜ್ನು ಚೌರಾಹಾದಲ್ಲಿರುವ ಮಂಜು ಮೆಡಿಕಲ್ ಸ್ಟೋರ್‌ಗೆ ಹೋಗಿದ್ದರು.
ದೆವ್ವ ಹಿಡಿದಿದೆ ಎಂದು ಪತ್ನಿಯನ್ನು ಕಟ್ಟಿಗೆಯಿಂದ ಹೊಡೆದು ಕೊಂದ ಪಾಪಿ ಪತಿ!
ಇದ್ದಕ್ಕಿದ್ದಂತೆ ಮಹಿಳೆ ಅಸ್ವಸ್ಥಗೊಂಡಾಗ ಮೆಡಿಕಲ್ ಸ್ಟೋರ್ ಮಾಲೀಕ ಕಿಶುನ್ ಗುಪ್ತಾಗೆ ಮಹಿಳೆ ಮಾಹಿತಿ ನೀಡಿದ್ದಾಳೆ. ಆತ ಹೇಳಿದ ಔಷಧ ಕುಡಿದು ಮಲಗಿದ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ. ಮಹಿಳೆ ಎಚ್ಚರಗೊಂಡಾಗ ಏನೋ ತಪ್ಪಾಗಿದೆ ಎಂದು ಅರಿತು ಕಿಶುನ್ ಗುಪ್ತಾ ಬಳಿ ಕೇಳಿದಾಗ ರ ಆತ ಈ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ. ಇದರಿಂದ ಭಯಗೊಂಡ ಮಹಿಳೆ ಯಾರಿಗೂ ವಿಷಯವನ್ನು ತಿಳಿಸಲಿಲ್ಲ. ಆದರೆ
ಬಳಿಕ ಕರೆ ಮಾಡಿ ಪದೇ ಪದೇ ಮೆಡಿಕಲ್ ಸ್ಟೋರ್‌ಗೆ ಕರೆಸಿ ಅತ್ಯಾಚಾರ ನಡೆಸಿದನು. ಈ ಘಟನೆ ಮೂರು ತಿಂಗಳವರೆಗೆ ನಡೆದಿದೆ. ಆದರೆ ಬಳಿಕ ನಾನು ನಿರಾಕರಿಸಲು ಪ್ರಾರಂಭಿಸಿದೆ. ಇದರಿಂದ ಸಿಟ್ಟಾದ ಆತ ಮಹಿಳೆಯನ್ನು ನಿಂದಿಸಲು ಪ್ರಾರಂಭಿಸಿದನು. ಬಳಿಕ ಮಹಿಳೆ ಮಗಳ ಮೊಬೈಲ್ ತೆಗೆದುಕೊಂಡು ಮೆಡಿಕಲ್ ಸ್ಟೋರ್ ಗೆ ಹೋಗಿ ಆತ ಮಹಿಳೆಯೊಂದಿಗೆ ಬಲವಂತವಾಗಿ ದೈಹಿಕ ಸಂಬಂಧ ಮಾಡಿದ ವಿಡಿಯೊ ಮಾಡಿ ಅದನ್ನು ತಂದು ಸಾಕ್ಷಿ ಸಮೇತ ಖೋರಾಬರ್ ಪೊಲೀಸ್ ಠಾಣೆಗೆ ದೂರು ನೀಡಿದರು ಎಂದು ಖೋರಾಬರ್ ಠಾಣೆಯ ಉಸ್ತುವಾರಿ ಇತ್ಯಾನಂದ ಪಾಂಡೆ ತಿಳಿಸಿದ್ದಾರೆ.
ಡಿಸೆಂಬರ್ 21 ರಂದು ಮೆಡಿಕಲ್ ಸ್ಟೋರ್ ಮಾಲೀಕ ಕಿಶುನ್ ಗುಪ್ತಾ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.